ಸಂಡೂರು: ಕೊರೊನಾ ಸಂದರ್ಭದಲ್ಲಿ ರೋಗಿಗಳು ತಕ್ಷಣ ಆಸ್ಪತ್ರೆಗೆಸೇರಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ವಿಶೇಷವಾಹನದ ವ್ಯವಸ್ಥೆ ಕಲ್ಪಿಸಿರುವುದು ಉತ್ತಮ ಕೆಲಸ ಎಂದು ಡಾ|ರಾಮಶೆಟ್ಟಿ ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೋವಿಡ್ ಸೋಂಕಿತರಿಗೆ ಸಂಚಾರಿ ವಾಹನ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಡ ರೋಗಿಗಳು ಆಸ್ಪತ್ರೆಗೆ ಬರದೇ ತೊಂದರೆ ಅನುಭವಿಸುವಂತಹ ಸ್ಥಿತಿ ಇರುವಂತಹ ಇಂತಹ ಸಮಯದಲ್ಲಿ ಇಂತಹ ವ್ಯವಸ್ಥೆ ಎಲ್ಲ ಸಂಘ-ಸಂಸ್ಥೆಗಳು ಮಾಡುವ ಮೂಲಕ ಸರ್ಕಾರದ ಜೊತೆ ಕೈಜೋಡಿಸಬೇಕು. ಡಾ| ವೀರೇಂದ್ರ ಹೆಗ್ಗಡೆ ಅವರು ಕೊರೊನಾ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್, ರೈತರಿಗೆ,ಮಹಿಳೆಯರಿಗೆ ಅನೇಕ ರೀತಿಯಿಂದ ಸರ್ಕಾರ ಮಾಡುವ ರೀತಿಯಲ್ಲಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧಿಕಾರಿ ಮಂಜುನಾಥ ಮಾತನಾಡಿ, ಡಾ| ವೀರೇಂದ್ರ ಹೆಗ್ಗಡೆ ಅವರು ಬಳ್ಳಾರಿ ಜಿಲ್ಲೆಯಾದ್ಯಂತ ಒಟ್ಟು ರಾಜ್ಯದಲ್ಲಿ 350 ವಾಹನಗಳನ್ನು ಕೊರೊನಾ ರೋಗಿಗಳ ಸೇವೆಗೆ ಮೀಸಲಿಟ್ಟಿದ್ದು, ಅದರ ಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೇ ಎಲ್ಲರಿಗೂ ಲಸಿಕೆ ವಿತರಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆಗೆ ಕೈಜೋಡಿಸಿದ್ದು, ಪ್ರತಿ ತಾಲೂಕಿನಲ್ಲಿ 2 ವಾಹನ ನೀಡಿದ್ದಾರೆ.
ಈ ವಾಹನಗಳು ಗ್ರಾಮೀಣ ಪ್ರದೇಶದ ಸೋಂಕಿತರು ಆಸ್ಪತ್ರೆಗೆತೆರಳಲು ಅಥವಾ ಆಸ್ಪತ್ರೆಯಿಂದ ಹಿಂದಿರುಗಳು ಲಭ್ಯವಾಗಲಿವೆ.ಈ ಸೌಲಭ್ಯಗಳನ್ನು ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸದುಪಯೋಗ ಪಡೆದುಕೊಳ್ಳಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿಗಳಿಗೆ ಕರೆ ಮಾಡಿದರೆ ತಕ್ಷಣ ವ್ಯವಸ್ಥೆಮಾಡಲಾಗುವುದು ಎಂದರು.
ವೈದ್ಯರಾದ ಡಾ| ವೆಂಕಟಾಚಾರ್, ಡಾ| ಸತೀಶ್, ತಜ್ಞರಾದಕುಮಾರಸ್ವಾಮಿ, ಮಂಜುನಾಥ, ಬಸವರಾಜ, ಜಗದೀಶ್, ಮಹ್ಮದ್ ಉಪಸ್ಥಿತರಿದ್ದರು.