Advertisement

ಕೋವಿಡ್ -19 ಕಂಟಕ: ನೆರವಿನ ಹಸ್ತ; ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಕೋಟಿ ರೂ.

09:04 AM Apr 18, 2020 | mahesh |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಕೋವಿಡ್‌ ಚಿಕಿತ್ಸೆಗಾಗಿ ಪಿಎಂ ಕೇರ್‌ ನಿಧಿಗೆ 5 ಕೋಟಿ ರೂ. ನೀಡಿರುವುದಾಗಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌. ಎಚ್‌. ಮಂಜುನಾಥ್‌ ತಿಳಿಸಿದ್ದಾರೆ. ಡಾ| ಹೆಗ್ಗಡೆ ಅವರು ಶುಕ್ರವಾರ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದು, ಬಳಿಕ ಎಲ್ಲ ಸ್ವಸಹಾಯ ಸಂಘಗಳ ಸದಸ್ಯರು ಶಿಸ್ತನ್ನು ಕಾಪಾಡಿಕೊಂಡು ಸಾಮಾಜಿಕ ಅಂತರ ಕಾಪಾಡಬೇಕು. ಮನೆಯಲ್ಲಿರುವ ಹಿರಿಯರನ್ನು ಎಚ್ಚರಿಕೆಯಿಂದ ನೋಡಿಕೊಂಡು, ತನ್ಮೂಲಕ ಕೊರೊನಾ ಮಾರಿಯನ್ನು ದೇಶದಿಂದ ಹೊರದಬ್ಬ ಬೇಕೆಂದು ಕರೆ ನೀಡಿದ್ದಾರೆ.

Advertisement

ತೊಂದರೆಗೀಡಾದವರಿಗೆ ಸಹಾಯ
ಲಾಕ್‌ಡೌನ್‌ನಿಂದ ತೊಂದರೆಗೊಳಗಾಗಿರುವ ಕುಟುಂಬಗಳಿಗೆ ನೆರವಿನ ಹಸ್ತವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬಂದಿ ಅಲ್ಲಲ್ಲಿ
ಚಾಚುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಬೀದಿಬದಿಯ ಪ್ರಾಣಿಗಳಿಗೆ ಆಹಾರ, ಉಡುಪಿಯಲ್ಲಿ ಕೂಲಿ ಕಾರ್ಮಿಕರಿಗೆ ರಾತ್ರಿ ಊಟದ ವ್ಯವಸ್ಥೆ, ಬೆಂಗಳೂರಿನಲ್ಲಿ ಸರ್ವೇ ಕಾರ್ಯಕರ್ತರಿಗೆ ಮಧ್ಯಾಹ್ನ ಊಟ, ಹಲವೆಡೆ ಆಹಾರ ಸಾಮಗ್ರಿ ಒದಗಿಸುತ್ತಿದ್ದಾರೆ. ತೊಂದರೆಗೊಳಗಾದವರು ಸಹಾಯದ ಅಗತ್ಯವಿದ್ದಲ್ಲಿ ಸ್ಥಳೀಯ ಸೇವಾಪ್ರತಿನಿಧಿಯನ್ನು ಸಂಪರ್ಕಿಸಬಹುದಾಗಿದೆ.

ಸ್ವ ಉದ್ಯೋಗಕ್ಕೆ ಸಹಾಯ
ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಕುಶಲಕರ್ಮಿಗಳು ಗ್ರಾಮಗಳಿಗೆ ಮರಳುವ ಸಂದರ್ಭದಲ್ಲಿ ಸ್ವಉದ್ಯೋಗ ಮಾಡುವುದಾದಲ್ಲಿ ಅಗತ್ಯ ಬಂಡವಾಳ, ತುರ್ತುಯಂತ್ರ, ಮಾರುಕಟ್ಟೆ ಒದಗಿಸಲು ಯೋಜನೆಯು ಸಹಾಯ ಮಾಡುತ್ತಿದೆ ಎಂದು ಡಾ| ಮಂಜುನಾಥ್‌ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next