Advertisement

ರಾಜಕಾರಣದ ಅಜಾತಶತ್ರು ಧರ್ಮಸಿಂಗ್‌

12:14 PM Jul 28, 2017 | |

ಹರಪನಹಳ್ಳಿ: ಮಾಜಿ ಮುಖ್ಯಮಂತ್ರಿ ದಿ| ಎನ್‌.ಧರ್ಮಸಿಂಗ್‌ ಅವರು ಜಾತಿ ಮತ್ತು ಧರ್ಮನ್ನು ಮೀರಿ ಮಾನವೀಯ
ನೆಲೆಗಟ್ಟಿನಲ್ಲಿ ಎಲ್ಲರ ವಿಶ್ವಾಸ ಗಳಿಸಿಕೊಂಡು ರಾಜಕಾರಣದಲ್ಲಿ ಅಜಾತಶತ್ರು ಆಗಿದ್ದರು ಎಂದು ಶಾಸಕ ಎಂ.ಪಿ.ರವೀಂದ್ರ ಗಣಗಾನ ಮಾಡಿದರು.

Advertisement

ಪಟ್ಟಣದ ಶಾಸಕರ ನಿವಾಸದಲ್ಲಿ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರು ನಿಧನರಾದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಹಣ ಎಲ್ಲಾ ಸಂದರ್ಭದಲ್ಲಿ ಕೆಲಸ ಮಾಡುವುದಿಲ್ಲ ಎಂಬುದನ್ನು ಅವರು ಧರ್ಮಸಿಂಗ್‌ ರಾಜಕಾರಣದಲ್ಲಿ ತೋರಿಸಿಕೊಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಜೊತೆ ಸೇರಿ ಧರ್ಮಸಿಂಗ್‌ರವರು ಆರೋಗ್ಯಕರವಾಗಿ
ಪೈಪೋಟಿ ಮಾಡಿ ಸಂಘರ್ಷಕ್ಕೆ ಇಳಿಯದೇ ಉನ್ನತ ಸ್ಥಾನಕ್ಕೆ ತಲುಪಿದರು ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರಭಟ್‌ ಮಾತನಾಡಿ, ಒಬ್ಬ ರಾಜಕಾರಣಿ ಯಾವ ತರಹದ ರಾಜಕಾರಣ ಮಾಡಬೇಕು ಎಂಬುವುದನ್ನು ಧರ್ಮಸಿಂಗ್‌ ಅವರು ತೋರಿಸಿದ್ದಾರೆ. ಎಂದಿಗೂ ದ್ವೇಷದ ರಾಜಕೀಯ ಮಾಡಲಿಲ್ಲ, ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವಂತೆ ಧರ್ಮಸಿಂಗ್‌ರವರ ಜೀವನವಾಗಿದೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಕೊಡಿಹಳ್ಳಿ ಭೀಮಪ್ಪ, ಜಿಲ್ಲಾ ಕಾರ್ಯದರ್ಶಿ ಎಂ.ವಿ.ಆಂಜಿನಪ್ಪ, ಕಾಂಗ್ರೆಸ್‌ ಹಿರಿಯ ಮುಖಂಡ ಟಿ.ಎಚ್‌.
ಎಂ.ವೀರುಪಾಕ್ಷಯ್ಯ, ವೀರಶೆ„ವ ಮಹಾಸಭಾಧ್ಯಕ್ಷ ಎಂ.ರಾಜಶೇಖರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಲೂರು ಅಂಜಪ್ಪ, ವಕೀಲರಾದ ಡಿ.ರೆಹಮಾನ್‌ಸಾಬ್‌ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ, ವೆಂಕಟೇಶ್‌, ತಾಪಂ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಪ್ಪ, ಪುರಸಭೆ ಸದಸ್ಯ ಅರುಣಕುಮಾರ, ಯುವ ಕಾಂಗ್ರೆಸ್‌ ಅಧ್ಯಕ್ಷ ಪಿ.ಶಿವಕುಮಾರನಾಯ್ಕ, ಡಿ.ರಾಜಕುಮಾರ್‌, ಪಿ.ಪ್ರೇಮಕುಮಾರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರಿದ್ದರು. 

ಹೊನ್ನಾಳಿ: ಮಾಜಿ ಮುಖ್ಯಮಂತ್ರಿ ಎನ್‌.ಧರಂಸಿಂಗ್‌ ನಿಧನಕ್ಕೆ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಸಂತಾಪ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ಅವರೊಬ್ಬ ರಾಜಕೀಯ ಮುತ್ಸದ್ದಿಯಾಗಿದ್ದರು. ಎಲ್ಲಾ ಪಕ್ಷದವರು ಅವರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಹರಿಹರ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ನಿಧನಕ್ಕೆ ಮಾಜಿ ಸಚಿವ ಡಾ| ವೈ.ನಾಗಪ್ಪ, ಕಾಂಗ್ರೆಸ್‌ ಮುಖಂಡ ಎಸ್‌.ರಾಮಪ್ಪ, ಜಿಪಂ ಸದಸ್ಯೆ ಅರ್ಚನಾ ಬಸವರಾಜ್‌, ತಾಪಂ ಮಾಜಿ ಸದಸ್ಯ ಎಚ್‌. ಎಚ್‌.ಬಸವರಾಜ್‌, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಬಿ.ಬಸವರಾಜಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next