ಅವರು ಉಪಸಭಾಪತಿಯಾಗಿ ಧರ್ಮೇಗೌಡ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಇದಕ್ಕೂ ಮುನ್ನ ಆರ್.ಚೌಡರೆಡ್ಡಿ ತೂಪಲ್ಲಿ ಹಾಗೂ ಬಸವರಾಜ ಹೊರಟ್ಟಿ ಅವರು ಧರ್ಮೇ ಗೌಡರ ಹೆಸರನ್ನು ಸೂಚಿಸಿದರು. ಎನ್.ಅಪ್ಪಾಜಿಗೌಡ
ಪ್ರಸ್ತಾವನೆಯನ್ನು ಅನುಮೋದಿಸಿದರು.
Advertisement
ನಂತರ ಮಾತನಾಡಿದ ಸಭಾನಾಯಕಿ ಜಯಮಾಲಾ, ಉಪ ಸಭಾಪತಿಗಳ ಅವಿರೋಧ ಆಯ್ಕೆ ಸಂತಸ ತಂದಿದೆ. ನೂತನ ಉಪಸಭಾಪತಿಗಳು ರಾಜಧರ್ಮ ಪಾಲನೆ ಮಾಡಬೇಕು. ಸದನದಲ್ಲಿ ಧರ್ಮರಾಯನಂತೆ ಧರ್ಮ ಪಾಲನೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಇನ್ನು ಮುಂದೆ ಧರ್ಮರಾಯನ (ಧರ್ಮೇಗೌಡರು) ಮಾತನ್ನು ಅರ್ಜುನ (ಭೋಜೇಗೌಡ) ಕೇಳಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ಬಿಜೆಪಿಯ ಲೆಹರ್ ಸಿಂಗ್ ಮಾತನಾಡಿ, ಧರ್ಮರಾಯನ ಮಾತನ್ನು ದುರ್ಯೋಧನ ಕೇಳಬೇಕು. ಆದರೆ, ಇಲ್ಲಿ ದುರ್ಯೋಧನ ಯಾರು ಎಂಬುದನ್ನು ಹೇಳಬೇಕು ಎಂದು ನಗೆ ಮಾತು ತೇಲಿ ಬಿಟ್ಟರು.
ಡಿಸೋಜಾ, ಎಚ್ ಎನ್ ರಮೇಶ, ಅಪ್ಪಾಜಿಗೌಡ ಹಾಗೂ ಟಿ ಎ ಶರವಣ ಮಾತನಾಡಿದರು. ನನ್ನ ಆಯ್ಕೆ ಅನಿರೀಕ್ಷಿತ. ಕನಸಿನಲ್ಲಿಯೂ ಇದನ್ನು ಊಹೆ ಮಾಡಿರಲಿಲ್ಲ. ನಾನು ರಾಜಧರ್ಮಪಾಲನೆ ಮಾಡಲು ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯ. ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು.
● ಧರ್ಮೇಗೌಡ, ಉಪಸಭಾಪತಿ