Advertisement

ದುಃಖಕ್ಕೆ ಧರ್ಮವೇ ದಿವ್ಯ ಔಷಧ: ಘನಲಿಂಗಶ್ರೀ

04:37 PM Aug 30, 2018 | Team Udayavani |

ಬಸವಕಲ್ಯಾಣ: ಗವಿಮಠದ ಮೂಲ ಜಗದ್ಗುರುಗಳಾದ ಘನಲಿಂಗ ರುದ್ರಮುನಿಗಳು ಶ್ರೇಷ್ಠ ಶಿವಯೋಗ ಸಾಧಕರಾಗಿದ್ದರು ಎಂದು ತ್ರಿಪುರಾಂತ ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು
ಹೇಳಿದರು. 

Advertisement

ನಗರದ ಗವಿಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಗವಿಮಠ
ಟ್ರಸ್ಟ್‌, ಶ್ರೀ ಮದ್ವೀರಶೈವ ಸದೊಧನ ಸಂಸ್ಥೆ ತಾಲೂಕು ಘಟಕ, ವೀರಶೈಶ ಲಿಂಗಾಯತ ಸಂಘಟನಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವೀರಶೈವ ಲಿಂಗಾಯತ ಧರ್ಮ ಗ್ರಂಥವಾದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.

ದೀರ್ಘ‌ಕಾಲ ಯೋಗ ಸ್ಥಿತಿಯಲ್ಲಿ ಕುಳಿತಾಗ ಹಾವು ಮೊದಲಾದ ವಿಷ ಜಂತುಗಳು ಮೈಮೆಲೆ ಹರಿದಾಡಿದ್ದರೂ ವಿಚಲಿತಗೊಳ್ಳದೇ ಏಕಾಗ್ರತೆಯಲ್ಲಿ ತಪಸ್ಸು ಮಾಡುತ್ತಿದ್ದರು. ಇದರಿಂದಲೇ ರುದ್ರಮುನಿಗಳು ಘನಲಿಂಗ ರುದ್ರಮುನಿ ಎಂದು ಪ್ರಸಿದ್ಧರಾಗಿದ್ದಾರೆ ಎಂದು ನುಡಿದರು.

ಹಿಂದಿನ ಕಾಲದಲ್ಲಿ ಸತ್ಯಕ್ಕಾಗಿ ಶಿವನಿಗಾಗಿ ಬದುಕಿ ಪ್ರಾಣಗೈದವರು ಅನೇಕರಿದ್ದಾರೆ. ಆದರೆ ಈಗ ಸತ್ಯಕ್ಕಾಗಿ ಹಾಗೂ ಶಿವನಿಗಾಗಿ ಬದುಕುವವರು ಕಡಿಮೆಯಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಸ್ಥೆ ತಾಲೂಕು ಘಟಕದ ಅಧ್ಯಕ್ಷ ನಿವೃತ್ತ ಕೃಷಿ ಅಧಿಕಾರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಬಸವಂತಪ್ಪ ಲವಾರೆ ಮಾತನಾಡಿ, ಜಗದ್ಗುರು ಘನಲಿಂಗರಲ್ಲಿ ಅಪಾರ ಶ್ರದ್ಧಾ ಭಕ್ತಿ ಉಳ್ಳವರು ಗುರುವಿನ ಅಮೂಲ್ಯ ಸೇವೆ ಸಲ್ಲಿಸಬೇಕು
ಎಂಬ ಉದ್ದೇಶದಿಂದ ಲಕ್ಷಾಂತರ ರೂ. ಖರ್ಚು ಮಾಡಿ ಗವಿಮಠದ ಗುರುವೆ ಎಂಬ ಧ್ವನಿ ಸುರುಳಿ ಸಿಡಿ ಮಾಡಲಾಗಿದೆ ಎಂದು ಹೇಳಿದರು.

Advertisement

ಖ್ಯಾತ ಮಕ್ಕಳ ತಜ್ಞ ಡಾ| ಜಿ.ಎಸ್‌. ಭುರಾಳೆ ಮಾತನಾಡಿ, ಶ್ರೀ ಅಭಿನವ ಗುರುಗಳು ಶ್ರಾವಣ ಮಾಸದಲ್ಲಿ ಗವಿಮಠದಲ್ಲಿ ಧರ್ಮಮಾರ್ಗ ಬೋಧಿಸುವ ಶ್ರೇಷ್ಠ ಕಾರ್ಯ ಮಾಡುತ್ತ ಭಕ್ತರದಲ್ಲಿ ಜಾಗೃತಿ ಮುಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಪ್ರೊ| ಸೂರ್ಯಕಾಂತ ಶೀಲವಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಲ್ಲಿಕಾರ್ಜುನ ಜಾಫರ್‌ ವಾಡಿ,
ಟ್ರಸ್ಟ್‌ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ಬಸವೇಶ್ವರ ಬೆರಳಚ್ಚು ಸಂಸ್ಥೆ ಪ್ರಾಚಾರ್ಯ ಎ.ಜಿ. ಪಾಟೀಲ, ಪ್ರೊ| ರುದ್ರೇಶ್ವರ ಸ್ವಾಮಿ ಗೋರ್ಟಾ ಇದ್ದರು. ಪ್ರಭುಲಿಂಗಯ್ಯ ಟಂಕಸಾಲಿಮಠ ನಿರೂಪಿಸಿದರು. ಕಾಶಿನಾಥಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next