Advertisement

22 ಪಟ್ಟಣಗಳಲ್ಲಿ ಯುಜಿಡಿ ಕಾಮಗಾರಿ ಚಾಲ್ತಿ

11:19 AM Jan 30, 2019 | Team Udayavani |

ಧಾರವಾಡ: ಬೆಳಗಾವಿ ಕಂದಾಯ ವಲಯದಲ್ಲಿಯ ಒಟ್ಟು 99 ಪಟ್ಟಣಗಳಲ್ಲಿ 12 ಪಟ್ಟಣಗಳಲ್ಲಿ ಪೂರ್ಣ ಪ್ರಮಾಣ ಮತ್ತು 2 ಪಟ್ಟಣಗಳಲ್ಲಿ ಭಾಗಶಃ ಒಳಚರಂಡಿ ವ್ಯವಸ್ಥೆ ಇದ್ದು, 22 ಪಟ್ಟಣಗಳಲ್ಲಿ ಯೋಜನಾ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಯಶವಂತರಾಯಗೌಡ ವಿ. ಪಾಟೀಲ ಹೇಳಿದರು.

Advertisement

ಬೆಳಗಾವಿ ಕಂದಾಯ ವಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುತ್ತಿರುವ ನೀರು ಸರಬರಾಜು ಮತ್ತು ಒಳಚರಂಡಿ ಯೋಜನಾ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಅನುದಾನ 347.72 ಕೋಟಿಗಳಲ್ಲಿ 6 ನೀರು ಸರಬರಾಜು ಮತ್ತು 319.24 ಕೋಟಿಗಳಲ್ಲಿ 10 ಒಳಚರಂಡಿ ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಅನುದಾನ 446.94 ಕೋಟಿಗಳಲ್ಲಿ 7 ನೀರು ಸರಬರಾಜು, 609.28 ಕೋಟಿಗಳಲ್ಲಿ 14 ಒಳಚರಂಡಿ ಯೋಜನಾ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದರು.

ಬೆಳಗಾವಿ ಕಂದಾಯ ವಲಯದಲ್ಲಿ 3 ಮಹಾನಗರ ಪಾಲಿಕೆಗಳು, 13 ನಗರಸಭೆಗಳು, 42 ಪುರಸಭೆಗಳು ಮತ್ತು 41 ಪಪಂಗಳು ಸೇರಿ ಒಟ್ಟು 99 ಸ್ಥಳೀಯ ಸಂಸ್ಥೆಗಳಿವೆ. ಈ ಪಟ್ಟಣಗಳಲ್ಲಿ 15 ವಿವಿಧ ನದಿಗಳಿಂದ 55 ಪಟ್ಟಣಗಳಿಗೆ, 5 ಅಣೆಕಟ್ಟೆಗಳಿಂದ 22 ಪಟ್ಟಣಗಳು, 3 ಕೆರೆಗಳಿಂದ 3 ಪಟ್ಟಣಗಳು ಮತ್ತು 5 ಕಾಲುವೆಗಳಿಂದ 6 ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. 13 ವಿವಿಧ ಪಟ್ಟಣಗಳು ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನೇ ಆಶ್ರಯಿಸಿದ್ದು, ಇಲ್ಲಿ ಶಾಶ್ವತ ನೀರಿನ ಮೂಲದಿಂದ ನೀರು ಸರಬರಾಜು ಇರುವುದಿಲ್ಲ ಎಂದು ಅವರು ತಿಳಿಸಿದರು. ಜಲಮಂಡಳಿಯ ಮುಖ್ಯ ಅಭಿಯಂತ ಡಿ.ಎಲ್‌.ರಾಜು ಮಾತನಾಡಿ, ರಾಜ್ಯ ಸರ್ಕಾರದ 278.74 ಕೋಟಿ ಅನುದಾನದಲ್ಲಿ 2 ನೀರು ಸರಬರಾಜು ಮತ್ತು 168.82 ಕೋಟಿಗಳಲ್ಲಿ 5 ಒಳಚರಂಡಿ ಯೋಜನೆಗಳಿಗೆ ಟೆಂಡರ್‌ ಕರೆಯಲಾಗಿದೆ. 122.76 ಕೋಟಿ ಮೊತ್ತದಲ್ಲಿ ಹೊನ್ನಾವರ ಪಟ್ಟಣ, 158.62 ಕೋಟಿ ವೆಚ್ಚದಲ್ಲಿ ಕಾರವಾರ, ಅಂಕೋಲಾ ಪಟ್ಟಣಗಳಿಗೆ ನೀರು ಸರಬರಾಜು ಒದಗಿಸಲು ಯೋಜನೆಗಳು ಅನುಮೋದನೆಯಾಗಿದ್ದು, ಮುಂದಿನ ದಿನಗಳಲ್ಲಿ ಟೆಂಡರ್‌ ಕರೆಯಲಾಗುವುದು ಎಂದರು.

ಬೆಳಗಾವಿ ಕಂದಾಯ ವಲಯ ವ್ಯಾಪ್ತಿಯಲ್ಲಿ 854.81 ಕೋಟಿ ಮೊತ್ತದಲ್ಲಿ 13 ನೀರು ಸರಬರಾಜು ಯೋಜನೆಗಳು ಹಾಗೂ 4 ಒಳಚರಂಡಿ ಯೋಜನೆಗಳು ಕೈಗೊಳ್ಳಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 754.77 ಕೋಟಿಗಳ 2 ನೀರು ಸರಬರಾಜು ಯೋಜನೆ, 7 ಒಳಚರಂಡಿ ಯೋಜನೆಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧಪಡಿಸಲಾಗುತ್ತಿದೆ ಎಂದರು.

Advertisement

ಜಲಮಂಡಳಿಯ ಧಾರವಾಡ ಮುಖ್ಯ ಅಭಿಯಂತರ ವ್ಯಾಪ್ತಿಯ ಕಾರ್ಯಪಾಲಕ ಅಭಿಯಂತರು, ಸಹಾಯಕ ಕಾರ್ಯಪಾಲಕ ಅಭಿಯಂತರು, ಕಾಮಗಾರಿ ನಿರ್ವಹಿಸುತ್ತಿರುವ ವಿವಿಧ ಗುತ್ತಿಗೆದಾರರು ಸಭೆಯಲ್ಲಿದ್ದರು.

ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಗಾಗಿ 79.90 ಕೋಟಿ ರೂ. ಮೊತ್ತ ನಿಗದಿಗೊಳಿಸಿ, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಗುತ್ತಿಗೆದಾರರನ್ನು ನೇಮಿಸಿದ್ದು, ಕಾಮಗಾರಿ ಶೀಘ್ರ ಆರಂಭಿಸಲಾಗುವುದು.• ಯಶವಂತರಾಯಗೌಡ ವಿ. ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next