ಧಾರವಾಡ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಸಕ್ತ ವರ್ಷ 900 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಈಶಪ್ಪ ಭೂತೆ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಕೈಗೊಂಡು ಮಾಹಿತಿ ನೀಡಿದ ಅವರು, 2018ರಲ್ಲಿ 3300 ಪ್ರಕರಣಗಳಲ್ಲಿ 20 ಕೋಟಿ ರೂ. ಪರಿಹಾರ ವಿತರಿಸಲಾಗಿತ್ತು. ಈ ವರ್ಷ 900 ವ್ಯಾಜ್ಯಗಳನ್ನು ಇತ್ಯರ್ಥ ಮಾಡಿ 8 ಕೋಟಿ ರೂ. ಮೊತ್ತವನ್ನು ಫಲಾನುಭವಿಗಳಿಗೆ ಚೆಕ್ ಮೂಲಕ ವಿತರಿಸಲಾಗಿದೆ ಎಂದರು.
ಈ ವರ್ಷದ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ಸಮಸ್ಯೆ ಇರುವ ದಂಪತಿಗಳ ವಿವಿಧ 6 ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗಿದೆ. ಕುಟುಂಬದಲ್ಲಿ ಸಣ್ಣ ಸಮಸ್ಯೆ ಉಂಟಾದಾಗ ದಂಪತಿಗಳು ನ್ಯಾಯಾಲಯದ ಮೊರೆ ಬರುತ್ತಾರೆ. ಹೀಗಾಗಿ ಅವರಿಗೆ ಸೂಕ್ತ ತಿಳಿವಳಿಕೆ ನೀಡುವ ಮೂಲಕ ರಾಜಿ ಮಾಡಿಸಿದರೆ ನೆಮ್ಮದಿ ಬದುಕು ಸಾಗಿಸುತ್ತಾರೆ ಎಂದು ಹೇಳಿದರು. ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳಲ್ಲಿ ರಾಜಿಯಾದ ಹೇಮಾ ಕೌಸರ್ ಗಂಡ ನಿಜಾಮುದ್ಧೀನ್, ಆಫ್ರಿನ್ ಗಂಡ ಜಾವೇದ, ಕವಿತಾ ಕಡೇಮನಿ ಗಂಡ ಸಂತೋಷ, ಸ್ಮಿತಾ ಶಿಂಧೆ ಗಂಡ ಚೇತನ ಶಿಂಧೆ ಮತ್ತು ಸುಕುಮಾರನ ಹೆಂಡತಿ ಸುನಿತಾ ದಂಪತಿಯ ವಿವಾಹ ವಿಚ್ಛೇದನ, ಕೆಲವು ಡಿ.ವಿ. ಆ್ಯಕ್ಟ್ ಪ್ರಕರಣಗಳಲ್ಲಿ ರಾಜಿ ಸಂಧಾನವಾಗಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಯಿತು. ದಂಪತಿಗಳನ್ನು ಜೊತೆಗೂಡಿಸಿ ನ್ಯಾಯಾ ಧೀಶರು ಶುಭ ಹಾರೈಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ನ್ಯಾಯಾಧೀಶರಾದ ಗಂಗಾಧರ, ಶ್ಯಾಮಪ್ರಸಾದ, ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾ ಧೀಶರಾದ ಸಾವಿತ್ರಿ ಕುಜ್ಜಿ, ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿಣ್ಣನ್ನವರ, ನಗರ ನ್ಯಾಯಾ ಧೀಶರಾದ ಇಂದಿರಾ ಚಟ್ಟಿಯಾರ, ಮಮತಾ, ಸುಜಾತಾ, ವಿಜಯಲಕ್ಷ್ಮೀ ಘಾನಾಪುರ, ಕುರಣೆಕಾಂತ್, ಪರಿಮಳಾ ತುಬಾಕಿ ಇನ್ನಿತರರಿದ್ದರು.