Advertisement

ಐಐಟಿ-ಐಐಐಟಿಗೆ ಡಿಸಿ ಭೇಟಿ : ಸಮಯಮಿತಿಯಲ್ಲಿ ನಿರ್ಮಾಣ ಕೆಲಸ ಮುಗಿಸಲು ನಿತೇಶ ಸೂಚನೆ

02:25 PM Sep 27, 2020 | sudhir |

ಧಾರವಾಡ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಹಾಗೂ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ ನೀಡಿ ರಸ್ತೆ, ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಕಾಮಗಾರಿಗಳ ನಿರ್ಮಾಣ ಪ್ರಗತಿ ಪರಿಶೀಲನೆ ನಡೆಸಿದರು.

Advertisement

ಐಐಟಿಯ ನೂತನ ಕ್ಯಾಂಪಸ್‌ ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಹಾಗೂ ಡಾಂಬರೀಕರಣ, ನೂತನ ಕಟ್ಟಡ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲು ಮತ್ತು ಅರಣ್ಯ ಇಲಾಖೆಗೆ ಸಂಬಂ ಧಿಸಿದ ಜಾಗವನ್ನು ಸರ್ವೇ ಮಾಡಿ ಐಐಟಿ ನೂತನ ಕ್ಯಾಂಪಸ್‌ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಧಾರವಾಡ ತಾಲೂಕಿನಲ್ಲಿ ಐಐಐಟಿಯ ಶಾಶ್ವತ ಶಿಬಿರಕ್ಕೆ ರಸ್ತೆ ಕಾಮಗಾರಿಯು 720 ಲಕ್ಷ ರೂ.ಗೆ ಸರ್ಕಾರದಿಂದ ಅನುಮೋದನೆಯಾಗಿದ್ದು, ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ.

ರಸ್ತೆ ಕಾಮಗಾರಿಯನ್ನು ಪರೀಕ್ಷಿಸಲಾಗಿ ಇಟಿಗಟ್ಟಿ ಗ್ರಾಮದಲ್ಲಿ ಕಾಂಕ್ರೀಟ್‌ ಗಟಾರ ಕಾಮಗಾರಿ ಹಾಗೂ ಸಿಡಿಗಳ ಕಾಮಗಾರಿ ಪೂರ್ಣಗೊಂಡಿದ್ದು, ಫಾರ್ಮೇಶನ್‌ ಕಾಮಗಾರಿಯು ಪ್ರಗತಿಯಲ್ಲಿದೆ. ಗುಣ್ಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಕಾಮಗಾರಿಗಳ ವೀಕ್ಷಣೆಯ ನಂತರ ಜಿಲ್ಲಾಧಿಕಾರಿಗಳು ಪ್ರಸ್ತುತ ಕಾರ್ಯನಿರ್ವಹಿಸುವ ವಾಲ್ಮೀ ಕಟ್ಟಡದ ಐಐಟಿ ಕೇಂದ್ರಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಮತ್ತು ಆಡಳಿತ ಮಂಡಳಿ ಸದಸ್ಯರೊಂದಿಗೆ ಕಾಮಗಾರಿಗಳ ಪ್ರಗತಿ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಚರ್ಚಿಸಿದರು.

Advertisement

ಸಭೆಯಲ್ಲಿ ಐಐಟಿ ಧಾರವಾಡದ ನಿರ್ದೇಶಕ ಪ್ರೊ| ಪಿ. ಶೇಷು, ಡೀನ್‌ರಾದ ಪ್ರೊ| ನಾಗೇಶ್‌ ಆರ್‌.ಐಯ್ಯರ್‌, ಪ್ರೊ|ಎಸ್‌. ಆರ್‌.ಎಮ್‌. ಪ್ರಸನ್ನ, ಪ್ರೊ|ಎಸ್‌.ವಿ. ಪ್ರಭು, ಪ್ರೊ| ಬಿ.ಎಲ್‌. ತೆಂಬೆ ಮತ್ತು ರಘು ಬಾಬು, ಐಐಐಟಿ ಕುಲಸಚಿವ ಬಸವರಾಜಪ್ಪ ಎಸ್‌., ಉಪವಿಭಾಗಾಧಿಕಾರಿ ಡಾ| ಗೋಪಾಲಕೃಷ್ಣ ಜಿ., ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಕ ಅಭಿಯಂತ ಎಸ್‌.ಬಿ.ಚೌಡನ್ನವರ, ತಹಶೀಲ್ದಾರ್‌ ಸಂತೋಷ ಬಿರಾದಾರ, ತಾಲೂಕಾ ಎಡಿಎಲ್‌ಆರ್‌ ಕೆ.ಜಿ.ಲಟ್ಟಿ, ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next