Advertisement

ಧಾರವಾಡ ಕೋವಿಡ್ ಸೋಂಕಿಗೆ ಇಬ್ಬರು ಬಲಿ! ಜಿಲ್ಲೆಯಲ್ಲಿ 183 ಹೊಸ ಪ್ರಕರಣ ಪತ್ತೆ

10:44 PM Jul 23, 2020 | sudhir |

ಧಾರವಾಡ :ಜಿಲ್ಲೆಯಲ್ಲಿ ಗುರುವಾರ ಮತ್ತೆ 183 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಇದರ ಮಧ್ಯೆ ಸೋಂಕಿತರ ಪೈಕಿ ಮತ್ತಿಬ್ಬರು ಕೋವಿಡ್ ಗೆ ಬಲಿಯಾಗಿ ಸಾವಿನ ಸಂಖ್ಯೆ 80 ಕ್ಕೆ ಏರಿಕೆಯಾಗಿದೆ.

Advertisement

ಕೋವಿಡ್ ಪಾಸಿಟಿವ್ ಹೊಂದಿದ್ದ ಇಬ್ಬರು ವ್ಯಕ್ತಿಗಳು ಕಳೆದ ಎರಡು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯ ಬುದ್ಧ ವಿಹಾರದ ಕುಲಕರ್ಣಿ ಹಕ್ಕಲ ನಿವಾಸಿಯಾದ 52 ವರ್ಷದ ಮಹಿಳೆ ಹಾಗೂ ಹಳೇ ಹುಬ್ಬಳ್ಳಿಯ ಸದರಸೋಫಾ ನಿವಾಸಿಯಾದ 53 ವರ್ಷದ ಪುರುಷ ಮೃತಪಟ್ಟಿದ್ದು, ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಮತ್ತೆ 183 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2662 ಕ್ಕೆ ಏರಿಕೆಯಾಗಿದೆ‌. ಇದರ ಜೊತೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಸಾವಿರ ಗಡಿ ದಾಟಿದ್ದು, ಇದುವರೆಗೆ 1028 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಇದೀಗ 1554 ಪ್ರಕರಣಗಳು ಸಕ್ರಿಯವಾಗಿದ್ದು, 33 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 80 ಜನ ಮೃತಪಟ್ಟಿದ್ದಾರೆ ಎಂದು ಡಿಸಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಇನ್ನೂ ಗುರುವಾರ ಪತ್ತೆಯಾದ 183 ಪ್ರಕರಣಗಳ ಸ್ಥಳಗಳ ವಿವರ ಇಂತಿದೆ.

ಧಾರವಾಡ ತಾಲೂಕು
ಹಾವೇರಿಪೇಟ,ಮಾಳಾಪುರ, ಸಾರಸ್ವತಪುರ, ಗಾಂಧಿನಗರ, ಮಣಿಕಂಠ ನಗರ ಮೊದಲ ಕ್ರಾಸ್, ಮಾಳಮಡ್ಡಿ 2 ನೇ ಕ್ರಾಸ್, ಲೈನ್ ಬಜಾರ್, ಶಕ್ತಿ ಕಾಲನಿ, ಎಸ್ ಡಿ ಎಂ ಆಸ್ಪತ್ರೆ ಅವರಣ, ಹೊಸಯಲ್ಲಾಪುರ ಪಾರ್ಶ್ವನಾಥ ಕಾಲನಿ, ನೆಹರು ನಗರ, ಮರಾಠ ಕಾಲನಿ, ರಾಜ ನಗರ ಮೊದಲ ಕ್ರಾಸ್, ಸೋನಾಪುರ ಮೊದಲ ಮತ್ತು ಎರಡನೇ ಕ್ರಾಸ್, ವಿಜಯಾನಂದ ನಗರ ಭಾಗ 2 , ಮದಿಹಾಳ ರಜಪೂತ ಓಣಿ, ಸೈದಾಪುರ ಹೊಸ ಓಣಿ, ನಿಜಾಮುದ್ದೀನ ಕಾಲನಿ ನಾಲ್ಕನೇ ಕ್ರಾಸ್, ಪೊಲೀಸ್ ಹೆಡ್ ಕ್ವಾರ್ಟರ್ಸ್, ಕುರುಬಗಟ್ಟಿ ಗ್ರಾಮದ ಬಸವೇಶ್ವರ ಓಣಿ, ಶುಕ್ರವಾರಪೇಟೆ ಜೋಷಿಗಲ್ಲಿ, ಮುರುಘರಾಜೇಂದ್ರ ನಗರ, ಸತ್ತೂರ ರಾಜಾಜಿ ನಗರ, ಮೆಹಬೂಬ್ ನಗರ, ಸಾಧನಕೇರಿ ಮೂರನೇ ಕ್ರಾಸ್, ರಾಧಾಕೃಷ್ಣ ನಗರ, ಕುಮಾರೇಶ್ವರ ನಗರ,‌ಹನುಮಂತದೇವರ ಗುಡಿ ಓಣಿ ಕಾಮನಕಟ್ಟಿ, ರಜತಗಿರಿ,ನವೋದಯ ನಗರ,ಸಂಗೊಳ್ಳಿ ರಾಯಣ್ಣ ನಗರ, ಸಂತೋಷ ನಗರ, ಮನಕಿಲ್ಲಾ, ರಾಮನಗರ ಉರ್ದು ಶಾಲೆ ಹತ್ತಿರ, ಕಿಲ್ಲಾ, ಹತ್ತಿಕೊಳ್ಳ ಜಾಂಬವಂತ ನಗರ, ಮೆಹಬೂಬ್ ನಗರ,ಮುಗದ ಗ್ರಾಮ, ಓಂ ನಗರ, ಗರಗ ಗ್ರಾಮ, ದುರ್ಗಾದೇವಿ ಗುಡಿ ಹತ್ತಿರ, ಶ್ರೀನಗರ, ಹಳಿಯಾಳ ನಾಕಾ ದೂರದರ್ಶನ ಕೇಂದ್ರ ಹತ್ತಿರ, ಕರಡಿಗುಡ್ಡ ಗ್ರಾಮ, ಮುರುಘಾಮಠ , ಮದಿಹಾಳ ಮಾನೆ ಪ್ಲಾಟ್, ಕೆಸಿಸಿ ಬ್ಯಾಂಕ್ ಹತ್ತಿರ, ರಾಮನಗರ ಮೊದಲನೇ ಕ್ರಾಸ್, ನಗರ ಪೊಲೀಸ್ ಠಾಣೆ, ಮಣಿಕಂಠ ನಗರ, ಹತ್ತಿಕೊಳ್ಳ, ಕೆ ಹೆಚ್ ಬಿ ಕಾಲನಿ, ಕೊರವರ ಓಣಿ, ಕಮಲಾಪುರ, ಶಿರಡಿನಗರ, ಸತ್ತೂರ ವನಸಿರಿ ನಗರ,

Advertisement

ಹುಬ್ಬಳ್ಳಿ ತಾಲೂಕು
ಕಾರವಾರ ರಸ್ತೆಯ ಪೊಲೀಸ್ ಹೆಡ್ ಕ್ವಾರ್ಟರ್ಸ್, ಸಿದ್ಧಾರೂಢ ಮಠ ಬಾಕಣಾ ಲೇಔಟ್, ಆದರ್ಶನಗರ, ಸಿಂಪಿಗಲ್ಲಿ,ಮಂಟೂರ ರಸ್ತೆ ಕೃಪಾನಗರ, ಕೇಶ್ವಾಪುರ ಮುದುಗಲ್ ಲೇಔಟ್, ಶೆಟ್ಟರ್ ಲೇಔಟ್, ಅರವಿಂದ ನಗರ, ಬಸವೇಶ್ವರ ನಗರ,ನವೋದಯ ಸೊಸೈಟಿ, ತೊರವಿಗಲ್ಲಿ, ನಾಗಶೆಟ್ಟಿಕೊಪ್ಪ, ನೂರಾನಿ ಪ್ಲಾಟ್, ಕುಲಕರ್ಣಿ ಹಕ್ಕಲ ಮೂರನೇ ಕ್ರಾಸ್, ಮಯೂರಿ ಎಸ್ಟೇಟ್, ಈಶ್ವರ ನಗರ,ಗಣೇಶಪೇಟೆ, ಭೈರಿದೇವರಕೊಪ್ಪ, ಬಾಕಳೆ ಗಲ್ಲಿ, ವಿನಾಯಕ ನಗರ, ದೇಶಪಾಂಡೆ ನಗರ, ಅಕ್ಷಯ ಪಾರ್ಕ್, ಗೋಕುಲ ರಸ್ತೆ, ಜಯಪ್ರಕಾಶ್ ನಗರ, ಅಯೋಧ್ಯಾ ನಗರ,ಅಕ್ಷಯ ಕಾಲನಿ ಆರ್ ಎಲ್ ನಗರ, ಕಲ್ಯಾಣ ನಗರ ಚೇತನಾ ಕಾಲನಿ ಹತ್ತಿರ, ಹೆಗ್ಗೇರಿ ನೇತಾಜಿ ನಗರ, ಅಮರಗೋಳ ಸರ್ಕಾರಿ ಪ್ರೌಢಶಾಲೆ ಹತ್ತಿರ, ನವನಗರ 8 ನೇ ಕ್ರಾಸ್, ಹೆಗ್ಗೇರಿ ದೇವರಾಜ ನಗರ, ಕೋಟಿಲಿಂಗನಗರ, ಅಮರಗೋಳ ಫ್ಲೂರಾ ಪಾರ್ಕ್, ಮಂಜುನಾಥ ನಗರ , ತಾರಿಹಾರ ರಸ್ತೆ ರಾಮನಗರ, ರಾಜಧಾನಿ ಕಾಲನಿ ಏಳನೇ ಕ್ರಾಸ್, ಯಲ್ಲಾಪುರ ಓಣಿ,ಚಾಲುಕ್ಯ ನಗರ,ಸುಚಿರಾಯು ಆಸ್ಪತ್ರೆ, ಸೋನಿಯಾಗಾಂಧಿ ನಗರ, ಕುಸುಗಲ್ ರಸ್ತೆ ಬೆಳವಂಕಿ ಕಾಲನಿ ,ವಿದ್ಯಾ ನಗರ ರೋಜ್ ಅಪಾರ್ಟ್‌ಮೆಂಟ್, ತಬೀಬ್ ಲ್ಯಾಂಡ್, ರೇಣುಕಾ ನಗರ ಮೂರನೇ ಕ್ರಾಸ್, ಸುಳ್ಳ ರಸ್ತೆ ಬಸವೇಶ್ವರ ಪಾರ್ಕ್, ಬಿಡನಾಳ, ಬೆಂಗೇರಿ, ವಿಶಾಲನಗರ,ಆರ್. ಬಿ.ಪಾಟೀಲ ಆಸ್ಪತ್ರೆ, ಗಣೇಶಪೇಟೆ, ಅಕ್ಷಯ ಕಾಲನಿ ಮೊದಲನೇ ಹಂತ, ಗುರುನಾಥ ನಗರ, ಆನಂದನಗರ, ಅಶೋಕ ನಗರ,ಕಸಬಾಪೇಟ ಪೊಲೀಸ್ ಠಾಣೆ, ಮಂಗಳ ಓಣಿ, ಅಕ್ಕಸಾಲಿಗರ ಓಣಿ, ಅರಳಿಕಟ್ಟಿ ಓಣಿ, ಸುಳ್ಳ ರಸ್ತೆ ಬಾಲಾಜಿ ನಗರ, ಹೆಗ್ಗೇರಿ ಕೆ ಹೆಚ್ ಬಿ ಕಾಲನಿ, ಮಗಜಿಕೊಂಡಿ ಲೇಔಟ್, ಗೋಪನಕೊಪ್ಪ, ಹಳೆಹುಬ್ಬಳ್ಳಿ, ಶಾಂತಿನಗರ,ಅಕ್ಷಯ ಕಾಲನಿ, ಸಿದ್ಧಾರೂಢ ಮಠ ಹತ್ತಿರ ಅಫಾನ್ ಲೇಔಟ್, ಮಹಾವೀರ ಓಣಿ, ನೇಕಾರನಗರ ಗಣೇಶ ಕಾಲನಿ , ಅಲ್ತಾಫ್ ನಗರ.

ಕುಂದಗೋಳ ತಾಲೂಕು
ಕುಂದಗೋಳ ಅಜ್ಜನ ಬಾವಿ ಓಣಿ, ಕಮಡೊಳ್ಳಿ,ಹರ್ಲಾಪುರ ಗ್ರಾಮದ ಮುಕ್ತಿಮಂದಿರ ರಸ್ತೆ.

ಕಲಘಟಗಿ ತಾಲೂಕು : ಮಿಶ್ರಿಕೋಟಿ ಗ್ರಾಮ

ನವಲಗುಂದ ತಾಲೂಕು : ನವಲಗುಂದ ಪಟ್ಟಣ,

ಗದಗ ಬೆಟಗೇರಿಯ ಗಾಂಧಿನಗರ,ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಧಾರವಾಡದ ಉಪನಗರ ಪೊಲೀಸ್ ಠಾಣೆಯ ಎಎಸ್ ಐ ಹಾಗೂ ಮುಖ್ಯ ಪೇದೆಯೊಬ್ಬರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದರಿಂದಾಗಿ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ ಇಬ್ಬರು ಪೊಲೀಸರು ತಪಾಸಣೆಗೆ ಮುಂದಾಗಿದ್ದರೆ ಈಗಾಗಲೇ ಹೋಂ ಕ್ವಾರಂಟಿನ್ ನಲ್ಲಿ ಇಬ್ಬರು ಪೊಲೀಸರು ಇದ್ದಾರೆ. ಈ ಹಿನ್ನೆಲೆಯಲ್ಲಿ ಉಪನಗರ ಪೊಲೀಸ್ ಠಾಣೆಯನ್ನು ಗುರುವಾರ ಸೀಲ್ ಡೌನ್ ಮಾಡಲಾಗಿದೆ. ಇದರಿಂದಾಗಿ ಪೊಲೀಸರು ಹೊರಗಿನಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಿ ನಂತರ ಇಡೀ ಠಾಣೆಯನ್ನು ಸ್ಯಾನಿಟೈಜೇಶನ್ ಮಾಡಲಾಗುತ್ತದೆ‌. ಈ ಹಿಂದೆ ಕೂಡ ಮುಖ್ಯ ಪೇದೆ ಹಾಗೂ ಪೇದೆಯೊಬ್ಬರಿಗೆ ಕರೋನಾ ಸೋಂಕು ತಗುಲಿತ್ತು. ಈ ಪೈಕಿ ಒಬ್ಬರು ಗುಣಮುಖರಾಗಿ ಮನೆಗೆ ಮರಳಿದ್ದರೆ, ಇನ್ನೊಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಈಗ ಧಾರವಾಡದ ಉಪನಗರ ಪೊಲೀಸ್ ಠಾಣೆಯ ನಾಲ್ವರು ಪೊಲೀಸರಿಗೆ ತಗುಲಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next