Advertisement

ಗುರುವಿನ ಮಹತ್ವ ತಿಳಿದು ನಡೆಯಲು ಸಲಹೆ

05:31 PM Nov 29, 2018 | |

ಧಾರವಾಡ: ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸಂಸ್ಥೆ ವತಿಯಿಂದ ಡಾ| ಆರ್‌ .ಬಾಲಸುಬ್ರಮಣ್ಯಂ ಅವರ ರಚನೆಯ ‘ವಾಯ್ಸ ಪ್ರಾಮ್‌ ದಿ ಗ್ರಾಸರೂಟ್ಸ್‌’ ಪುಸ್ತಕ ಬಿಡುಗಡೆ ಸಮಾರಂಭ ನಗರದ ರಂಗಾಯಣದ ಸಾಂಸ್ಕೃತಿಕ ಸಭಾಭವನದಲ್ಲಿ ಬುಧವಾರ ಸಂಜೆ ಜರುಗಿತು.

Advertisement

ಪುಸ್ತಕ ಬಿಡುಗಡೆ ಮಾಡಿದ ನಿವೃತ್ತ ಜಂಟಿ ಲೇಬರ್‌ ಕಮೀಷನರ್‌ ಎಸ್‌.ಜಿ.ದೇಶಪಾಂಡೆ ಮಾತನಾಡಿ, ಹುಟ್ಟಿನಿಂದ ಕೊನೆಯವರೆಗೂ ಗುರುವಿನ ಮಹತ್ವವನ್ನು ತಿಳಿದು ನಡೆಯಬೇಕು. ದೇವರಿಲ್ಲದೆ ಬದುಕಬಹುದು. ಆದರೆ ಗುರು ರಕ್ಷೆ ಇಲ್ಲದೇ ಜೀವನ ನಡೆಸುವುದು ಕಷ್ಟ. ಅದರಲ್ಲೂ ನಾವು ಏನೇ ಸಾಧನೆ ಮಾಡಿದರೂ ಅದಕ್ಕೆ ತಕ್ಕ ಪ್ರಾಮಾಣಿಕತೆಯ ವ್ಯಕ್ತಿತ್ವ ಇರಬೇಕು. ಅಂದಾಗ ಮಾತ್ರ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಿದೆ ಎಂದರು. 

ಪುಸ್ತಕ ಕುರಿತು ಮಾತನಾಡಿದ ಪ್ರಾಧ್ಯಾಪಕ ಮಂಜುನಾಥ ಹೀರೆಮಠ ಮಾತನಾಡಿ, ಪುಸ್ತಕ ಮೌನದ ಧ್ವನಿಯ ಬಗ್ಗೆ ಹೇಳುತ್ತದೆ. ಸರಗೂರು, ಬ್ರಹ್ಮಗಿರಿ ಸೇರಿದಂತೆ ಅಲ್ಲಿನ ಆದಿವಾಸಿ ವಾಸಿಸುವ ಜನಾಂಗ, ಗಿರಿ ಜನರು, ಕಾಡು ಕುರುಬ, ಜೇನು ಕುರುಬರು, ಹೇಗೆ ಇರುತ್ತಾರೆ. ಜೊತೆಗೆ ಅವರ ಬದುಕು ಪುಸ್ತಕದಲ್ಲಿ ಇದೆ ಎಂದರು.

ಪುಸ್ತಕದ ರಚನೆಕಾರ ಡಾ| ಆರ್‌.ಬಾಲಸುಬ್ರಣ್ಯಂ ಮಾತನಾಡಿ, ಇಂದಿನ ರಾಜಕೀಯ ವ್ಯವಸ್ಥೆ ಹಾಗೂ ನಾಯಕರಿಂದ ಸಾಧಾರಣ ವ್ಯಕ್ತಿಗಳ ಧ್ವನಿನೇ ಇಲ್ಲದಂತಾಗಿದ್ದು, ಅವರ ಧ್ವನಿ ಕೂಡ ಮೌನವಾಗಿದೆ. ಹೀಗಾಗಿ ಇಂತಹ ಧ್ವನಿಗಳ ಕುರಿತು ನೈಜವಾಗಿ ಹಾಗೂ ಅನುಭವದೊಂದಿಗೆ ಈ ಪುಸ್ತಕ ಬರೆದಿರುವೆ ಎಂದರು.

ಅಭಿವೃದ್ಧಿ ಯಾರ ಸ್ವತ್ತಲ್ಲ, ಎಲ್ಲರೂ ಸೇರಿ ಸಹಕಾರದಿಂದ ಮಾಡಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಸರಕಾರವೇ ಮಾಡಬೇಕು ಎಂಬುದಾಗಿ ಯಾರೂ ಕುಳಿತುಕೊಳ್ಳಬಾರದು. ಇನ್ನೂ ಧಾರವಾಡದ ಜಿಲ್ಲೆಯ ಕೆಲವರು ಬಿಆರ್‌ಟಿಸಿ ಯೋಜನೆಯೇ ಒಂದೇ ಅಭಿವೃದ್ಧಿ ಎಂಬಂತೆ ಹೇಳಿಕೊಳ್ಳುತ್ತಾರೆ. ಆದರೆ ಆ ಯೋಜನೆ ಮಾತ್ರ ಇನ್ನೂ ಸರಿಯಾಗಿ ಪೂರ್ಣಗೊಂಡಿಲ್ಲ. ಅದರ ಕುರಿತು ಜಿಲ್ಲೆಯ ಜನರು ಧ್ವನಿ ಎತ್ತಿಲ್ಲ, ಹೀಗಾಗಿ ಇದನ್ನೇ ಅವರು ದೊಡ್ಡ ಸಾಧನೆ ಎನ್ನುವಂತಾಗಿದೆ ಎಂದರು.

Advertisement

ಹಳ್ಳಿಯಲ್ಲಿ ಕುಳಿತು ಧ್ವನಿ ಎತ್ತಿದರೆ ದೆಹಲಿಗೆ ಕೇಳಿಸಬೇಕು. ಅಂದಾಗ ಅಭಿವೃದ್ಧಿ ಆಗುತ್ತದೆ. ಅದನ್ನು ಬಿಟ್ಟು ಇನ್ನೊಬ್ಬರ ಮೇಲೆ ದೂರುವುದು ಬೇಡ. ಅಲ್ಲದೇ ಸರಕಾರವನ್ನು ನಂಬಿ ಯಾವತ್ತು ಕುಳಿತುಕೊಳ್ಳಬಾರದು. ಪರಿಹಾರ ನಮ್ಮಿಂದ ಆಗಬೇಕೇ ಹೊರತು ಇನ್ನೊಬ್ಬರಿಂದ ಪರಿಹಾರ ನಿರೀಕ್ಷೆ ಮಾಡಬಾರದು ಎಂದರು. ಕಾನೂನು ವಿದ್ಯಾಲಯದ ಪ್ರಾಧ್ಯಾಪಕ ಸಿ.ಎಸ್‌ ಪಾಟೀಲ ಮಾತನಾಡಿದರು. ಕೆ.ಎಸ್‌.ಜಯಂತ ಸ್ವಾಗತಿಸಿದರು. ಶ್ರೀರಕ್ಷಾ ಮತ್ತು ಶ್ರೀನಿಧಿ ಪ್ರಾರ್ಥಿಸಿದರು.

ಅಭಿವೃದ್ಧಿ ವಿಷಯದಲ್ಲಿ ಇನ್ನೊಬ್ಬರನ್ನು ನಾವು ಯಾಕೇ ದೂರಬೇಕು? ಎಂಬುದನ್ನು ಬಿಟ್ಟು ಸಮಸ್ಯೆ ಕುರಿತು ನಾವು ಮೊದಲು ಧ್ವನಿ ಎತ್ತಬೇಕೇ ಹೊರತು ಮೌನವಾಗಿ ಇರುವುದಲ್ಲ. ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡುವುದಷ್ಟೆ ಅಭಿವೃದ್ಧಿಯಲ್ಲ.
. ಡಾ| ಆರ್‌.ಬಾಲಸುಬ್ರಣ್ಯಂ

Advertisement

Udayavani is now on Telegram. Click here to join our channel and stay updated with the latest news.

Next