ಬೆಳ್ತಂಗಡಿ: ಧರ್ಮಸ್ಥಳ ಮುಂಡಾಜೆ ರಸ್ತೆಯಲ್ಲಿ ಧರ್ಮಸ್ಥಳ ಚರ್ಚ್ ಸಮೀಪ ಸ್ಕೂಟರಿಗೆ ಲಾರಿ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.
Advertisement
ಗಾಯಾಳು ಧರ್ಮಸ್ಥಳ ಗ್ರಾಮದ ಕಟ್ಟದ ಬಯಲು ನಿವಾಸಿ ಸುಧಾಕರ ಗುಡಿಗಾರ ಎಂಬವರಾಗಿದ್ದಾರೆ. ಅವರು ಧರ್ಮಸ್ಥಳದಿಂದ ಮುಂಡ್ರುಪ್ಪಾಡಿ ಕಡೆಗೆ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಸ್ಕೂಟರಿಗೆ ಢಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ಸ್ಕೂಟರ್ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದ್ದು ಸವಾರ ಸುಧಾಕರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.