Advertisement

ಶ್ರೀ ಕ್ಷೇತ್ರ ಧರ್ಮಸ್ಥಳ: ಲಕ್ಷದೀಪೋತ್ಸವ ಸಂಪನ್ನ

11:28 PM Nov 24, 2022 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಐದು ದಿನಗಳ ಕಾಲ ನಡೆದ ಲಕ್ಷದೀಪೋತ್ಸವ ಗುರುವಾರ ಬೆಳಗ್ಗಿನ ಜಾವ ಸಂಪನ್ನಗೊಂಡಿತು. ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.

Advertisement

ಬುಧವಾರ ರಾತ್ರಿ ಮಂಜುನಾಥ ಸ್ವಾಮಿಗೆ ಗುಡಿಯಲ್ಲಿ ಸಕಲ ಪೂಜಾವಿಧಿ ನೆರವೇರಿಸಿ ಬಳಿಕ ಅಂಗಣದಲ್ಲಿ 16 ಸುತ್ತುಗಳಲ್ಲಿ ವಾಲಗ, ನಿಶಾನೆ, ನಾದಘೋಷಗಳೊಂದಿಗೆ ಪ್ರದಕ್ಷಿಣೆ ಬಂದು ಮಧ್ಯರಾತ್ರಿ ದೇವಸ್ಥಾನದ ಹೊರಕ್ಕೆ ದೇವರು ಬಂದು ಬೆಳ್ಳಿ ರಥದಲ್ಲಿ ವಿರಾಜಮಾನರಾದರು. ಬಳಿಕ ನೆರೆದ ಭಕ್ತರು ಸ್ವಾಮಿಯ ಬೆಳ್ಳಿ ರಥವನ್ನು ದೇವಸ್ಥಾನದ ಸುತ್ತ ಒಂದು ಸುತ್ತು ಎಳೆದು ಅಣ್ಣಪ್ಪ ಬೆಟ್ಟದವರೆಗೆ ಸಾಗಿಬಂತು. ಅಲ್ಲಿ ವೈದಿಕರಿಂದ ಸಂಪ್ರದಾಯದತ್ತ ಪೂಜಾ ವಿಧಿ ನೆರವೇರಿಸಿ ದೇವರನ್ನು ಮುಖ್ಯದ್ವಾರದ ಬಳಿಯ ಗೌರಿಮಾರುಕಟ್ಟೆ ಬಳಿ ಕರೆತಂದು ಅಷ್ಟಾವದಾನ ಸೇವೆ ನೆರವೇರಿಸಲಾಯಿತು. ಬಳಿಕ ಸ್ವಾಮಿಯನ್ನು ರಥದಲ್ಲಿ ದೇವಳದ ಮುಂಭಾಗ ಭಕ್ತರ ಸಮ್ಮುಖದಲ್ಲಿ ತಂದು ಬಳಿಕ ದೇವಳಕ್ಕೆ ಒಂದು ಸುತ್ತು ಬಂದು ದೇವರನ್ನು ಗುಡಿಯೊಳಗೆ ವಿರಾಜಮಾನಗೊಳಿಸುವ ಮೂಲಕ ಲಕ್ಷದೀಪೋತ್ಸವ ಸಂಪನ್ನಗೊಂಡಿತು.

ಡಾ| ಡಿ. ವೀರೇಂದ್ರ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಡಿ. ಹಷೇìಂದ್ರ ಕುಮಾರ್‌, ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಹೆಗ್ಗಡೆ ಕುಟುಂಬಸ್ಥರು ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಸಮವಸರಣ ಪೂಜೆ :

ಗುರುವಾರ ಸಂಜೆ ಧರ್ಮಸ್ಥಳ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಬಾಹುಬಲಿ ಸೇವಾ ಸಮಿತಿ ಶ್ರಾವಕರಿಂದ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಗೆ ಸಮವಸರಣ ಪೂಜೆ ನೆರವೇರಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next