Advertisement

Madikeri ಇಂಡಿಯನ್‌ ಶೂಟಿಂಗ್‌ ಟೀಮ್‌ಗೆ ಧನ್ವಿ ಆಯ್ಕೆ

12:34 AM Nov 30, 2023 | Team Udayavani |

ಮಡಿಕೇರಿ: ನ್ಯಾಶನಲ್‌ ರೈಫ‌ಲ್‌ ಅಸೋಸಿಯೇಶನ್‌ ಆಫ್ ಇಂಡಿಯಾ ವತಿಯಿಂದ ಮಧ್ಯಪ್ರದೇಶ ದ ಭೋಪಾಲ್‌ನಲ್ಲಿ ನಡೆಯುತ್ತಿ ರುವ 66ನೇ ರಾಷ್ಟ್ರಮಟ್ಟದ ಶೂಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿನಿ ಕಾನಡ್ಕ ಧನ್ವಿ ಇಂಡಿಯನ್‌ ಶೂಟಿಂಗ್‌ ಟೀಮ್‌ ಟ್ರಯಲ್ಸ್‌ಗೆ ಆಯ್ಕೆಯಾಗಿದ್ದಾಳೆ.

Advertisement

ಶೂಟಿಂಗ್‌ ಚಾಂಪಿಯನ್‌ ಶಿಪ್‌ನ 10 ಮೀಟರ್‌ ಏರ್‌ ಪಿಸ್ತೂಲ್‌ ಐಎಸ್‌ಎಸ್‌ಎಫ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಕಾನಡ್ಕ ಧನ್ವಿ ಯೂತ್‌ (19 ವರ್ಷದೊಳಗಿನವರು) ಹಾಗೂ ಜೂನಿಯರ್‌ (21 ವರ್ಷದೊಳಗಿನವರ) ವಿಭಾಗದಲ್ಲಿ ಇಂಡಿಯನ್‌ ಶೂಟಿಂಗ್‌ ಟೀಮ್‌ ಟ್ರಯಲ್ಸ್‌ ಗೆ ಆಯ್ಕೆಯಾಗಿದ್ದಾಳೆ.

ಈಕೆ ಮರಗೋಡಿನ ಕೃಷಿಕ ಕಾನಡ್ಕ ಹನೀಶ್‌ ಅಪ್ಪಾಜಿ ಹಾಗೂ ಆಶಾ ದಂಪತಿಯ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next