Advertisement

ಧನ್ವಂತರಿ ಮಹಿಮೆಯ ಶಿಕ್ಷಕ

12:09 AM Feb 20, 2020 | Sriram |

ಅಧ್ಯಾಪಕರು ತಮ್ಮ ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಎಂತಹ ಸಾಧನೆಯನ್ನೂ ಮಾಡಬಹುದು ಎಂಬುದನ್ನು ಹಲವು ಶಿಕ್ಷಕರು ಸಾಧಿಸಿ ತೋರಿಸಿದ್ದಾರೆ. ಅಂತಹ ಶಿಕ್ಷಕರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಉಪ್ಪಿನಕುದ್ರುವಿನ ವಿಟuಲ ಮಹಾಬಲ ಕಾಮತ್‌ ಓರ್ವರು.

Advertisement

ವೃತ್ತಿಯಲ್ಲಿ ಶಿಕ್ಷಕನಾಗಿದ್ದರೂ ಆಸಕ್ತಿ ಯಕ್ಷಗಾನ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ. ಈ ನಿಟ್ಟಿನಲ್ಲಿಯೇ ದೇಶ-ವಿದೇಶಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದ್ದಾರೆ.

ಅಂತಾರಾಷ್ಟ್ರೀಯ ಖ್ಯಾತಿಯ ಉಪ್ಪಿನಕುದ್ರು ಗೊಂಬೆಯಾಟದ ಭೀಷ್ಮ ಕೊಗ್ಗ ದೇವಣ್ಣ ಕಾಮತರ ತಮ್ಮನ ಮಗನಾಗಿರುವ ಇವರು ಪ್ರಸ್ತುತ ತಲ್ಲೂರು ಕೋಟೆಬಾಗಿಲಿನ ಸ.ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರಾಗಿದ್ದಾರೆ. ಶೈಕ್ಷಣಿಕ ರಂಗದಲ್ಲಿಯೂ ವಿಶೇಷ ಸಾಧನೆ ಸೈ ಎನಿಸಿದ್ದು, ಈಗಾಗಲೇ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ
ಭಾಜನರಾಗಿದ್ದಾರೆ.

ಗಿಡಮೂಲಿಕೆಗಳ ಜಾಗೃತಿ
ಶ್ರೀ ಗಣೇಶ ಯಕ್ಷಗಾನ ಮಂಡಳಿ ಹುಟ್ಟು ಹಾಕಿ ಆಯುಷ್ಯ ಕಾರ್ಯಕ್ರಮದಡಿ ಗಿಡಮೂಲಿಕೆಗಳ ಬಗ್ಗೆ ಪ್ರಚಾರಪಡಿಸುವುದಕ್ಕಾಗಿ “ಧನ್ವಂತರಿ ಮಹಿಮೆ’ ಎಂಬ ಸಾಮಾಜಿಕ ಯಕ್ಷಗಾನ ಪ್ರಸಂಗ ರಚಿಸಿ ಕುಂದಾಪುರ, ಬೆಂಗಳೂರಿನ ಅರಮನೆ ಮೈದಾನ, ಹರಿದ್ವಾರದ ವ್ಯಾಸಾಶ್ರಮ, ದಿಲ್ಲಿಯ ಕರ್ನಾಟಕ ಭವನ ಮತ್ತು
ಸ್ಮತಿಭವನ, ಹೆಮ್ಮಾಡಿ, ಉಡುಪಿಯ ರಾಜಾಂಗಣದಲ್ಲಿ ಅದನ್ನು ಪ್ರದರ್ಶಿಸಿ ಆಯುರ್ವೇದ ಬಳಕೆದಾರರ ಪ್ರಶಂಸೆಗೆ ಪಾತ್ರರಾಗಿರುವರು. ಈ ಮೂಲಕ ಗಿಡಮೂಲಿಕೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿರುವರು.

ವಿದೇಶಗಳಲ್ಲೂ ಕಾರ್ಯಕ್ರಮ
ದಿ| ಹಳ್ಳಾಡಿ ಸುಬ್ರಾಯ ಮಲ್ಯರಿಂದ ಯಕ್ಷಗಾನದ ನೃತ್ಯ, ಭಾಗವತಿಕೆ ಕಲಿತು 5 ವರ್ಷಗಳ ಕಾಲ ಮಕ್ಕಳ ಮೇಳ, ಮಿತ್ರಮಂಡಳಿ ರಚಿಸಿ ಅನೇಕ ಕಡೆಗಳಲ್ಲಿ ಕಾರ್ಯಕ್ರಮ ನೀಡಿರುವರು. ಭಕ್ತಭದ್ರಾಯು ಎಂಬ ಸಾಮಾಜಿಕ ಯಕ್ಷಗಾನದಲ್ಲಿ ಅಭಿನಯಿಸಿರುವರು. ಗ್ರೀಸ್‌ ಹಾಗೂ ರೋಮ್‌ನಲ್ಲಿ ಉಪ್ಪಿನಕುದ್ರು ಗೊಂಬೆಗಳನ್ನು ಕುಣಿಸಿ
ಬಂದಿರುವರು.

Advertisement

ಯಕ್ಷರಂಗದಲ್ಲೂ ಮಿಂಚು
ಬಬ್ರುವಾಹನ ಕಾಳಗ, ಸುಧನ್ವ ಕಾಳಗ, ಮೀನಾಕ್ಷಿ ಕಲ್ಯಾಣ ಮುಂತಾದ ಪ್ರಸಂಗಗಳ ಭಾಗವತರಾಗಿಯೂ ಚಂದ್ರಹಾಸ ಚರಿತ್ರೆಯ ಮದನ, ಶನಿಮಹಾತೆ¾ಯ ದೇವೇಂದ್ರ ಹಾಗೂ ನಂದಿ ಶೆಟ್ಟಿ, ಶ್ವೇತ ಕುಮಾರ ಚರಿತ್ರೆಯ ರತ್ನಶೇಖರ, ದೇವಿ ಮಹಾತೆ¾ಯ ಶುಪಾಶ್ವ, ಲವಕುಶ ಕಾಳಗದ ಮಾಯಾ ಶೂರ್ಪನಖೀ, ಮಧುರ ಮಹೇಂದ್ರದ ನಾರದ, ಧನ್ವಂತರಿ ಮಹಿಮೆಯ ದೇವೇಂದ್ರ ಹೀಗೆ ಹತ್ತು ಹಲವು ಬಯಲಾಟಗಳಲ್ಲಿ ಬೇರೆ ಬೇರೆ ಪಾತ್ರ ವಹಿಸಿ ಯಕ್ಷರಂಗದಲ್ಲೂ ಮಿಂಚಿರುವರು.

  ಪಿ.ಜಯವಂತ ಪೈ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next