Advertisement

ಮನೆ ಬಾಗಿಲಿಗೆ ತಲುಪಲಿವೆ ಸರಕಾರಿ ಯೋಜನೆಗಳು

05:55 PM Feb 21, 2021 | Team Udayavani |

ದಾಂಡೇಲಿ: ಅಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ದಾಂಡೇಲಿತಾಲೂಕಿನ ಗೋಪಾಲ ಗ್ರಾಮಕ್ಕೆ ಇಂದುತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳ ಭೇಟಿ ಹಾಗೂ ಗ್ರಾಮ ವಾಸ್ತವ್ಯ ನಡೆಸಿತು.

Advertisement

ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೊಬ್ರಾಳದಲ್ಲಿ ಶಾಲಾ ವಿದ್ಯಾರ್ಥಿಗಳುಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ಶೈಲೇಶ ಪರಮಾನಂದ, ಸರಕಾರದವಿವಿಧ ಜನಪಯೋಗಿ ಯೋಜನೆಗಳು ಮನೆಬಾಗಿಲಿಗೆ ತಲುಪಿಸಬೇಕಾದನಿಟ್ಟಿನಲ್ಲಿ ಹಾಗೂ ಗ್ರಾಮೀಣಪ್ರದೇಶದಲ್ಲಿರುವ ಸಮಸ್ಯೆಗಳನ್ನುತ್ವರಿತಗತಿಯಲ್ಲಿ ಪರಿಹರಿಸುವಂತಾಗಲು ಅಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬಕಾರ್ಯಕ್ರಮ ಆಯೋಜಿಸಲಾಗಿದೆ. ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿಭಾಗವಹಿಸಿ ಸ್ಥಳೀಯವಾಗಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿತ್ವರಿತಗತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವ ಮಹತ್ವದ ಉದ್ದೇಶ ಹೊಂದಲಾಗಿದೆ ಎಂದರು.

ಹಿರಿಯ ಮುಖಂಡ ಟಿ.ಆರ್‌. ಚಂದ್ರಶೇಖರ್‌ ಮುಖ್ಯಅತಿಥಿಗಳಾಗಿದ್ದರು. ಅಂಬೇವಾಡಿ ಗ್ರಾಪಂ ಉಪಾಧ್ಯಕ್ಷೆ ಬೊಮ್ಮಿಬಾಯಿ ಪಾಟೀಲ್‌,ಸದಸ್ಯ ಜಿ.ಈ. ಪ್ರಕಾಶ, ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕಅಭಿಯಂತರ ಪುರುಷೋತ್ತಮ ಮಲ್ಯ, ಪಂಚಾಯತ್‌ ರಾಜ್‌ ಇಲಾಖೆಯ ಶಿವರಾಮ ಎಂ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಎಚ್‌ಎ, ಆರೋಗ್ಯ ಇಲಾಖೆಯ ಡಾ| ಮಂಜುಳಾ ಮುದುಕಣ್ಣವರ,

ಕೃಷಿ ಇಲಾಖೆಯ ಪಿ.ಎಫ್‌. ಕಶೀಲಕರ, ಶಿಕ್ಷಣ ಇಲಾಖೆಯ ಪಿ.ಪಿ. ಗಾಂವಕರ, ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ,ಹಿಂದುಳಿದ ಇಲಾಖೆಯ ಧನಂಜಯ, ತೋಟಗಾರಿಕೆ ಇಲಾಖೆಯ ಆದರ್ಶ ಕುಲಕರ್ಣಿ, ಬಿಎಲ್‌ಒ ಪ್ರಕಾಶ ಬೋರ್ಕರ, ಪಶುವೈದ್ಯ ಇಲಾಖೆಯ ಪಿ.ಜಿ. ಅವರಾದಿ, ಕಂದಾಯ ನಿರೀಕ್ಷಕ ಮಂಜುನಾಥ ಮೇತ್ರಿ ಮೊದಲಾದವರು

Advertisement

ಭಾಗವಹಿಸಿ ತಮ್ಮ ತಮ್ಮ ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ವಿವರ ನೀಡಿದರು. ಸ್ಥಳೀಯ ಗ್ರಾಪಂಅಧಿಕಾರಿಗಳು ಉಪಸ್ಥಿತರಿದ್ದರು.ಗ್ರಾಮಸ್ಥರೊಂದಿಗೆ ಸಂವಾದನಡೆಸಲಾಯಿತು. ಸಮಸ್ಯೆಗಳ ಬಗ್ಗೆಮುಕ್ತವಾಗಿ ಚರ್ಚಿಸಲಾಯಿತು. ಆಧಾರ್‌ ಕಾರ್ಡ್‌ ನೋಂದಣಿ ವ್ಯವಸ್ಥೆಮಾಡಲಾಗಿತ್ತು. ಸರಕಾರದ ವಿವಿಧಮಾಸಾಶನಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಯಿತು. ರುದ್ರಭೂಮಿ, ಘನತ್ಯಾಜ್ಯ ವಿಲೇವಾರಿ, ಜಲಜೀವನ್‌ ಮಿಷನ್‌ ಪರಿಶೀಲನೆ ನಡೆಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next