Advertisement

ಒಟಿಟಿಯಲ್ಲಿ “ರತ್ನನ ಪ್ರಪಂಚ”  |ಬಿಡುಗಡೆ ದಿನಾಂಕ ಘೋಷಣೆ

03:15 PM Oct 05, 2021 | Team Udayavani |

ಬೆಂಗಳೂರು : ಟ್ರೈಲರ್ ಮೂಲಕ ಸಿನಿ ರಸಿಕರಲ್ಲಿ ಕುತೂಹಲ ಮೂಡಿಸಿದ “ರತ್ನನ ಪ್ರಪಂಚ” ಸಿನಿಮಾ ಬಿಡುಗಡೆಯಾಗುತ್ತಿದೆ. ಡಾಲಿ ಧನಂಜಯ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಇದೇ ತಿಂಗಳು 22 ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

Advertisement

ಡಾಲಿ ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಝಿಯಾಗಿದ್ದಾರೆ. ಅವರು ನಟಿಸಿರುವ ಸಲಗ ಸಿನಿಮಾ ಇದೇ 14 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಇದರ ಜೊತೆಗೆ ಒಟಿಟಿಯಲ್ಲಿ ರತ್ನನ ಪ್ರಪಂಚ ತೆರೆದುಕೊಳ್ಳಲಿದೆ.

ಸ್ಯಾಂಡಲ್​ವುಡ್ ನಟ ಧನಂಜಯ್ ರತ್ನಾಕರ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರತ್ನನ್ ಪ್ರಪಂಚ’ ಚಿತ್ರವು ಅಕ್ಟೋಬರ್ 22ರಂದು ಬಿಡುಗಡೆಯಾಗಲಿದೆ.  ಅಭಿಮಾನಿಗಳಿಗೆ ಇದರಿಂದ ತುಸು ಅಚ್ಚರಿಯಾಗಿದೆ. ಕಾರಣ, ‘ರತ್ನನ್ ಪ್ರಪಂಚ’ ಅಕ್ಟೋಬರ್ 22ರಂದು ಆಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಆಮೆಜಾನ್ ಪ್ರೈಮ್ ಹಾಗೂ ಧನಂಜಯ್ ಟ್ವೀಟ್​ಗಳನ್ನು ಹಂಚಿಕೊಂಡಿದ್ದಾರೆ. ಆಮೆಜಾನ್ ಪ್ರೈಮ್ ಈ ಕುರಿತು ಟ್ವೀಟ್ ಮಾಡುತ್ತಾ, ‘ಒಂಬತ್ತು ಪಾತ್ರಗಳು, ಒಂದು ಕುತೂಹಲಕರ ಕತೆ’ ಎಂದು ಕ್ಯಾಪ್ಶನ್ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಾಯಕ ನಟ ಧನಂಜಯ್ ಟ್ವೀಟ್ , ‘ನಗು+ ತಿರುವು+ ಪ್ರೀತಿ= ರತ್ನನ್ ಪ್ರಪಂಚ’ ಎಂದು ಬರೆದುಕೊಂಡಿದ್ದಾರೆ.

Advertisement

ಇನ್ನು ‘ದಯವಿಟ್ಟು ಗಮನಿಸಿ’ ಚಿತ್ರದ ಮುಖಾಂತರ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಮೂಡಿಸಿದ್ದ ರೋಹಿತ್ ಪದಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡದ ಹಿರಿಯ ನಟಿ ಉಮಾಶ್ರೀ ಈ ಚಿತ್ರದಲ್ಲಿ ಧನಂಜಯ್ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next