Advertisement

ಗೆರಟೆಯಲ್ಲಿ ಕಲೆ ಅರಳಿಸುವ ಮರ್ಕಂಜದ ಧನಂಜಯ

01:14 AM Jul 04, 2020 | Sriram |

ಪುತ್ತೂರು: ತೆಂಗಿನಕಾಯಿಯ ಗೆರಟೆ ಬೆಂಕಿ ಉರಿಸಲಷ್ಟೇ ಲಾಯಕ್ಕು ಅನ್ನುವ ಸಾಮಾನ್ಯ ಯೋಚನೆ ನಮ್ಮದು. ಆದರೆ ಮರ್ಕಂಜದ ಧನಂಜಯ ಅವರು ಭಿನ್ನವಾಗಿ ಚಿಂತಿಸಿ, ತನ್ನ ಕಲಾಪ್ರೌಢಿಮೆ ಸೇರಿಸಿ ಹಲವು ರೂಪಗಳಲ್ಲಿ ಗೆರಟೆಯನ್ನು ನಮ್ಮೊಂದಿಗೆ ಸದಾ ಇರಿಸಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Advertisement

ಸುಳ್ಯ ತಾಲೂಕಿನ ಮರ್ಕಂಜ ನಿವಾಸಿ, ಪ್ರಸ್ತುತ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಧನಂಜಯ ಅವರು ಗೆರಟೆಯಲ್ಲಿ ಹಲವು ದಿನಬಳಕೆ ವಸ್ತುಗಳನ್ನು ತಯಾರಿಸಿದ್ದಾರೆ. ತನ್ಮೂಲಕ ಮೂಲೆ ಸೇರುತ್ತಿದ್ದ ಗೆರಟೆಯ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಅವರು ಹಲವು ವರ್ಷಗಳಿಂದ ಈ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಏನೇನು ತಯಾರಿ?
ಗೆರಟೆಯಲ್ಲಿ ಕೈ ಬಳೆ, ಪೆನ್‌ಸ್ಟಾಂಡ್‌, ಮೊಬೈಲ್‌ ಸ್ಟಾಂಡ್‌, ಕುಂಕುಮ ಬಾಕ್ಸ್‌, ಮೇಣದ ಬತ್ತಿ ಸ್ಟಾಂಡ್‌, ಪತ್ರ ಸಂಗ್ರಹದ ಬಾಕ್ಸ್‌, ಮೀನಿನ ಆಕೃತಿ, ಉಪ್ಪಿನಕಾಯಿ ಭರಣಿ, ಚಮಚ, ಆಭರಣ ಪೆಟ್ಟಿಗೆ, ಉಂಗುರ ಮುಂತಾದವುಗಳನ್ನು ತಯಾರಿಸಿ ದ್ದಾರೆ. ಇನ್ನೂ ಹತ್ತಾರು ಬಗೆಯ ವಸ್ತುಗಳ ತಯಾರಿಕೆಗೂ ಯೋಚನೆ ರೂಪಿಸಿದ್ದು, ದೇಶೀ ಪರಿಕರದ ಬಹೂಪಯೋಗಿ ಸಂಗತಿಗಳನ್ನು ತೆರೆದಿಡುವ ಪ್ರಯತ್ನದಲ್ಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next