Advertisement

SLC; ಟೆಸ್ಟ್ ತಂಡಕ್ಕೆ ನೂತನ ನಾಯಕನ ನೇಮಿಸಿದ ಶ್ರೀಲಂಕಾ

03:01 PM Jan 04, 2024 | Team Udayavani |

ಕೊಲಂಬೊ: ಕೆಲ ದಿನಗಳ ಹಿಂದೆಯಷ್ಟೇ ಟಿ20 ಮತ್ತು ಏಕದಿನ ತಂಡಕ್ಕೆ ನೂತನ ನಾಯಕರನ್ನು ನೇಮಿಸಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಇದೀಗ ಟೆಸ್ಟ್ ನಾಯಕತ್ವದಲ್ಲಿಯೂ ಬದಲಾವಣೆ ಮಾಡಿದೆ. ಇನ್ನು ಆಲ್ ರೌಂಡರ್ ಧನಂಜಯ ಡಿಸಿಲ್ವ ಅವರು ದೀರ್ಘ ಸ್ವರೂಪದ ಆಟದಲ್ಲಿ ಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಹೀಗಾಗಿ ಇದೀಗ ಮೂರು ಮಾದರಿಗೂ ಹೊಸ ನಾಯಕರ ನೇಮಕವಾಗಿದೆ. ಕೆಲ ದಿನಗಳ ಹಿಂದೆ ಟಿ20 ತಂಡಕ್ಕೆ ವಾನಿಂದು ಹಸರಂಗ ಮತ್ತು ಏಕದಿನ ತಂಡಕ್ಕೆ ಕುಸಾಲ್ ಮೆಂಡಿಸ್ ಅವರನ್ನು ನಾಯಕರನ್ನಾಗಿಸಿ ನೇಮಿಸಿತ್ತು.

32 ವರ್ಷದ ಧನಂಜಯ ಡಿಸಿಲ್ವ ಅವರು ಲಂಕಾ ಟೆಸ್ಟ್ ತಂಡ ಮುನ್ನಡೆಸುವ 12ನೇ ಆಟಗಾರನಾಗಲಿದ್ದಾರೆ. ಅಫ್ಘಾನ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಅವರು ನಾಯಕತ್ವ ವಹಿಸಲಿದ್ದಾರೆ. 2019 ಮತ್ತು 2023 ರ ನಡುವೆ 30 ಟೆಸ್ಟ್‌ಗಳಲ್ಲಿ ದಿಮುತ್ ಕರುಣಾರತ್ನೆ ಅವರು ನಾಯಕತ್ವ ವಹಿಸಿದ್ದರು. 12 ಪಂದ್ಯಗಳ ಗೆಲುವು,12 ಸೋಲು, 6 ತಂಡಗಳು ಡ್ರಾ ಆದ ಪಂದ್ಯಗಳಲ್ಲಿ ಕರುಣಾರತ್ನೆ ಮುನ್ನಡೆಸಿದ್ದರು.

ಇದುವರೆಗೆ 51 ಟೆಸ್ಟ್‌ ಗಳನ್ನಾಡಿರುವ ಧನಂಜಯ ಡಿಸಿಲ್ವ 40 ರ ಸರಾಸರಿ ಯಲ್ಲಿ 3301 ರನ್‌ಗಳನ್ನು ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next