Advertisement

ಧಮ್, ತಾಕತ್ತು ತೋರಿಸುವ ಅವಶ್ಯಕತೆ ನನಗಿಲ್ಲ : ದೊಡ್ಡನಗೌಡ ಪಾಟೀಲ ತಿರುಗೇಟು

09:24 PM Dec 17, 2022 | Team Udayavani |

ಕುಷ್ಟಗಿ: ಧಮ್, ತಾಕತ್ತು ತೋರಿಸುವ ಅವಶ್ಯಕತೆ ನನಗಿಲ್ಲ ಯಾಕೆಂದರೆ ನನ್ನ ಧಮ್, ಹಾಗು ತಾಕತ್ತು ಎಂದರೆ ಕುಷ್ಟಗಿ ಕ್ಷೇತ್ರದ ಜನರಾಗಿದ್ದಾರೆ. ಶಾಸಕ ಬಯ್ಯಾಪೂರ ಅವರಿಗೆ ಧಮ್ ಎಂದರೆ ಹಣ, ಲಿಂಗಸುಗೂರು, ಸಿಂಧನೂರು ಕ್ಷೇತ್ರದ ಜನ, ಅವರಿಗೆ ತಾಕತ್ತು ಎಂದರೆ ಅವರ ಸಂಬಂಧಿಕರು ಎಂದು ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ
ಬಯ್ಯಾಪೂರ ಅವರಿಗೆ ತಿರುಗೇಟು ನೀಡಿದರು.

Advertisement

ಕಳೆದ ಶುಕ್ರವಾರ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ 69ನೇ ಹುಟ್ಟು ಹಬ್ಬದ ಕಾರ್ಯಕ್ರಮದ ಸಂಧರ್ಭದಲ್ಲಿ ಶಾಸಕ ಬಯ್ಯಾಪೂರ ವೀರಾವೇಶದಿಂದ 1300 ಕೋಟಿ ರೂ. ಅನುದಾನದ ಬಗ್ಗೆ ಪ್ರಶ್ನಿಸಿದ್ದಕ್ಕೆ ಧಮ್ ತಾಕತ್ತಿನ ಬಗ್ಗೆ ಮಾತನಾಡಿದ್ದಾರೆ. ಶಾಸಕ ಬಯ್ಯಾಪೂರ ಧಮ್,ತಾಕತ್ತು ಎನ್ನಲು ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆನಪಾಗಿ ಆ ಹುಮ್ಮಸ್ಸಿನಲ್ಲಿ ಹೇಳಿದಂತಾಗಿದೆ. ಈ ಕ್ಷೇತ್ರದ ಜನ ಮತದಾರರ ಕುಟುಂಬ ಸದಸ್ಯನಂತೆ ಈಗಲೂ ನಾನಿದ್ದೇನೆ, ನಾನೂ ಸೋತಾಗಲು, ಅಷ್ಟೇ ಸಂತೋಷದಿಂದ ಇರುವೆ ಆದರೆ ಧಮ್,
ತಾಕತ್ತು ಇಲ್ಲ ಎಂದರು.

1300 ಕೋಟಿ ರೂ. ಅನುದಾನದ ಕೆಲಸ ಅವರಿಗೆ ಬೇಕಾದಸಂಬಂಧಿಕರೇ ಕೆಲಸ ನಿರ್ವಹಿಸಿದ್ದು, ಮುಂದಿನ ಪತ್ರಿಕಾಗೋಷ್ಠಿಯಲ್ಲಿ ವಿವರ ಸಮೇತ ನೀಡುವೆ ಇದನ್ನು ಸಿಬಿಐಗೆವಹಿಸುವ ಅಗತ್ಯವಿಲ್ಲ ಎಂಬುದು ಜನರಿಗೆ ಗೊತ್ತಿರುವ ವಿಚಾರ ಎಂದರು. ಹಿರಿಯ ಶಾಸಕರಾಗಿರುವ ಬಯ್ಯಾಪೂರ ಯಾಕೋ ಇತ್ತೀಚೆಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

ಅಡಿಯೋ ರಿಲೀಸ್
ಶಾಸಕ ಬಯ್ಯಾಪೂರ ಅವರು, ತಮ್ಮ ಹುಟ್ಟು ಹಬ್ಬಕ್ಕೆ ಜನರನ್ನು ಹಣಕೊಟ್ಟು ಕರೆದುಕೊಂಡು ಬಂದಿದ್ದಾರೆ ಎಂಬುದಕ್ಕೆ ಸಂಭಾಷಣೆಯ ಅಡಿಯೋ ರಿಲೀಸ್ ಮಾಡಿ, ಬಯ್ಯಾಪೂರ ಹುಟ್ಟು ಹಬ್ಬಕ್ಕೆ ತಲಾ 200ರೂ.ಕೊಟ್ಟಿದ್ದಾರೆನ್ನುವ ಸಂಭಾಷಣೆಯನ್ನು ಕೇಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next