Advertisement

Dhairyam Sarvatra Sadhanam: ಧೈರ್ಯದ ಹಿನ್ನೆಲೆಯಲ್ಲಿ ಹೊಸಬರ ಸಾಧನೆ

06:12 PM Feb 24, 2024 | Team Udayavani |

ಸಮಾಜದಲ್ಲಿನ ಶೋಷಿತರ ಸುತ್ತ ಅನೇಕ ಸಿನಿಮಾಗಳು ಬಂದಿವೆ. ಬಡವ, ಶ್ರೀಮಂತ ಒಂದು ಕಡೆಯಾದರೆ, ಮುಗ್ಧ ಜನರನ್ನು ಯಾಮಾರಿಸುವ ಮಂದಿ ಮತ್ತೂಂದು ಕಡೆ.. ಈ ವಾರ ತೆರೆಗೆ ಬಂದಿರುವ “ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾ ಇಂತಹ ಗಂಭೀರ ವಿಚಾರವನ್ನಿಟ್ಟುಕೊಂಡು ತೆರೆಗೆ ಬಂದಿದೆ.

Advertisement

ಚಿತ್ರದಲ್ಲಿ ಆರ್ಯ ಹಾಗೂ ದ್ರಾವಿಡ ಎಂಬ ಎರಡು ಪಾತ್ರಗಳು ಬರುತ್ತವೆ. ಈ ಪಾತ್ರಗಳ ಮೂಲಕ ಚಿತ್ರದ ಮೂಲ ಅಂಶವನ್ನು ಸಾಂಕೇತಿಕವಾಗಿ ಹೇಳಿಕೊಂಡು ಹೋಗಿದ್ದಾರೆ ನಿರ್ದೇಶಕರು. ಊರಿನ ಜನ ಗುಲಾಮರಾಗಿರಬೇಕು, ಕಾನೂನು ಬದಲು ಮಂತ್ರ-ತಂತ್ರದ ಮೊರೆಹೋಗಬೇಕು ಎಂದು ಬಯಸುವ ಮನಸ್ಸು ಒಂದು ಕಡೆಯಾದರೆ, ಅಸಮಾನತೆ, ಶ್ರೀಮಂತರ ದರ್ಪದ ವಿರುದ್ಧ ಸಿಡಿಯುವ ಪಾತ್ರ ಮತ್ತೂಂದು…

ಈ ನಡುವೆಯೇ ಬಂದೂಕು ಹಾಗೂ ಬೇಟೆಯ ಕಲೆಯನ್ನು ಕಥೆಗೆ ಲಿಂಕ್‌ ಮಾಡಲಾಗಿದೆ. ಒಂದು ಪ್ರಯತ್ನವಾಗಿ “ಧೈರ್ಯಂ ಸರ್ವತ್ರ ಸಾಧನಂ’ ಮೆಚ್ಚುಗೆಗೆ ಪಾತ್ರವಾಗುವ ಸಿನಿಮಾ. ಗಟ್ಟಿ ಕಂಟೆಂಟ್‌ ಅನ್ನು ಅಷ್ಟೇ ಗಂಭೀರವಾಗಿ ಹೇಳಬೇಕೆಂಬ ನಿರ್ದೇಶಕರ ತವಕ ಚಿತ್ರದಲ್ಲಿ ಎದ್ದು ಕಾಣುತ್ತದೆ.

ಪ್ರೇಕ್ಷಕರಿಗೆ ಎಲ್ಲವನ್ನು ಹೇಳಿಬಿಡಬೇಕು ಎಂಬ ನಿರ್ದೇಶಕರ ತವಕ ಚಿತ್ರದಲ್ಲಿ ಎದ್ದು ಕಾಣುತ್ತದೆ. ಈ ಹಂತದಲ್ಲಿ ಸಣ್ಣಪುಟ್ಟ ತಪ್ಪುಗಳು ಕೂಡಾ ಆಗಿವೆ. ಆದರೆ, ಒಂದು ಪ್ರಯತ್ನವಾಗಿ “ಧೈರ್ಯಂ ಸರ್ವತ್ರ ಸಾಧನಂ’ ಮೆಚ್ಚುಗೆಗೆ ಪಾತ್ರವಾಗುವ ಸಿನಿಮಾ.

ಚಿತ್ರದಲ್ಲಿ ವಿವಾನ್‌, ಅನುಷಾ ರೈ, ಯಶ್‌ ಶೆಟ್ಟಿ, ಬಾಲರಾಜವಾಡಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next