Advertisement

“ಧಾಕಡ್” ಸಿನೆಮಾದ ಬಿಹೈಂಡ್ ದಿ ಸೀನ್ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ ಕಂಗನಾ..!

06:15 PM Feb 12, 2021 | Team Udayavani |

ನವ ದೆಹಲಿ : ಬಾಲಿವುಡ್ ನಟಿ ಕಂಗನಾ ರನೌತ್ ತಮ್ಮ ಮುಂದಿನ ಸಿನೆಮಾ “ಧಾಕಡ್” ನ ಬಿಹೈಂಡ್ ದಿ ಸೀನ್(ಬಿಟಿಎಸ್) ಫೋಟೊವೊಂದನ್ನು ಟ್ವೀಟರ್ ನಲ್ಲಿ ಶುಕ್ರವಾರ(ಫೆ.12) ಪೋಸ್ಟ್ ಮಾಡಿದ್ದಾರೆ.

Advertisement

14 ಘಂಟೆಗಳ ನೈಟ್ ಶಿಫ್ಟ್ ಶೂಟಿಂಗ್ ನ್ನು ನಾನು ಕಳೆದಿದ್ದೇನೆ. ಇದು ನನ್ನ 10ನೇ ದಿನದ ನೈಟ್ ಶಿಪ್ಟ್ ಎಂದು ಅವರು ಹೇಳಿಕೊಂಡಿದ್ದಾರೆ. ಫೋಟೊದಲ್ಲಿ ಕಂಗನಾ ಜೊತೆ ಚಿತ್ರದ ನಿರ್ದೇಶಕ ರಜನೀಶ್, ಹಾಸ್ಯಾಸ್ಪದ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.

ಓದಿ : “ಮಾನವನ ಕೂದಲಿಗಿಂತ 10 ಪಟ್ಟು ಸಣ್ಣದಿರುವ ಬ್ರೈನ್ ಮೆಷಿನ್” ಅಭಿವೃದ್ಧಿಯಲ್ಲಿ ಎಲೊನ್ ಮಸ್ಕ್.!

10 ನೇ ನೈಟ್ ಶಿಫ್ಟ್ , ಬಿಡುವಿಲ್ಲದ ಚಿತ್ರೀಕರಣ, 14 ಗಂಟೆಗಳ ನೈಟ್ ಶಿಫ್ಟ್, ಬೆಳಗಾಗಿದೆ ಆದರೇ, ನಮ್ಮ ಮುಖ್ಯಸ್ಥ @RazyGhai ಅವರು tum mujhe khoon do main tumhe aazadi dunga.. ನಾನು ನಿಮ್ಮವಳು. Bring it on #Dhaakad ಎಂದು ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.

Advertisement

ಏತನ್ಮಧ್ಯೆ, ಮಧ್ಯಪ್ರದೇಶದ  ಕಾಂಗ್ರೆಸ್  ಕಾರ್ಯಕರ್ತರು “ಕಂಗನಾ ರನೌತ್, ರೈತರಲ್ಲಿ ಕ್ಷಮೆಯಾಚಿಸದಿದ್ದರೇ, ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ” ಎಂದು ಎಸ್ ಪಿ ಗೆ ಮನವಿ ಪತ್ರವೊಂದನ್ನು ಕೊಟ್ಟಿದ್ದಾರೆ.

ಇನ್ನು, ಮಧ್ಯಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಆಕೆಯ ವಿರುದ್ಧ ಫೆಬ್ರವರಿ 12 ಹಾಗೂ 13ರಂದು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿರುವುದನ್ನು ಬೆತುಲ್ ನ SDPO ನಿತೇಶ್ ಪಟೇಲ್ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಓದಿ : ತೆಂಗಿನ ಮರದ ಬುಡ ಬಿಡಿಸಿದರೆ ಏನಾಗುತ್ತದೆ? | How to Grow a Coconut Tree

 

 

 

 

 

 

Advertisement

Udayavani is now on Telegram. Click here to join our channel and stay updated with the latest news.

Next