ನವ ದೆಹಲಿ : ಬಾಲಿವುಡ್ ನಟಿ ಕಂಗನಾ ರನೌತ್ ಸೋಮವಾರ(ಫೆ. 8) ತಮ್ಮ ಮುಂದಿನ ಸ್ಪೈ ಥ್ರಿಲ್ಲರ್ ಆ್ಯಕ್ಷನ್ ಸಿನೆಮಾದ ಸ್ಟಿಲ್ ಫೋಟೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸುಡುವ ವಾಹನದ ಉರಿಯುತ್ತಿರುವ ಬೆಂಕಿ ಜ್ವಾಲೆಯ ಹಿನ್ನಲೆಯಲ್ಲಿ ರನೌತ್ ಆಲ್ ಬ್ಲ್ಯಾಕ್ ಸೂಟ್ ಧರಿಸಿ, ಮೆಷಿನ್ ಗನ್ ಹಿಡಿದು ಆ್ಯಕ್ಷನ್ ಮೋಡ್ ನಲ್ಲಿ ನಿಂತಿರುವಂತೆ ಈ ಸ್ಟಿಲ್ ಕಾಣಿಸುತ್ತಿದೆ.
ಓದಿ: ವಾಷಿಂಗ್ಟನ್ ಸುಂದರ್ ಹೋರಾಟದ ನಡೆವೆಯೂ 241 ರನ್ ಹಿನ್ನಡೆ ಅನುಭವಿಸಿದ ಟೀಂ ಇಂಡಿಯಾ!
“ಅವರು ಅವಳನ್ನು ಅಗ್ನಿ ಎಂದು ಕರೆಯುತ್ತಾರೆ. ಧೈರ್ಯಶಾಲಿ ಧಾಕಡ್ ಎಂದು ನಾನು ಕರೆಯುತ್ತೇನೆ. ಅವಳು ನನ್ನ ಭೈರವಿಯ ಚಿತ್ರಣ. ಸಾವಿನ ದೇವತೆ ಧಾಕಡ್” ಎಂಬ ಶೀರ್ಷಿಕೆ ಕೊಟ್ಟು ಕಂಗನಾ ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.
ಈ ಹಿಂದಿನ ಪೋಸ್ಟರ್ ಗಳಲ್ಲಿಯೂ ಕಂಗನಾ ಹೀಗೆಯೇ ಉಗ್ರ ರೂಪದಲ್ಲಿ ಕಾಣಿಸಿಕೊಂಡಿದ್ದರು. ಹಾಗೂ ಈ ಚಿತ್ರಕ್ಕಾಗಿ ಪೂರ್ವ ತಯಾರಿ ನಡೆಸುತ್ತಿರುವ ವೀಡಿಯೊವೊಂದನ್ನು ಹಂಚಿಕೊಂಡಿದ್ದರು.
ಇನ್ನು, ಅಂದಾಜು 25 ಕೋಟಿ ರೂ. ಗಳಷ್ಟು ವೆಚ್ಚವನ್ನು ಈ ಚಿತ್ರದ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ಮಾಡಲು ಬಳಸಿಕೊಳ್ಳಲಾಗುತ್ತದೆ ಎಂಬ ವಿಚಾರ ಬಹಿರಂಗಗೊಂಡಿತ್ತು.
ವಿಶ್ವ ದರ್ಜೆಯಲ್ಲಿ ಭಾರಿ ಸದ್ದು ಮಾಡಲಿರುವ ಚಿತ್ರ ಎಂದು ಹೇಳಲಾಗುತ್ತಿರುವ ಈ “ಧಾಕಡ್”ನ್ನು ರಜನೀಶ್ ‘ರಾಜಿ’ ನಿರ್ದೇಶಿಸಿದ್ದಾರೆ. ಸೋಹೆಲ್ ಮಕ್ಲೈ ಪ್ರೊಡಕ್ಶನ್ಸ್ ಹಾಗೂ ಅಸಿಲಮ್ ಫಿಲ್ಮ್ಸ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಕ್ಯೂ ಕಿ ಡಿಜಿಟಲ್ ಮೀಡಿಯಾ, ಸಹ ನಿರ್ಮಾಣವನ್ನು ಮಾಡುತ್ತಿದೆ. ಆಫೀಸರ್ ಪಾತ್ರದಲ್ಲಿ ಕಂಗನಾ ಮುಖ್ಯ ಭೂಮಿಕೆಯಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅರ್ಜುನ್ ರಾಮ್ ಪಾಲ್, ದಿವ್ಯ ದತ್ತಾ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಓದಿ: ಚಮೋಲಿಯ ದುರ್ಘಟನೆಗೆ ವಿಶ್ವ ನಾಯಕರ ಸಂತಾಪ
ಒಟ್ಟಿನಲ್ಲಿ, ಮಕ್ಕಳ ಕಳ್ಳ ಸಾಗಾಣೆ, ಮಹಿಳೆಯರ ಮೇಲಿನ ಅಪರಾಧ, ದೌರ್ಜನ್ಯದಂತಹ ಗಂಭೀರ ವಿಷಯಗಳ ಆಧಾರದಲ್ಲಿ ನಿರ್ಮಾಣಗೊಳ್ಳುತ್ತಿರುವ “ಧಾಕಡ್” ಜಾಗತಿಕ ಮಟ್ಟದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಓದಿ: ಏನಿದು FDI ಸಂಚು, ಆಂದೋಲನ್ ಜೀವಿ ಬಗ್ಗೆ ಎಚ್ಚರಿಕೆ ಇರಲಿ; ಪ್ರಧಾನಿ ಮೋದಿ ವ್ಯಾಖ್ಯಾನ