Advertisement

ಚಿಕಿತ್ಸೆಗೆಂದು ಬಂದ ರೋಗಿಯಿಂದ ಲಂಚದ ಬೇಡಿಕೆಯಿಟ್ಟ ವೈದ್ಯ ,ಡಿಗ್ರೂಪ್ ನೌಕರ ಎಸಿಬಿ ಬಲೆಗೆ

05:48 PM Jan 22, 2022 | Team Udayavani |

ಗಂಗಾವತಿ: ಇಲ್ಲಿಯ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ಲಂಚದ ಹಣ ಸ್ವೀಕರಿಸುವಾಗ ಎಸಿಬಿ ಪೊಲೀಸರು ದಾಳಿ ನಡೆಸಿ ಸರಕಾರಿ ವೈದ್ಯ ಹಾಗೂ ಡಿಗ್ರೂಪ್ ನೌಕರನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಪ್ರಕರಣ ಶನಿವಾರ ಜರುಗಿದೆ.

Advertisement

ಸರಕಾರಿ ಆಸ್ಪತ್ರೆಯ ಎಲುಬು ಕೀಲು ವೈದ್ಯ ಡಾ|ಸಲಾವುದ್ದೀನ್ ಹಾಗೂ ಡಿಗ್ರೂಪ್ ನೌಕರ ವಿರೇಶ ಬಾರಿಕೇರ್ ಎಸಿಬಿ ಬಂಧನಕ್ಕೊಳಗಾದವರಾಗಿದ್ದಾರೆ.

ತಾಲೂಕಿನ ವಡ್ಡರಹಟ್ಟಿ ಗ್ರಾಮದ ನಾಗಪ್ಪ ಎನ್ನುವ ವ್ಯಕ್ತಿ ಕಾಲು ನೋವಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯ ಡಾ|ಸಲಾವುದ್ದಿನ್ 1200 ರೂ.ಗಳ ಲಂಚ ನೀಡುವಂತೆ ಕೇಳಿದ್ದು ಇದನ್ನು ತಮ್ಮ ಸಹಾಯಕ ವಿರೇಶ ಬಾರಕೇರ್ ಇವರ ಕೈಗೆ ಕೊಡುವಂತೆ ನಾಗಪ್ಪನ ಕಡೆಯವರಾದ ಕೃಷ್ಣಕಿಶೋರ್ ತಿಳಿಸಿದ್ದಾರೆ.

ಶುಕ್ರವಾರ 6000 ರೂ.ಗಳನ್ನು ಕೊಟ್ಟು ಉಳಿದ ಹಣ ಶನಿವಾರ ಕೊಡುವುದಾಗಿ ತಿಳಿಸಿ ನಂತರ ಕೊಪ್ಪಳದ ಎಸಿಬಿ ಪೊಲೀಸ್ ಠಾಣೆಗೆ ಕೃಷ್ಣಕಿಶೋರ್ ದೂರು ನೀಡಿದ್ದಾರೆ. ಶನಿವಾರ ಉಳಿದ ಹಣ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಹಾಯಕ ವಿರೇಶ ಬಾರೆಕೇರ್ ಇವರಿಗೆ ಕೊಡುವ ಸಂದರ್ಭದಲ್ಲಿ ಎಸಿಬಿ ಬಳ್ಳಾರಿ ವಲಯ ಎಸ್ಪಿ ಹರಿಬಾಬು, ಡಿಎಸ್ಪಿ ಶಿವಕುಮಾರ ಹಾಗೂ ಇನ್ಸಪೆಕ್ಟರ್ ಆಂಜನೇಯ ನೇತೃತ್ವದಲ್ಲಿ ದಾಳಿ ನಡೆಸಿ ವೈದ್ಯ ಡಾ|ಸಲಾವುದ್ದೀನ್ ಹಾಗೂ ವಿರೇಶ ಬಾರಕೇರ ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ದಾಳಿಯ ಸಂದರ್ಭದಲ್ಲಿ ಇನ್ಸಪೆಕ್ಟರ್ ಶಿವರಾಜ್ ಇಂಗಳೆ, ಸಿಬ್ಬಂದಿಗಳಾದ ಸಿದ್ದಯ್ಯ, ರಂಗನಾಥ, ಜಗದೀಶ, ಗಣೇಶಗೌಡ, ಸವಿತಾ ಸಜ್ಜನ್, ಆನಂದ ಬಸ್ತಿ, ಯಮುನಾನಾಯಕ್ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next