Advertisement
ದೇಗುಲದ ಆಡಳಿತ ಧರ್ಮದರ್ಶಿ ಹರೀಶ್ ಕುಮಾರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಸಮಿತಿಯ ಸದಸ್ಯರಾದ ರಮೇಶ್ ಗಾಣಿಗ ಕೊಲ್ಲೂರು, ನರಸಿಂಹ ಹಳಗೇರಿ, ದೇಗುಲದ ಪಿಆರ್ಒ ಜಯಕುಮಾರ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಎಎಸ್ಪಿ ಹರಿರಾಮಶಂಕರ್ ಮೊದಲಾದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು: ಡಿಜಿಪಿ ನೀಲಮಣಿ ಎನ್. ರಾಜು ಅವರು ಮಂಗಳವಾರ ಅಪರಾಹ್ನ ಮಂಗಳೂರಿಗೆ ಭೇಟಿ ನೀಡಿ ಇಲಾಖಾಧಿಕಾರಿಗಳ ಸಭೆ ನಡೆಸಿದರು. ಮೇರಿಹಿಲ್ನಲ್ಲಿರುವ ಪಶ್ಚಿಮ ವಲಯದ ಐಜಿಪಿ ಕ್ಯಾಂಪ್ ಆಫೀಸಿನಲ್ಲಿ ಅಧಿಕಾರಿಗಳ ಅನೌಪಚಾರಿಕ ಸಭೆ ನಡೆಯಿತು. ನಗರದಲ್ಲಿ ಕಮಿಶನರ್ ಜಾರಿಗೆ ತಂದಿರುವ ಹೊಸ ಬೀಟ್ ವ್ಯವಸ್ಥೆ ಮತ್ತು ರೌಡಿಶೀಟರ್ಗಳಿಗೆ ಸನ್ನಡತೆ ಹಾಗೂ ಉದ್ಯೋಗ ಆಫರ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಲಾಖೆ ಕಾರ್ಯಚಟುವಟಿಕೆಗಳು, ಸೌಲಭ್ಯಗಳು, ಸಿಬಂದಿ ನೇಮಕಾತಿ ಬಗ್ಗೆ ವಿವರ ಪಡೆದರು. ಐಜಿಪಿ ಅರುಣ್ ಚಕ್ರವರ್ತಿ, ಕಮಿಶನರ್ ಡಾ| ಪಿ.ಎಸ್. ಹರ್ಷ, ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್, ಮಂಗಳೂರು ನಗರ ಉಪ ಪೊಲೀಸ್ ಆಯುಕ್ತರಾದ ಅರುಣಾಂಶುಗಿರಿ, ಲಕ್ಷ್ಮೀಗಣೇಶ್ ಉಪಸ್ಥಿತರಿದ್ದರು.