ನವದೆಹಲಿ: ಉಸಿರಾಟದ ಪರೀಕ್ಷೆ ಸಂದರ್ಭದಲ್ಲಿ ವಿಮಾನದ ಪೈಲಟ್ ಗಳು ಹಾಗೂ ಸಿಬಂದಿಗಳು ಸುಗಂಧ ದ್ರವ್ಯ(Perfumes)ಗಳನ್ನು ಬಳಕೆ ಮಾಡದಿರುವಂತೆ ನಿರ್ಬಂಧ ವಿಧಿಸಲು ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯ ಪ್ರಸ್ತಾವಿತ ಕರಡನ್ನು ಸಿದ್ಧಪಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Customs officers: ಪ್ಯಾಂಟಿನೊಳಗೆ ಚಿನ್ನದ ಪೌಡರ್‌ಲೇಪಿಸಿ ಸಾಗಣೆ: ಇಬ್ಬರ ಬಂಧನ
ಸುಗಂಧದ್ರವ್ಯಗಳು ಸಾಮಾನ್ಯವಾಗಿ ಅತಿಯಾದ ಆಲ್ಕೋಹಾಲ್ ಅಂಶವನ್ನು ಹೊಂದಿದ್ದು, ಇದರಿಂದ ಉಸಿರಾಟದ ಪರೀಕ್ಷೆ ಮೇಲೆ ಪರಿಣಾಮ ಬೀರಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸಿದ್ಧಪಡಿಸಿರುವ ಪ್ರಸ್ತಾವಿತ ಡ್ರಾಪ್ಟ್ ನಲ್ಲಿ ವಿವರಿಸಿದೆ.
ಎಎನ್ ಐ ವರದಿಯಂತೆ ನೂತನ ಕರಡಿನಲ್ಲಿ, ವಿಮಾನದ ಪೈಲಟ್ ಗಳಾಗಲಿ ಅಥವಾ ಸಿಬಂದಿಗಳಾಗಲಿ ಯಾವುದೇ ಔಷಧಗಳು, ಮೌತ್ ವಾಶ್, ಟೂತ್ ಜೆಲ್, ಸುಗಂಧ ದ್ರವ್ಯದಂತಹ ವಸ್ತುಗಳನ್ನು ಸೇವನೆ ಮಾಡಬಾರದು. ಇದರಲ್ಲಿ ಅಲ್ಕೋಹಾಲ್ ಅಂಶ ಇರುವುದರಿಂದ ಉಸಿರಾಟದ ಪರೀಕ್ಷೆ ವೇಳೆ ಪಾಸಿಟಿವ್ ವರದಿ ಬರುವ ಸಾಧ್ಯತೆ ಇರುತ್ತದೆ.
ಪೈಲಟ್ ಗಳು, ಸಿಬಂದಿಗಳು ವಿಮಾನದಲ್ಲಿ ಕಾರ್ಯನಿರ್ವಹಿಸುವ ಮೊದಲು ಕಂಪನಿಯ ವೈದ್ಯರನ್ನು ಸಂಪರ್ಕಿಸಿ ಉಸಿರಾಟದ ಪರೀಕ್ಷೆಗೆ ಒಳಗಾಗಬೇಕು ಎಂದು ಡಿಜಿಸಿಎ ಡ್ರಾಪ್ಟ್ ನಲ್ಲಿ ಉಲ್ಲೇಖಿಸಿದೆ.
ಇದೊಂದು ಕೇವಲ ನಾಗರಿಕ ವಿಮಾನಯಾನದ ಅಗತ್ಯತೆಯ (CAR) ಡ್ರಾಪ್ಟ್ ಆಗಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ಪಡೆಯಲಾಗುವುದು ಎಂದು ಡಿಜಿಸಿಎ ತಿಳಿಸಿದೆ.