ಹೊಸದಿಲ್ಲಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 50 ಪ್ರಯಾಣಿಕರನ್ನು ಬಿಟ್ಟು ತೆರಳಿದ್ದ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) 10 ಲಕ್ಷ ರೂ. ದಂಡ ವಿಧಿಸಿದೆ.
Advertisement
ಇತ್ತೀಚೆಗಷ್ಟೇ ವಿಮಾನದಲ್ಲಿ ಪ್ರಯಾಣಿಕರ ಅಸಭ್ಯವರ್ತನೆ ತಡೆಗಟ್ಟುವಲ್ಲಿ ಹಾಗೂ ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಕಾರಣ ಏರ್ ಇಂಡಿಯಾಗೆ ದಂಡ ವಿಧಿಸಿದ್ದ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿದೆ. ಟರ್ಮಿನಲ್ ಸಂಯೋಜಕರು ಹಾಗೂ ವಿಮಾನ ಸಿಬಂದಿ ನಡುವಿನ ಸಂವಹನ ಸರಿಯಾಗಿಲ್ಲದ ಕಾರಣ, ಗೋ ಫಸ್ಟ್ ವಿಮಾನ 50 ಪ್ರಯಾಣಿಕರನ್ನು ಬಿಟ್ಟು, ಬೆಂಗಳೂರಿನಿಂದ ಹೊಸದಿಲ್ಲಿಗೆ ಹಾರಾಟ ನಡೆಸಿತ್ತು.