Advertisement

ಭಕ್ತಿಗೆ ಭಗವಂತ ಒಲಿಯುತ್ತಾನೆ: ಪಲಿಮಾರು ಶ್ರೀ

09:36 AM Jun 09, 2019 | Team Udayavani |

ಉಡುಪಿ: ಭಕ್ತಿಯ ಯೋಗದಿಂದ ಭಗವಂತನನ್ನು ಒಲಿಸಿಕೊಳ್ಳಬಹುದು. ದಿನನಿತ್ಯ ಶ್ರೀಕೃಷ್ಣ ಸ್ತೋತ್ರವನ್ನು ಮಾಡಿದರೆ ಮನೆಯಲ್ಲೇ ಆತ ನೆಲೆಯೂರುತ್ತಾನೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.

Advertisement

ಸುವರ್ಣ ಗೋಪುರ ಸಮರ್ಪಣೋತ್ಸವದ ಪ್ರಯುಕ್ತ ಶನಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ ಧರ್ಮಗೋಪುರಮ್‌ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಬೆಲೆ ಕಳೆದುಕೊಳ್ಳದ ವಸ್ತು ಎಂದರೆ ಬಂಗಾರ ಮಾತ್ರ. ಇದನ್ನು ಶ್ರೀಕೃಷ್ಣನ ಗೋಪುರದ ಮೇಲೆ ಹಾಕಿ ದಿನನಿತ್ಯ ಆರಾಧನೆ ಮಾಡುತ್ತೇವೆ. ಆ ಮೂಲಕ ಆ ಗೋಪುರ ಶ್ರೀಕೃಷ್ಣನಲ್ಲಿ ನಿರಂತರವಾಗಿ ಇರುತ್ತದೆ ಎಂದರು.

ಹಿರಿಯ ಪ್ರವಚನಕಾರ ಶ್ರೀ ಸುವಿದ್ಯೆ0ದ್ರತೀರ್ಥ ಶ್ರೀಪಾದರು ಮಾತನಾಡಿ, ಧರ್ಮದಲ್ಲಿ ಸಾಮಾನ್ಯ ಮತ್ತು ವಿಶೇಷ ಎಂಬ ಎರಡು ವಿಧಗಳಿವೆ. ಭಕ್ತಿಯಿಂದ ಪುಂಡರೀಕಾಕ್ಷನಿಗೆ ಸ್ತೋತ್ರಗಳಿಂದ ಅರ್ಚನೆ ಮಾಡುವುದು ವಿಶೇಷ ಧರ್ಮ ಎಂದು ಭೀಷ್ಮಾಚಾರ್ಯರೇ ಹೇಳಿದ್ದಾರೆ.

ಸಹಸ್ರನಾಮದಿಂದ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ. ಸಾಮಾನ್ಯ ಧರ್ಮದಲ್ಲಿ ಇನ್ನೊಬ್ಬರನ್ನು ಅಪಹಾಸ್ಯಗೈಯದೆ ಪ್ರೋತ್ಸಾಹ, ಪ್ರಶಂಸೆ ಮಾಡಬೇಕು. ಸ್ವರ್ಣ ಗೋಪುರವನ್ನು ಶ್ರೀಕೃಷ್ಣನೇ ಮೆಚ್ಚಿಕೊಂಡಿದ್ದಾನೆ ಎಂದರು. ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಮಾಯಿಪ್ಪಾಡಿ ಅರಸರಾದ ಶ್ರೀ ದಾನ ಮಾರ್ತಾಂಡವರ್ಮ ರಾಜ, ವಿದ್ವಾನ್‌ ರಾಮ ವಿಟಲ ಆಚಾರ್ಯ, ಅದಾನಿ ಗ್ರೂಪ್‌ ಅಧ್ಯಕ್ಷ ಕಿಶೋರ್‌ ಆಳ್ವ ಉಪಸ್ಥಿತರಿದ್ದರು. ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Advertisement

ಇಂದು ಬ್ರಹ್ಮಕಲಶ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಸುವರ್ಣಗೋಪುರ ಸಮರ್ಪಣೆ ಅಂಗವಾಗಿ ರವಿವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಬ್ರಹ್ಮಕಲಶೋತ್ಸವವನ್ನು ವಿವಿಧ ಮಠಾಧೀಶರು ನಡೆಸಲಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಧಾರ್ಮಿಕ ಸಭೆ ಜರಗಲಿದೆ. ಮೇ 31ರಂದು ಆರಂಭಗೊಂಡ ವಿವಿಧ ಕಾರ್ಯಕ್ರಮಗಳ ಸಮಾರೋಪ ಜೂ. 10ರಂದು ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next