Advertisement
ಎರಡು ತ್ಯಾಜ್ಯ ನಿರ್ವಹಣಾ ಘಟಕಗಳುಯಾತ್ರಾರ್ಥಿಗಳ ಅಗತ್ಯವನ್ನು ಗಮನದಲ್ಲಿರಿಸಕೊಂಡು ಉತ್ತಮ ಶೌಚಾಲಯಗಳು ಹಾಗೂ ಇತರೆ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಚಂಪತ್ ರಾಯ್ ಹೇಳಿದ್ದಾರೆ. ತ್ಯಾಜ್ಯ ನೀರು ಮತ್ತು ವಸ್ತುಗಳನ್ನು ಸಂಸ್ಕರಿಸಲು 70 ಎಕರೆ ವ್ಯಾಪ್ತಿಯಲ್ಲಿ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ನಗರ ಸ್ಥಳೀಯ ಸಂಸ್ಥೆಗಳನ್ನು ಅವಲಂಬಿಸದೇ ಇರಲು ತೀರ್ಮಾನಿಸಲಾಗಿದೆ ಎಂದರು.
25 ಸಾವಿರ ಮಂದಿಗೆ ಅನುಕೂಲವಾಗುವಂತೆ ತೀರ್ಥಯಾತ್ರಿಗಳ ಕೇಂದ್ರ, ಒಂದು ಸಣ್ಣ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತದೆ. ಅದರಲ್ಲಿ ಪ್ರಾಥಮಿಕ ಔಷಧೋಪಚಾರ ಮಾಡುವ ವ್ಯವಸ್ಥೆ ಇರಲಿದೆ. ಶೇ.70 ಹಸಿರು ವ್ಯವಸ್ಥೆ
70 ಎಕರೆ ಜಮೀನಿನಲ್ಲಿ ಶೇ.70ರಷ್ಟು ಹಚ್ಚ ಹಸುರಿಗೆ ಪ್ರಾಧಾನ್ಯತೆ ನೀಡಲಾಗಿದೆ. ಗಿಡ-ಮರಗಳನ್ನು ಬೆಳಸುವುದರ ಜತೆಗೆ ಸಂಪೂರ್ಣ ಹಸಿರು ಪರಿಸರವನ್ನು ನಿರ್ಮಿಸುವ ಮೂಲಕ ಯಾತ್ರಾತಿಗಳು ವಿಹರಿಸಕು, ವಿಶ್ರಮಿಸಲು ಪೂರಕವಾದ ವಾತಾವರಣವನ್ನೂ ಸೃಷ್ಟಿಸಲಾಗುತ್ತಿದೆ.
Related Articles
ಮಂದಿರಕ್ಕೆ ಆಗಮಿಸುವ ವೃದ್ಧರು ಮತ್ತು ವಿಕಲ ಚೇತನರೂ ಕೂಡ ಆರಾಮದಾಯಕವಾಗಿ ಪ್ರವೇಶಿಸಲು ಪೂರಕವಾಗುವಂತೆ ದ್ವಾರದಲ್ಲೇ ಲಿಫ್ಟ್ ಅಳವಡಿಕೆಯನ್ನೂ ಮಾಡಲಾಗುತ್ತಿದೆ. ಅಲ್ಲದೇ, ವೀಲ್ ಚೇರ್‌ಗಳಲ್ಲಿ ಬರುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಇಳಿಜಾರು ವ್ಯವಸ್ಥೆಯನ್ನೂ ಸ್ಥಾಪಿಸಲಾಗುತ್ತಿದೆ.
Advertisement
ಮಂದಿರ ಉದ್ಘಾಟನೆಗೆ ಮಮತಾ ಗೈರು ಸಾಧ್ಯತೆಕೋಲ್ಕತ್ತಾ: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆ ಸಮಾರಂಭಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರಾಗುವ ಸಾಧ್ಯತೆಗಳು ಇವೆ. ಟಿಎಂಸಿಯ ಇತರ ನಾಯಕರೂ ಕೂಡ ಭಾಗವಹಿಸುವ ಸಾಧ್ಯತೆಗಳು ಕಡಿಮೆ. ಮಂದಿರ ಉದ್ಘಾಟನೆಗೆ ನೀಡಿರುವ ಆಹ್ವಾನವನ್ನು ಕೆಲವು ಎಡ ಪಕ್ಷಗಳು ತಿರಸ್ಕರಿಸುತ್ತಿರುವ ನಡುವೆಯೇ ಈ ಬೆಳವಣಿಗೆ ವರದಿಯಾಗಿದೆ. 2024ರ ಲೋಕಸಭೆ ಚುನಾವಣೆಗೆ ರಾಮ ಮಂದಿರವನ್ನು ಪ್ರಚಾರವಾಗಿ ಬಿಜೆಪಿ ಬಳಸಿಕೊಳ್ಳುತ್ತಿದ್ದೆ ಎಂದು ಟಿಎಂಸಿ ಭಾವಿಸಿದೆ.