Advertisement

ಮಹಾರಾಷ್ಟ್ರದ ಗುಡ್ಡಾಪುರಕ್ಕೆ ಭಕ್ತರ ಪಾದಯಾತ್ರೆ

03:32 PM Dec 02, 2021 | Team Udayavani |

ರಬಕವಿ-ಬನಹಟ್ಟಿ: ಪ್ರತಿ ವರ್ಷದಂತೆ ಈ ವರ್ಷವೂ ರಬಕವಿ ಬನಹಟ್ಟಿ, ರಾಂಪೂರ, ಹನಗಂಡಿ, ಹೊಸೂರ ಸೇರಿದಂತೆ ಅನೇಕ ಗ್ರಾಮಗಳಿಂದ ಅಲ್ಪ ಪ್ರಮಾಣದ ಭಕ್ತರು ಪಾದಯಾತ್ರೆ ಮೂಲಕ ಡಿ.1 ರಿಂದ 5ರವರೆಗೆ ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ಜರುಗುವ ದಾನಮ್ಮದೇವಿ ಜಾತ್ರೆ ಹಾಗೂ ಕಾರ್ತಿಕೋತ್ಸವಕ್ಕೆ ಬುಧವಾರ ಬೆಳಗ್ಗೆ ತೆರಳಿದರು.

Advertisement

ಬೆಳಗಿನ ಜಾವ 5 ಗಂಟೆಗೆ ರಬಕವಿ ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ದೇವಿಗೆ ವಿಶೇಷಪೂಜೆ ಸಲ್ಲಿಸಿದ ಬಳಿಗೆ ರಬಕವಿ ದಾನಮ್ಮದೇವಿ ಪಾದಯಾತ್ರಾ ಕಮಿಟಿ ಸದಸ್ಯರು ಪಾದಯಾತ್ರೆಗೆ ಚಾಲನೆ ನೀಡಿದರು. ಪಾದಯಾತ್ರೆಗೆ ತೆರಳುವ ಮಾರ್ಗದಲ್ಲಿ ರಬಕವಿ ಶಿಕ್ಕಲಗಾರ ಸಮಾಜದ ಮುಖಂಡ ಶೇಖರ ಹಳಿಂಗಳಿ ನೇತೃತ್ವದಲ್ಲಿ ಅನ್ನಪ್ರಸಾದ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಬೆಳಗಿನ 5.30ರಿಂದಲೇ ಕೃಷ್ಣಾ ನದಿ ತೀರದಲ್ಲಿ ಬೋಟ್‌ಗಳ ಮೂಲಕ ಆಚೆ ದಡ ಸೇರಿದರು.

ಪಾದಯಾತ್ರಿಗಳು ಮಹೇಷವಾಡಗಿ ಗ್ರಾಮದ ಮಾರ್ಗವಾಗಿ ಡಿ.3ರಂದು ಗುಡ್ಡಾಪುರ ಪ್ರವೇಶಿಸಲಿದ್ದು, ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಈ ಬಾರಿ ದಾನಮ್ಮದೇವಿ ದೇವಸ್ಥಾನ
ಆವರಣದಲ್ಲಿ ವಸ್ತಿ ಹಾಗೂ ದಾಸೋಹ ನಿಷೇ ಧಿಸಲಾಗಿದ್ದು, ಅದಕ್ಕಾಗಿ ಕಡಿಮೆ ಪ್ರಮಾಣದಲ್ಲಿ ಭಕ್ತರು ತೆರಳಿದ್ದಾರೆ ಎಂದು ರಬಕವಿ ಪಾದಯಾತ್ರೆ ಕಮಿಟಿ ಅಧ್ಯಕ್ಷ  ಶ್ರೀಕಾಂತ ಲಾಳಕೆ ತಿಳಿಸಿದ್ದಾರೆ.

ಡಿ.4ರಂದು ವಿಶೇಷ ಜಾತ್ರೆ ಹಾಗೂ ಕಾರ್ತಿಕ ಮಾಸದ ನಿಮಿತ್ತ ದೀಪೋತ್ಸವ ಸಮಾರಂಭದಲ್ಲಿ ಬಾಗಿಯಾಗಿ ಭಕ್ತರು ತಮ್ಮ ಊರುಗಳತ್ತ ಮರಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next