Advertisement

ಸೇವೆ ಸಲ್ಲಿಸುವ ಭಕ್ತರಿಗೆ ಸದಾ ದೈವದೇವರ ಅನುಗ್ರಹ: ಕೊಂಡೆವೂರು ಶ್ರೀ

04:51 PM Apr 27, 2019 | sudhir |

ಕುಂಬಳೆ: ಪೊಯೆÂ ಶ್ರೀ ಚಾಮುಂಡೇಶ್ವರಿ ಭಜನ ಮಂಡಳಿ ಸುವರ್ಣ ಮಹೋತ್ಸವದ ಹೊರೆ ಕಾಣಿಕೆ ಸಮ ರ್ಪಣೆಗೆ ಸುಂಕದಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ಭಜನ ಮಂದಿರದಲ್ಲಿ ಚಾಲನೆ ನೀಡಿ ಮಾತನಾಡಿದ ಕೊಂಡೆ ವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಯವರು ಅನ್ನದಾಕ್ಕಿಂತ ಬೇರೆ ದಾನವಿಲ್ಲ. ದೈವದೇವ ಮಂದಿರಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರ ಹೊಟ್ಟೆ ಹಸಿವನ್ನು ನೀಗಿಸಬಲ್ಲ ಅನ್ನ ಸಂತರ್ಪಣೆಗೆ ದೇವರ ಸೇವೆಗೆ ಅಕ್ಕಿ,ಧಾನ್ಯ ತರಕಾರಿ ಸಹಿತ ಹೊರೆಕಾಣಿಕೆಯ ಮೂಲಕ ವಿಶೇಷ ಸೇವೆ ಸಲ್ಲಿಸುವ ಭಕ್ತರಿಗೆ ದೈವದೇವರ ಅನುಗ್ರಹ ಸದಾ ಇರಲಿದೆ ಎಂದರು.

Advertisement

ಶ್ರೀ ದುರ್ಗಾ ಪರಮೇಶ್ವರಿ ಭಜನ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಲಕ್ಷೀ¾ನಾರಾಯಣ ಭಟ್‌ ಕೋಳ್ಯೂರು, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಭೋಜ ಮಾಸ್ಟರ್‌, ಗಣ್ಯರಾದ ಬಿ. ತ್ಯಾಂಪಣ್ಣ ರೈ, ಅರಿಬೈಲು ಗೋಪಾಲ ಶೆಟ್ಟಿ, ಮಾಧವ ಪೂಜಾರಿ ಕುದುಕೋರಿ, ಚಂದ್ರಹಾಸ ಪೂಜಾರಿ, ರಾಮಯ್ಯ ನಾೖಕ್‌, ಯು. ಸದಾಶಿವ, ಉಪಸ್ಥಿತರಿದ್ದರು. ಆನಂದ ಟಿ. ತಚ್ಚಿರೆ ಸ್ವಾಗತಿಸಿದರು. ಗಣೇಶ ಪಾವೂರು ವಂದಿಸಿದರು. ರವಿ ಮುಡಿಮಾರು ನಿರೂಪಿಸಿದರು.

ದ್ವಿತೀಯ ದಿನ ವಾದ ಎ. 15 ರಂದು ಬೆಳಗ್ಗೆ ಪೂಜೆ ಸಾರ್ವಜನಿಕ ಹೂವಿನಪೂಜೆ ಬಳಿಕ ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಇಂದಿನ ಕಾರ್ಯಕ್ರಮ
ಎ. 16ರಂದು ಬೆಳಗ್ಗೆ ಪೂಜೆ ಸಾರ್ವ ಜನಿಕ ಹೂವಿನಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಗಂಟೆ 6.30ಕ್ಕೆ ದುರ್ಗಾ ನಮಸ್ಕಾರ, ಸಂಜೆ 7ಕ್ಕೆ ಗುರುಪುರ ಮಠದ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ವಜ್ರದೇಹಿ ಯವರ ಉಪಸ್ಥಿತಿಯಲ್ಲಿ ಸಂಘದ ಸದಸ್ಯರಿಂದ ಭಜನ ಸಂಕೀರ್ತನೆ, ರಾತ್ರಿ 8ಕ್ಕೆ ದುರ್ಗಾ ನಮಸ್ಕಾರ ಪೂಜೆ ಸಮಾಪ್ತಿ, 8.30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next