Advertisement
ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಿಟುವಳ್ಳಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ದಾವಣಗೆರೆತಾಲೂಕಿನ ಕಕ್ಕರಗೊಳ್ಳದ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆ ಹಾಗೂದೊಡ್ಡಬಾತಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಸಮಗ್ರ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಿದ್ದಾರೆ.
Related Articles
Advertisement
ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 25 ಲಕ್ಷ ರೂ. ಅನುದಾನದಲ್ಲಿ 2 ಹೊಸ ಕೊಠಡಿ ನಿರ್ಮಾಣ, 25 ಡೆಸ್ಕ್, 5 ಗ್ರೀನ್‌ಬೋರ್ಡ್,ಶಾಲಾ ದುರಸ್ತಿ ಮತ್ತುಸುಣ್ಣ ಬಣ್ಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಲೆಯಲ್ಲಿ 1-8ನೇ ತರಗತಿಯವರೆಗೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಕೊಠಡಿಗಳ ಕೊರತೆ ಬಹಳವಾಗಿಯೇ ಇದೆ. ಕೆಲವಾರು ಸಂದರ್ಭದಲ್ಲಿ ಅನಿವಾರ್ಯ ಕಾರಣಕ್ಕೆ ಮಕ್ಕಳನ್ನು ಹೊರಗೆ ಕುಳಿಸಿ, ಪಾಠಮಾಡಬೇಕಾಗುತ್ತದೆ. ದತ್ತು ಪಡೆದಿರುವಶಾಲೆಗೆ ಇನ್ನೂ 4 ಹೊಸ ಕೊಠಡಿ ಅಗತ್ಯ ಇದೆ. ಇನ್ನೂ ಒಂದು ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ ಬೇಕು. ಗ್ರಂಥಾಲಯಗಳಲ್ಲಿನ ಪುಸ್ತಕ ಸಂಗ್ರಹಣೆಗೆ ಅಗತ್ಯ ವ್ಯವಸ್ಥೆ ಆಗಬೇಕು ಎನ್ನುತ್ತಾರೆ ಪ್ರಭಾರಿ ಮುಖ್ಯ ಶಿಕ್ಷಕ ಶಿವಶಂಕರ್.
ಕೆಪಿಎಸ್ ಶಾಲೆ ದೊಡ್ಡಬಾತಿ : ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ2 ಹೊಸ ಕೊಠಡಿ, 50 ಡೆಸ್ಕ್, ಕುಡಿಯುವ ನೀರು ಫಿಲ್ಟರ್, ಶಾಲಾ ರಿಪೇರಿ, ಸುಣ್ಣ ಬಣ್ಣಕ್ಕಾಗಿ 25 ಲಕ್ಷ ರೂ. ಅನುದಾನದ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಇದು ಪಬ್ಲಿಕ್ ಶಾಲೆಯಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ. ಈ ಶಾಲೆಗೆ ಹೈಟೆಕ್ ಶೌಚಾಲಯದ ಅತಿ ಅಗತ್ಯ ಇದೆ. ಇನ್ನೂ ಎರಡು ಹೊರ ಕೊಠಡಿಗಳ ಅಗತ್ಯತೆ ಇದೆ. ಸುಂದರ ಸ್ವತ್ಛ ಪರಿಸರ ನಿರ್ಮಾಣ ಇತರೆ ಕೆಲಸ ಕಾರ್ಯ ಆದಲ್ಲಿ ಈ ಪಬ್ಲಿಕ್ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುತ್ತೇವೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಎಸ್. ಭೀಮಪ್ಪ
ನನ್ನ ಕ್ಷೇತ್ರ ನನ್ನಶಾಲೆಅಭಿವೃದ್ಧಿಗೆ ಒತ್ತು :
ಕೇಂದ್ರ ಸರ್ಕಾರದ ಸೂಚನೆ, ಆಶಯದಂತೆ, ಮಹತ್ವಾಕಾಂಕ್ಷೆಯಂತೆ ಶಾಸಕರಪ್ರದೇಶಾಭಿವೃದ್ಧಿ ಯೋಜನೆಯಲ್ಲಿದಾವಣಗೆರೆ ಉತ್ತರ ವಿಧಾನ ಸಭಾಕ್ಷೇತ್ರದಲ್ಲಿ ಈಗ ದತ್ತು ತೆಗೆದುಕೊಂಡಿರುವ ಮೂರು ಶಾಲೆಗಳು ಬಹಳ ಚೆನ್ನಾಗಿ ನಡೆಯುತ್ತಿವೆ. ನಿಟುವಳ್ಳಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಬರುತ್ತಾರೆ. ಎಲ್ಲಾ ಶಾಲೆಗಳನ್ನು ಇನ್ನೂ ಹೆಚ್ಚು ಮಜಬೂತು ಮಾಡುವ ಆಶಯ ತಮಗಿದೆ. ಎಸ್.ಎ. ರವೀಂದ್ರನಾಥ್, ಶಾಸಕರು, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ
-ರಾ. ರವಿಬಾಬು