Advertisement

ದೇವಿಕೊಪ್ಪ ಸೀಲ್‌ಡೌನ್‌

09:58 AM Jun 10, 2020 | Suhan S |

ಧಾರವಾಡ: ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಕೋವಿಡ್ ಸೋಂಕು ಪತ್ತೆಯಾದ ಕಾರಣ ಸೋಂಕಿತನ ಮನೆಯಿಂದ 100 ಮೀ ಅಂತರದವರೆಗಿನ ಪ್ರದೇಶವನ್ನು ನಿಯಂತ್ರಿತ ವಲಯವೆಂದು ಘೋಷಿಸಿ, ಸಂಪೂರ್ಣ ಪ್ರದೇಶವನ್ನು ಸೀಲ್‌ಡೌನ ಮಾಡಿ ಡಿಸಿ ದೀಪಾ ಚೋಳನ್‌ ಆದೇಶಿಸಿದ್ದಾರೆ.

Advertisement

ಇದರ ಜತೆಗೆ ದೇವಿಕೊಪ್ಪ ಗ್ರಾಮವನ್ನು ಬಫರ್‌ ಝೋನ್‌ವನ್ನಾಗಿ ಘೋಷಣೆ ಮಾಡಿದ್ದು, ಗ್ರಾಮದಿಂದ ಹೊರಗಡೆ ಹಾಗೂ ಗ್ರಾಮಕ್ಕೆ ಹೊರಗಡೆಯಿಂದ ಒಳಗಡೆ ಪ್ರವೇಶಕ್ಕೆ ಸಂಪೂರ್ಣ ನಿಷೇಧಿಸಲಾಗಿದೆ. ಮನೆಯಿಂದ ಯಾರೂ ಹೊರಗಡೆ ತಿರುಗಾಡದಂತೆ ಹಾಗೂ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡದಂತೆ ಸೂಚಿಸಲಾಗಿದೆ.

ಈ ಬಫರ್‌ ಝೋನ್‌ನಲ್ಲಿ ಸದಾ ಕಣ್ಗಾವಲು ಮತ್ತು ಸಾಮಾಜಿಕ ಅಂತರ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ. ಇನ್ನೂ ಈ ನಿಯಂತ್ರಿತ ವಲಯ ಪ್ರದೇಶಕ್ಕೆ ಘಟನಾ ನಿಯಂತ್ರಕ (ಕಮಾಂಡರ್‌)ರನ್ನಾಗಿ ದೇವಿಕೊಪ್ಪದ ಹೈಸ್ಕೂಲ್‌ ಹೆಡ್‌ಮಾಸ್ಟರ್‌ ಕುಮಾರ ಕೆ.ಎಫ್‌.ಅವರನ್ನು ಜಿಲ್ಲಾಡಳಿತ ನೇಮಕ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next