Advertisement

ಫ‌ಡ್ನವಿಸ್‌, ಮರು ಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

10:09 AM Mar 04, 2020 | Team Udayavani |

ನವದೆಹಲಿ: 2014ರ ಚುನಾವಣೆಯಲ್ಲಿ ತಪ್ಪು ಅಫಿಡವಿಟ್‌ ನೀಡಿದ ಪ್ರಕರಣದಲ್ಲಿ ವಿಚಾರಣೆ ಎದುರಿಸಬೇಕು ಎಂದು ನೀಡಿದ್ದ ತೀರ್ಪನ್ನು ಮರು ಪರಿಶೀಲನೆ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಇದರಿಂದಾಗಿ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫ‌ಡ್ನವಿಸ್‌ಗೆ ಹಿನ್ನಡೆಯಾಗಿದೆ.

Advertisement

ನ್ಯಾ.ಅರುಣ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಆದೇಶ ನೀಡಿ, ಮರು ಪರಿಶೀಲನೆ ಮಾಡುವ ಯಾವುದೇ ಅಂಶವೂ ಇಲ್ಲ ಎಂದು ಅಭಿಪ್ರಾಯಪಟ್ಟಿದೆ. ಫೆ.18ರಂದೇ ಪ್ರಕರಣದ ಬಗ್ಗೆ ಆದೇಶ ನೀಡಲಾಗಿದ್ದರೂ, ಮಂಗಳವಾರವಷ್ಟೇ ಆದೇಶದ ಪ್ರತಿಯನ್ನು ಸುಪ್ರೀಂಕೋರ್ಟ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಇದರಿಂದಾಗಿ ಫ‌ಡ್ನವಿಸ್‌ ಪ್ರಕರಣದಲ್ಲಿ ವಿಚಾರಣೆ ಎದುರಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next