Advertisement

ಬಿಸಿನೀರಿನ ಬುಗ್ಗಿ ಸುತ್ತ ಅಭಿವೃದ್ಧಿಯ ಸುಗ್ಗಿ

05:37 PM Feb 25, 2021 | Team Udayavani |

ಚಿಂಚೋಳಿ: ಪಟ್ಟಣದ ಮುಲ್ಲಾಮಾರಿ ನದಿ ದಂಡೆಯಲ್ಲಿರುವ ಐತಿಹಾಸಿಕ “ಪಂಚಲಿಂಗೇಶ್ವರ ಬುಗ್ಗಿ’ಯ ಸುತ್ತಮುತ್ತಲಿನ ಮುಳ್ಳಿನ ಗಿಡಗಂಟಿಗಳನ್ನು ತೆಗೆದು ಹಾಕಿ ಉತ್ತಮ ಪರಿಸರ ನಿರ್ಮಿಸಲು ಅಭಿವೃದ್ಧಿ ಕೆಲಸಗಳು ಅವ್ಯಾಹತವಾಗಿ ನಡೆದಿವೆ.

Advertisement

ಲೋಕೋಪಯೋಗಿ ಇಲಾಖೆಯ 2018-19ನೇ ಸಾಲಿನ ಡಿಎಂಎಫ್‌ ಯೋಜನೆ ಅಡಿಯಲ್ಲಿ 59.61ಲಕ್ಷ ರೂ.ಗಳಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ.
ಬುಗ್ಗಿ ಸುತ್ತಮುತ್ತ ಪುಟ್‌ಪಾತ್‌ ಕೆಲಸ, ಬುಗ್ಗಿಯೊಳಗೆ ಹೋಗಲು ಕಮಾನು ನಿರ್ಮಿಸುವುದು, ಶಿವರಾತ್ರಿ ಅಮಾವಾಸ್ಯೆ ದಿವಸ ಪಂಚಲಿಂಗೇಶ್ವರ ದರ್ಶನಕ್ಕೆ ಬರುವ ಶಿವಭಕ್ತರಿಗೆ ಕುಳಿತು ದೇವರ ಧ್ಯಾನ ಮಾಡಲು ಪ್ರತ್ಯೇಕ ಗೋಪುರ ನಿರ್ಮಿಸಲಾಗುತ್ತಿದೆ. ನದಿ ನೀರಿನ ಪ್ರವಾಹದಿಂದ ಯಾವುದೇ ಹಾನಿಯಾಗದಂತೆ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಲಾಗುತ್ತಿದೆ.

ಬುಗ್ಗಿಯಲ್ಲಿ ಪ್ರತಿನಿತ್ಯ ಬೆಳಗ್ಗೆ ಸ್ನಾನ ಮಾಡಿದರೆ ಬಿಳಿ ಚರ್ಮರೋಗ ನಿವಾರಣೆ ಆಗುತ್ತದೆ. ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿರುವ
ಭೋಗಲಿಂಗೇಶ್ವರ ದೇವಸ್ಥಾನ ಹತ್ತಿರವಿರುವ ಸಣ್ಣ ಕೊಳ್ಳದ ನೀರು ಬುಗ್ಗಿಗೆ ಹರಿದು ಬರುತ್ತದೆ ಎಂದು ಹಿರಿಯರಾದ ಮಲ್ಲಪ್ಪ ವಾಡಿ ತಿಳಿಸುತ್ತಾರೆ.

1973-74ರಲ್ಲಿ ತಾಲೂಕಿನಲ್ಲಿ ಭೀಕರ ಬರಗಾಲ ಉಂಟಾದಾಗ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿತ್ತು. ಈ ಸಂದರ್ಭದಲ್ಲಿ ಈ
ಬುಗ್ಗಿಯಿಂದಲೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ವರ್ಷವಿಡಿ ಹರಿಯುವ ಬುಗ್ಗಿ ನೀರನ್ನು ಕುಡಿಯಲು ನಿತ್ಯ ನೂರಾರು ಜನರು ಆಗಮಿಸುತ್ತಾರೆ.

ನೀರಿನ ಮಹಿಮೆ: ಬುಗ್ಗಿಯಲ್ಲಿ ಹರಿಯುವ ನೀರು ಚಳಿಗಾಲದಲ್ಲಿ ಬಿಸಿ ನೀರಾಗಿ ಹರಿದರೆ, ಬೇಸಿಗೆಯಲ್ಲಿ ತಣ್ಣೀರಾಗಿ ಹರಿಯುತ್ತದೆ. ಇಲ್ಲಿಗೆ ಬರುವವರು ಬುಗ್ಗಿಯಲ್ಲಿ ಸ್ನಾನ ಮಾಡಿ, ನಂತರ ಪಂಚಲಿಂಗೇಶ್ವರ ದರ್ಶನ ಮಾಡುತ್ತಾರೆ. ಶಿವರಾತ್ರಿ ಅಮಾವಾಸ್ಯೆ ಮತ್ತು ಹಾರಕೂಡ ಚೆನ್ನಬಸವೇಶ್ವರ ಜಾತ್ರೆಗೆ ಬರುವ ಭಕ್ತರು ಇಲ್ಲಿಗೆ ಬರುತ್ತಾರೆ. ಇಂತಹ ಕ್ಷೇತ್ರ ಅಭಿವೃದ್ಧಿ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎನ್ನುತ್ತಾರೆ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಜಗದೀಶಸಿಂಗ್‌ ಠಾಕೂರ, ಎಪಿಎಂಸಿ ನಿರ್ದೇಶಕ ಅಜೀತ ಪಾಟೀಲ .

Advertisement

ಚಿಂಚೋಳಿ ಮತಕ್ಷೇತ್ರದಲ್ಲಿ ನೀರಿನ
ಚಿಲುಮೆ (ಬುಗ್ಗಿ) ಹರಿಯುವುದನ್ನು ಒಂದೊಮ್ಮೆ ನೋಡಿದ ನಂತರ, ಅಭಿವೃದ್ಧಿ ಪಡಿಸುವ ನಿರ್ಧಾರ ಕೈಗೊಂಡಿದ್ದೇನೆ. ಉತ್ತಮ ವಾತಾವರಣ ಇರುವುದರಿಂದ ಸರ್ಕಾರದಿಂದ ಅಭಿವೃದ್ಧಿ ಪಡಿಸಲು ಹಣ ನೀಡಲಾಗಿದೆ.
ಡಾ|ಅವಿನಾಶ ಜಾಧವ, ಶಾಸಕ

*ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next