Advertisement

ಅಭಿವೃದ್ಧಿ ಕಾರ್ಯಗಳೇ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ

03:37 PM Apr 19, 2018 | Team Udayavani |

ಗುಂಡ್ಲುಪೇಟೆ: ಕ್ಷೇತ್ರದಲ್ಲಿ ನನ್ನ ಮತ್ತು ನನ್ನ ಪತಿಯವರ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಸಕ್ಕರೆ, ಸಣ್ಣಕೈಗಾರಿಕೆ ಸಚಿವೆ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಡಾ. ಎಂ.ಸಿ.ಮೋಹನಕುಮಾರಿ ಹೇಳಿದರು.

Advertisement

ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿ, ಕ್ಷೇತ್ರದಲ್ಲಿ ನನ್ನ ಮತ್ತು ನನ್ನ ಪತಿಯವರ ಅವಧಿಯಲ್ಲಿ ಕ್ಷೇತ್ರದ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಕಳೆದ ಹತ್ತು ಚುನಾವಣೆಯಲ್ಲಿ 4ರಲ್ಲಿ ನಮ್ಮ ಕುಟುಂಬ ಸೋಲನ್ನು ಕಂಡು 6ರಲ್ಲಿ ಜಯಭೇರಿ ಬಾರಿಸಿದೆ. ಈ ಬಾರಿಯೂ ಸಹ ಹಾಲಹಳ್ಳಿ ಕುಟುಂಬ ಗೆಲುವು ಸಾಧಿಸುವುದು ಶತಸಿದ್ಧ ಎಂದು ವಿಶ್ವಾಸದಿಂದ ನುಡಿದರು.

ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದ ಈ ಗ್ರಾಮದ ಕೆರೆಗೆ ನದಿಮೂಲದಿಂದ ನೀರು ತುಂಬಿಸಿ ಇಡೀ ಹೋಬಳಿಯಲ್ಲಿ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿದ್ದೇನೆ. ಗ್ರಾಮೀಣ ಪ್ರದೇಶಗಳಲ್ಲಿ ತೀವ್ರವಾಗಿದ್ದ ಕುಡಿಯುವ ನೀರು ಕೊರತೆ ನೀಗಿಸಲು ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನ ಹಾಗೂ ಎಲ್ಲಾ ಕೆರೆಗಳಿಗೂ ನದಿ ಮೂಲದಿಂದ ನೀರು ತುಂಬಿಸುವ ಕಾಮಗಾರಿ ನಡೆಸಲಾಗುತ್ತಿದೆ. ಕಳೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ದಿ.ಎಚ್‌.ಎಸ್‌.ಮಹದೇವ ಪ್ರಸಾದರ ಕನಸು ನನಸು ಮಾಡಲು ತಾವು ಒಂದು ದಿನವೂ ಮನೆಯಲ್ಲಿರದೆ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಕ್ಷೇತ್ರದ ಜನತೆಯ ನಡುವೆ ಪತಿಯನ್ನು ಕಳೆದುಕೊಂಡ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದು ಅಭಿವೃದ್ಧಿ ಕಾರ್ಯಗಳ ಮುಂದುವರಿಕೆಗೆ ಮತ್ತೂಮ್ಮೆ ಮತನೀಡಿ ಎಂದರು. 

ತಾಲೂಕಿನ ಕಗ್ಗಳ, ಕಗ್ಗಳದ ಹುಂಡಿ, ತೆರಕಣಾಂಬಿಹುಂಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ತೆರಳಿ ಮತಯಾಚನೆ ಮಾಡಿದರು. ಪ್ರತಿ ಗ್ರಾಮದಲ್ಲೂ ಆರತಿ ಎತ್ತಿ ಸ್ವಾಗತಿಸುವುದರೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಶ್ವಿ‌ನಿ ವಿಶ್ವನಾಥ್‌, ಪಿ.ಚನ್ನಪ್ಪ, ಬಿ.ಕೆ.ಬೊಮ್ಮಯ್ಯ, ಮಾಜಿ ಸದಸ್ಯ ಪಿ.ಮಹದೇವಪ್ಪ, ಗ್ರಾಪಂ ಅಧ್ಯಕ್ಷ ಟಿ.ಎಚ್‌.ಉಮೇಶ್‌, ತಾಲೂಕು ಪಂಚಾಯಿತಿ ಅಧ್ಯಕ್ಷ ಜಗದೀಶ್‌, ಮಲೆಮಹದೇಶ್ವರ ಬೆಟ್ಟದ ಧರ್ಮದರ್ಶಿ ಮಂಡಳಿಯ ಮಾಜಿ ಅಧ್ಯಕ್ಷ ದೇಪಾಪುರ ಸಿದ್ದಪ್ಪ, ಚಾಮುಲ್‌ ನಿರ್ದೇಶಕ ಎಚ್‌. ಎಸ್‌.ನಂಜುಂಡಪ್ರಸಾದ್‌, ಮುಖಂಡ ಎಚ್‌.ಎಂ.ಗಣೇಶ್‌ ಪ್ರಸಾದ್‌ ಸೇರಿದಂತೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next