Advertisement

ಬಿಜೆಪಿಯಿಂದಲೇ ರೈತರ ಏಳ್ಗೆ: ಸಿದ್ದೇಶ್ವರ್‌

06:10 PM Nov 22, 2020 | Suhan S |

ಜಗಳೂರು: ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಶ್ರೇಯೋಭಿವೃದ್ಧಿಗಾಗಿ ಸಾಯಿಲ್‌ ಹೆಲ್ತ್‌ಕಾರ್ಡ್‌, ಫಸಲ್‌ ಬಿಮಾ ಸೇರಿದಂತೆ ಇನ್ನಿತರಯೋಜನೆಗಳನ್ನು ಜಾರಿಗೆ ತಂದಿದೆ. ಎಪಿಎಂಸಿ ಸೇರಿದಂತೆ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವಮೂಲಕ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಅನುಕೂಲವಾಗಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿ ವಿವಿಧಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದಅವರು, ಈ ಹಿಂದೆಯೇ ಉದ್ಘಾಟನೆಯಾಗಬೇಕಿದ್ದಕಾಮಗಾರಿಗಳಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ನನೆಗುದಿಗೆ ಬೀಳುವಂತಾಗಿ ಇದೀಗ ಕಾಲ ಕೂಡಿ ಬಂದಿದೆ. ತಾಲೂಕಿನ ಅಸಗೋಡು ಗ್ರಾಮದಲ್ಲಿ41 ಲಕ್ಷಕ್ಕೂ ಹೆಚ್ಚಿನ ಅನುದಾನದಲ್ಲಿ 500 ಎಂ.ಟಿ. ಗೋದಾಮು, 84 ಲಕ್ಷ ವೆಚ್ಚದಲ್ಲಿ ಅಣಬೂರು ಹಾಗೂಸೊಕ್ಕೆಯಲ್ಲಿ ಮುಚ್ಚು ಹರಾಜು ಕಟ್ಟೆ ನಿರ್ಮಾಣಮತ್ತು ಎಪಿಎಂಸಿ ಮಾರುಕಟ್ಟೆಯ ಪ್ರಾಂಗಣದಲ್ಲಿ47 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ, ರಸ್ತೆ ಹಾಗೂಸುತ್ತು ಗೋಡೆ ನಿರ್ಮಾಣ ಮಾಡಲಾಗಿದೆ. ದೇಶದ ಗುಜರಾತ್‌, ದೆಹಲಿ ಹಾಗೂ ಕೇರಳ ರಾಜ್ಯದಲ್ಲಿ

ಕೋವಿಡ್  ಎರಡನೇ ಅಲೆ ಪ್ರಾರಂಭವಾಗಿದ್ದು, ಸಾರ್ವಜನಿಕರು ನಿರ್ಲಕ್ಷಿಸದೆ ಮಾಸ್ಕ್, ಸ್ಯಾನಿಟೈಸರ್ಹಾಗೂ ಸಾಮಾಜಿಕ ಅಂತರ ಪರಿಪಾಲನೆ ಮಾಡುವಮೂಲಕ ಆರೋಗ್ಯದ ಕಡೆ ಹೆಚ್ಚಿನ ಗಮನಕೊಡಬೇಕಾಗಿದೆ. ಈ ಹಿಂದೆ ಎಪಿಎಂಸಿ ಅಧ್ಯಕ್ಷರಾಗಿದ್ದ ಎಚ್‌.ಸಿ.ಮಹೇಶ್‌ ಅವರ ಅವಧಿಯಲ್ಲಿ ಟೆಂಡರ್‌ ಪ್ರಕ್ರಿಯೆ ಪ್ರಾರಂಭಗೊಳ್ಳುವಂತಾಗಿದ್ದು, ಇದೀಗ 1 ಕೋಟಿಗೂ ಹೆಚ್ಚು ವ್ಯಾಪಾರ ವಹಿವಾಟು ನಡೆಯುವಂತಾಗಿದೆ ಎಂದರು.

ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ವಿ.ರಾಮಚಂದ್ರ ಮಾತನಾಡಿ, ಸಂಸದರ ಕಾಳಜಿಯಿಂದಾಗಿ ಪಟ್ಟಣ ಹಾಗೂ ತಾಲೂಕುಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಉಳಿದ ಎರಡೂವರೆ ವರ್ಷಗಳ ಅವ ಧಿಯಲ್ಲಿ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿಪಡಿಸಲಾಗುವುದು. ಬರುವಜೂನ್‌ ವೇಳೆಗೆ 57 ಕೆರೆಗಳಿಗೆ ಶೇ.70 ರಷ್ಟುನೀರನ್ನು ತುಂಬಿಸುವ ಗುರಿ ಹೊಂದಲಾಗಿದ್ದು,ಇದರಿಂದಾಗಿ ಅಂತರ್ಜಲ ಹೆಚ್ಚಳವಾಗಿ ರೈತರ ಕೃಷಿಚಟುವಟಿಕೆಗಳಿಗೆ ಸಹಕಾರಿಯಾಗಲಿದೆ. ಅಲ್ಲದೆ ಪಟ್ಟಣವನ್ನು ಮಾದರಿಯಾಗಿ ಮಾಡುವ ನಿಟ್ಟಿನಲ್ಲಿಈಗಾಗಲೇ ಶ್ರಮಿಸುತ್ತಿದ್ದು, ಅಣಬೂರು ಗುಡ್ಡದ ನೀರು ಪೋಲಾಗದಂತೆ ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ 1 ಕೋಟಿ ಅನುದಾನದಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಮಾಡಲಿದ್ದು, ಈ ಭಾಗದ ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಮುಸ್ಟೂರು ಮಠದ ಹುಚ್ಚನಾಗಲಿಂಗೇಶ್ವರ ಸ್ವಾಮಿ, ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ಉಪಾಧ್ಯಕ್ಷ ಗುರುಮೂರ್ತಿ, ಮಾಜಿ ಅಧ್ಯಕ್ಷರಾದಯು.ಜಿ. ಶಿವಕುಮಾರ್‌, ಹನುಮಂತಪ್ಪ, ಎನ್‌.ಎಸ್‌.ರಾಜು, ಉಮಾದೇವಿ, ಸದಸ್ಯರಾದ ಎಸ್‌. ಕೆ.ರಾಮರೆಡ್ಡಿ, ನಿರ್ಮಲಾ, ಶೈಲಾಚಾರಿ, ಆರ್‌.ವಿ.ಗೋವಿಂದರಾಜ್‌, ಎಸ್‌.ಜೆ. ಮಲ್ಲಿಕಾರ್ಜುನ ಸ್ವಾಮಿ, ಜಿ.ಎಚ್‌.ರಘುರಾಂ, ಎಂ.ಎಸ್‌.ಪಾಟೀಲ್‌, ಬಿ.ಆರ್‌.ಸುಧಾಮಣಿ, ಪಪಂ ಅಧ್ಯಕ್ಷ ಆರ್‌.ತಿಪ್ಪೇಸ್ವಾಮಿ,ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್‌.ಸಿದ್ದೇಶ್‌, ಬಿಜೆಪಿ ಮಂಡಲ ಅಧ್ಯಕ್ಷ ಎಚ್‌.ಸಿ.ಮಹೇಶ್‌, ಕೃಷ್ಣಮೂರ್ತಿ, ಬಿಸ್ತುವಳ್ಳಿ ಬಾಬು, ಇಂದ್ರೇಶ್‌, ಬಾಲಕೃಷ್ಣ, ತುಪ್ಪದಹಳ್ಳಿ ಪೂಜಾರ ಸಿದ್ದೇಶ್‌, ಎಪಿಎಂಸಿ ಕಾರ್ಯದರ್ಶಿ ಯೋಗರಾಜ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next