ತುಮಕೂರು: ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಿಂದ ಹಲವಾರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಜೊತೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದ ವಾರ್ಡ್ ಗಳಲ್ಲಿಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ತುಮಕೂರು ಒಂದು ಮಾದರಿ ನಗರವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಇಲ್ಲಿಯ ಮಹಾನಗರಪಾಲಿಕೆ ವ್ಯಾಪ್ತಿಯ 35ನೇ ವಾರ್ಡ್‌ನಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಅನುದಾನದಲ್ಲಿ ಮಹಾಲಕ್ಷ್ಮೀ ಬಡಾವಣೆಯ 1ನೇ ಹಂತದ 2ನೇ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜಸ್ವ ವಸೂಲಾತಿ: ನಗರದ ಹಲವು ಕಡೆಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಿಂದ ಈಗ ನೂರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚವಿರುವ ಕೋವಿಡ್ ದಿಂದಾಗಿ ಸರ್ಕಾರದಲ್ಲಿ ರಾಜಸ್ವ ವಸೂಲಾತಿ ಕಡಿಮೆಯಾಗಿದ್ದು, ಇನ್ನು ರಾಜಸ್ವ ವಸೂಲಾತಿ ಹೆಚ್ಚಳವಾಗಲಿದೆ ಎನ್ನುವ ವಿಶ್ವಾಸವಿದೆ. ಅದು ಹೆಚ್ಚಾದರೆ ಮುಂದಿನ ದಿನದಲ್ಲಿ ಇನ್ನು ಅಗತ್ಯವಿರುವ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ, ನಗರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಈಗ ಸ್ಮಾರ್ಟ್‌ಸಿಟಿ ಹೊರತುಪಡಿಸಿ ಮುಖ್ಯ ಮಂತ್ರಿಗಳು ಹೆಚ್ಚಿನ 25 ಕೋಟಿಗಳನ್ನು ನಗರದ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ, ಈ ಭಾಗದಲ್ಲಿ 90 ಲಕ್ಷ ವೆಚ್ಚಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ ಎಂದು ನುಡಿದರು.
ಹೆಚ್ಚಿನ ಅಭಿವೃದ್ಧಿ ಕಾರ್ಯ: ಸಾರ್ವಜನಿಕರ ಅನುಕೂಲಕ್ಕೆ ಅವಶ್ಯಕತೆ ಇರುವಲ್ಲಿ ಕಾಮಗಾರಿ ಮಾಡಲಾಗಿದ್ದು, ಈ ವಾಡ್ ನಗರದ ಒಂದು ದೊಡ್ಡ ವಾರ್ಡ್ ಆಗಿದ್ದು, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಹಳಿ ಕೂಡ ಹಾದು ಹೋಗಿದ್ದು, ಈ ಭಾಗದಲ್ಲಿ ಬಹುತೇಕವಾಗಿ ಹೊಸ ಬಡಾವಣೆಗಳಿದ್ದು, ಸುಮಾರು 3 ಕಿ.ಮೀ ನಷ್ಟು ಸಿ.ಸಿ. ಚರಂಡಿ ಹಾಗೂ 200 ಮೀಟರ್ ನಷ್ಟು ಸಿ.ಸಿ. ರಸ್ತೆ ಅಭಿವೃದ್ಧಿ ಮಾಡ ಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬರಲಿದ್ದು, ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಮಹಾನಗರಪಾಲಿಕೆಯ ಸದಸ್ಯೆ ನಿರ್ಮಲ, ಮಾಜಿ ಪಾಲಿಕೆ ಸದಸ್ಯರಾದ ಟಿ.ಆರ್.ಬಸವ ರಾಜು, ಮುನಿಯಪ್ಪ, ಬಂಡೇಪಾಳ್ಯ ಸೋಮಶೇಖರ್ ಇದ್ದರು.
90 ಲಕ್ಷ ವೆಚ್ಚದಕಾಮಗಾರಿ : ತುಮಕೂರು ಮಹಾನಗರಪಾಲಿಕೆಯ 35ನೇ ವಾರ್ಡ್ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಅನುದಾನದಲ್ಲಿ ಮಹಾಲಕ್ಷ್ಮೀ ಬಡಾವಣೆಯ 1ನೇ ಹಂತದ 2ನೇ ಮುಖ್ಯರಸ್ತೆ (ಲಕ್ಷ್ಮೀ ನರಸಿಂಹಯ್ಯನವರ ಮನೆ ಹಿಂಭಾಗ ಆರ್‌ಎಸ್‌ಎಸ್ ಬಸವರಾಜು) ಮತ್ತು 11 ಎ ಮುಖ್ಯರಸ್ತೆಗೆ ಸಿ.ಸಿ. ಚರಂಡಿ ಕಾಮಗಾರಿ ಹಾಗೂ ಮಹಾಲಕ್ಷ್ಮೀ ನಗರ ದಕ್ಷಿಣ 1ನೇ ಮುಖ್ಯರಸ್ತೆಯ ಹಾಗೂ ಅಡ್ಡರಸ್ತೆಗಳಿಗೆ ಸಿ.ಸಿ. ಚರಂಡಿ ಕಾಮಗಾರಿ ಸಿದ್ದರಾಮೇಶ್ವರ ಬಡಾವಣೆಯ ಪೂರ್ವ ಮತ್ತು ಪಶ್ಚಿಮ ಭಾಗದ ಆಯ್ದ ರಸ್ತೆಗಳಿಗೆ ಸಿ.ಸಿ. ಚರಂಡಿ ಕಾಮಗಾರಿ ಹಾಗೂ ದೇವರಾಯಪಟ್ಟದ ಹೊಸಬಡಾವಣೆ ನಂಜುಂಡಪ್ಪ ನಿವೃತ್ತ ಕಂಡಕ್ಟರ್ ಮತ್ತು ಸೆಹನ್‌ವಾಜ್ ಎಚ್‌ಎಂಟಿ ಇವರ ಮನೆ ಮುಂದೆ ಸೇರಿದಂತೆ ವಿವಿಧೆಡೆ 90 ಲಕ್ಷ ವೆಚ್ಚದ ಕಾಮಗಾರಿ ನಡೆಯಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ನಗರದಲ್ಲಿಉತ್ತಮವಾದವಾತಾವರಣ ಕಾಣಬೇಕೆಂದರೆ ನಮ್ಮಪ್ರಧಾನಿಮೋದಿ ನಮಗೆ ನೀಡಿರುವ ಸ್ಮಾರ್ಟ್‌ಸಿಟಿ ಯೋಜನೆ ಇದರ ಅನುದಾನ ಮುಖ್ಯವಾದುದಾಗಿದ್ದು, ಈಗ ನೂರಾರು ಕೋಟಿರೂಗಳ ಕಾಮಗಾರಿ ಪ್ರಗತಿಯಲ್ಲಿಇದೆ,ಮುಂದಿನ ಹಲವು ಕಾಮಗಾರಿಪೂರ್ಣಗೊಳ್ಳಲಿವೆ.ಜನರು ಸಹಕಾರನೀಡಬೇಕು.
–ಜಿ.ಬಿ.ಜ್ಯೋತಿಗಣೇಶ್, ಶಾಸಕ