Advertisement

ಕೋವಿಡ್‌ನಿಂದ ಅಭಿವೃದ್ಧಿ ವಿಳಂಬ

07:54 PM Nov 20, 2020 | Suhan S |

ಮೂಡಲಗಿ: ಅರಭಾವಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 21.27 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕೆಎಂಎಫ್‌ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

Advertisement

ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಉದಗಟ್ಟಿಯಿಂದ ವಡೇರಹಟ್ಟಿ ಮಾರ್ಗವಾಗಿ ನಾಗನೂರ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕಾಮಗಾರಿಗೆ 5.35 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.

6.19 ಕೋಟಿ ರೂ. ವೆಚ್ಚದಲ್ಲಿ ಮಲ್ಲಾಪೂರ ಪಿಜಿಯಿಂದ ಬಡಿಗವಾಡ ವ್ಹಾಯಾ ದುರದುಂಡಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. 9.73 ಕೋಟಿ ರೂ. ವೆಚ್ಚದಲ್ಲಿ ಬೆಟಗೇರಿಯಿಂದ ಮೆಳವಂಕಿ ವ್ಹಾಯಾ ಉಪ್ಪಾರಹಟ್ಟಿ ರಸ್ತೆ ಕಾಮಗಾರಿಯೂ ಸಹ ಪ್ರಗತಿ ಹಂತದಲ್ಲಿದೆ ಎಂದು ಅವರು ಹೇಳಿದರು.

ಕೋವಿಡ್‌-19 ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ವಿಳಂಬವಾಗುತ್ತಿದ್ದರೂ ಸಹ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ವಕೀಲ ಮುತ್ತೆಪ್ಪ ಕುಳ್ಳೂರ, ಜಿಪಂ ಮಾಜಿ ಸದಸ್ಯ ಮಾರುತಿ ತೋಳಮರಡಿ, ಪ್ರಭಾಶುಗರ ನಿರ್ದೇಶಕ ಭೂತಪ್ಪ ಗೊಡೇರ, ತಾಪಂ ಸದಸ್ಯ ಗೋಪಾಲ ಕುದರಿ, ಹನಮಂತ ಕೊಪ್ಪದ, ಪರಸಪ್ಪ ಸಾರಾಪೂರ, ಮಲಕಾರಿ ವಡೇರ, ಬನಪ್ಪ ವಡೇರ, ರಂಗಪ್ಪ ಛಪ್ರಿ, ರುದ್ರಗೌಡ ಪಾಟೀಲ, ವಿಠಲ ಗಿಡೋಜಿ, ರಾಜು ಬಳಿಗಾರ, ಅಡಿವೆಪ್ಪ ಹಾದಿಮನಿ, ಪಾಂಡು ದೊಡಮನಿ, ಶಿದ್ಲಿಂಗ ಗಿಡೋಜಿ, ಚಂದ್ರು ಮೋಟೆಪ್ಪಗೋಳ, ರೆಬ್ಬೊàಜಿ ಮಳಿವಡೇರ,ಗೋಪಾಲ ಬೀರನಗಡ್ಡಿ, ಮಾರುತಿ ಮದ್ರಾಸಿ, ಉದಗಟ್ಟಿ-ವಡೇರಹಟ್ಟಿ ಗ್ರಾಮಗಳ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next