Advertisement

15 ತಿಂಗಳ ಅಧಿಕಾರದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಪಣ : ರಮೇಶ ಭೂಸನೂರ

07:12 PM Jan 01, 2022 | Team Udayavani |

ಸಿಂದಗಿ: ನನ್ನ ಅಧಿಕಾರದ ಅವಧಿಯಲ್ಲಿ ಕೇವಲ ಹಳ್ಳಿಗಳಿಗೆ ಹೆಚ್ಚು ಅಭಿವೃದ್ಧಿ ಮಾಡಲಾಗುತ್ತಿದೆ, ಪಟ್ಟಣ ನಿರ್ಲಕ್ಷ ಮಾಡುತ್ತಿದ್ದಾರೆ ಎಂಬ ಹಣೆಪಟ್ಟಿ ಅಳುಕಿಸಲು ಇನ್ನೂಳಿದ 15ತಿಂಗಳ ಅಧಿಕಾರದ ಅವಧಿಯಲ್ಲಿ ಪಟ್ಟಣವನ್ನು ಅಭಿವೃದ್ಧಿ ಮಾಡುವ ಮೂಲಕ ಪಟ್ಟಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಸೌಂದರ್ಯಿಕರಣ ಮಾಡಲಾಗುವುದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

Advertisement

ಪಟ್ಟಣದಲ್ಲಿ ಜಿಲ್ಲಾ ಪಂಚಾಯತ ವಿಜಯಪುರ, ಸಮಾಜ ಕಲ್ಯಾಣ ಇಲಾಖೆ ಸಿಂದಗಿ ಅವರು ಶನಿವಾರ ಹಮ್ಮಿಕೊಂಡ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಕಟ್ಟಡ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

150 ಕೋಟಿ ರೂ.ಗಿಂತ ಹೆಚ್ಚು ಅನುದಾನ ತರುವ ಮೂಲಕ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಮನಗೂಳಿ ಪೆಟ್ರೋಲ್ ಪಂಪಿಗೆ ನಿಂತ ಡಬಲ್ ರಸ್ತೆ ಕಾಮಗಾರಿ ಪ್ರಾರಂಭಿಸುವ ಮೂಲಕ ಅಲ್ಲಿಂದ ಗಾಂಧಿ ವೃತ್ತದವರೆಗೆ, ಅಂಬೇಡ್ಕರ್ ವೃತ್ತದಿಂದ ಟಿಪ್ಪು ವೃತ್ತ ಮಾರ್ಗವಾಗಿ ಸಿಂದಗಿ ಬೈಪಾಸ್ ವರೆಗೆ ಡಬಲ್ ರಸ್ತೆ ನಿರ್ಮಾಣ ಮಾಡಲಾಗುವುದು. ಪಟ್ಟಣದಲ್ಲಿ 2 ಒವರಹೆಡ್ ಟ್ಯಾಂಕಗಳಿದ್ದು ಇನ್ನು 2ಒವರ್ ಹೆಡ್ ಟ್ಯಾಂಕಗಳ ನಿರ್ಮಾಣ ಮಾಡುವ ಜೊತೆಗೆ ಮನೆ ಮನೆಗೆ ದಿನದ 24 ಗಂಟೆ ನೀರು ಸರಬರಾಜು ಮಾಡುವ ಯೋಜನೆ ಮಾಡಲಾಗಿದೆ. 93.60 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆ ಮಾಡಲಾಗಿದೆ. 15ದಿನಗಳಲ್ಲಿ ಸಚಿವ ಸಂಪುಟದ ಮುಂದೆ ತಗೆದುಕೊಂಡು ಹೋಗಿ ಮಂಜೂರು ಮಾಡಿಸಿಕೊಂಡು ಬರಲಾಗುವುದು. ಶಿಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ನಂತರ ಸಿಸಿ ರಸ್ತೆಗಳ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಪಕ್ಕದ ಆವರಣದಲ್ಲಿ 4 ಕೋಟಿ ರೂ. ಅನುದಾನದಲ್ಲಿ ಸುಸಜ್ಜಿತ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ನಿರ್ಮಾಣ ಮಾಡಲಾಗುವುದು. ಈ ಉದ್ಧೇಶದಿಂದ ಇಂದು ಕಟ್ಟಡ ಕಾಮಗಾರಿ ಭೂಮಿ ಪೂಜೆ ನೆರವೇರಿಸಲಾಗಿದೆ. ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ 8ಎಕರೆ ಜಮೀನು ಇದೆ. ಅಲ್ಲಿ 4 ಎಕರೆ ಜಮಿನಿನಲ್ಲಿ ಮಿನಿವಿಧಾನ ಸೌಧದ ಮಾದರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಕಚೇರಿ, ವಸತಿ ನಿಲಯಗಳು ಇರುವಂತ ಕಟ್ಟಡ ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿದೆ. ಹೀಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಕ್ಕಾಗಿ ಎಡಬಿಡದೇ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಸ್ಥಳಿಯ ಶಾಸಕ ರಮೇಶ ಭೂಸನೂರ ಒಬ್ಬ ಕ್ರಿಯಾಶೀಲ ಶಾಸಕರಾಗಿದ್ದಾರೆ. ಅವರು ತಮ್ಮ ಅಧಿಕಾರದ ಅವಧಿಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವ ಯೋಜನೆ ಹೊಂದಿದ್ದಾರೆ. ವಸತಿ ನಿಲಯದ ಕಾಮಗಾರಿ ಸುಸಜ್ಜಿತವಾಗಿ ನಿಗದಿತ ಸಮಯದಲ್ಲಿ ಹಾಗೂ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

Advertisement

ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಪಟ್ಟಣದಲ್ಲಿ ಶಾಸಕ ರಮೇಶ ಭೂಸನೂರ ಅವರ ಪ್ರಯತ್ನದಿಂದ ನಿರ್ಮಾಣವಾಗುತ್ತಿರುವ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಕಟ್ಟಡ ಒಂದು ಮಾದರಿ ಕಟ್ಟಡವಾಗಿ ನಿರ್ಮಾಣವಾಗಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ ಮಾತನಾಡಿ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು.

ತಾಪಂ ಮಾಜಿ ಉಪಾಧ್ಯಕ್ಷ ಬಿ.ಎಚ್. ಬಿರಾದಾರ, ತಹಶೀಲ್ದಾರ ಸಂಜೀವಕುಮಾರ ದಾಸರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ. ಹೊಂಗಯ್ಯ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮುದಗೋಳಕರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎನ್.ಎಸ್. ಭೂಸಗೊಂಡ ಅವರು ವೇದಿಕೆ ಮೇಲೆ ಇದ್ದರು.

ವಸತಿ ನಿಲಯ ನೀರಿಕ್ಷಕರಾದ ರಮೇಶ ಬಿರಾದಾರ, ಮಾಂತೇಶ ಬಗಲಿ, ಮಹಾಂತೇಶ ಹೂಗಾರ, ಮಾಯಪ್ಪ ಮಾದರ, ರಾಜೇಶ್ವರಿ ಗೋಗಿ, ಸಿಬ್ಬಂದಿಗಳಾದ ರಾಜು ಹೊಸಮನಿ, ಆರ್.ಎಸ್. ಪಾಟೀಲ, ಸಿ.ಎಂ. ನಾಟಿಕಾರ ಹಾಗೂ ಇತರರು ಇದ್ದರು.

ಮೀನಾಕ್ಷಿ ಮಠಪತಿ ಪ್ರಾರ್ಥಿಸಿದರು. ರಾಮನಗೌಡ ಕನ್ನೊಳ್ಳಿ ಸ್ವಾಗತಿಸಿದರು. ರಾಯಪ್ಪ ಬನ್ನೆಟ್ಟಿ ನಿರೂಪಿಸಿದರು. ಶಿವಲಿಂಗಪ್ಪ ಹಚಡದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next