Advertisement

Varalakshmi Vratam ಅರ್ಪಣಾ ಭಾವದಿಂದ ಕ್ಷೇತ್ರದ ಬೆಳವಣಿಗೆ: ಒಡಿಯೂರು ಶ್ರೀ

01:17 AM Aug 26, 2023 | Team Udayavani |

ವಿಟ್ಲ: ಧರ್ಮವನ್ನು ಮರೆತ ರಾಷ್ಟ್ರ ಹಾಗೂ ವ್ಯಕ್ತಿಗೆ ಅಪಾಯ ನಿಶ್ಚಿತ. ವಿಜ್ಞಾನಿಗಳೂ ಧರ್ಮ ಶ್ರದ್ಧೆಯ ಕಾರ್ಯದಿಂದ ಯಶಸ್ಸು ಗಳಿಸಬಹುದಾಗಿದೆ. ತ್ಯಾಗ ಮತ್ತು ಸೇವೆ ಭಾರತದ ಅಂತಃಸತ್ವವಾಗಿದ್ದು, ಆಧ್ಯಾತ್ಮಿಕತೆಯಿಂದಾಗಿ ವಿಶ್ವ ಇತ್ತ ನೋಡುತ್ತಿದೆ. ಅರ್ಪಣಾ ಭಾವದ ಮನಸ್ಸುಗಳಿಂದ ಕ್ಷೇತ್ರದ ಬೆಳವಣಿಗೆಯಾಗುತ್ತದೆ. ಬದುಕಿನಲ್ಲಿ ತಾಳ್ಮೆ ಸಹನೆಯಿದ್ದಾಗ ಎತ್ತರಕ್ಕೆ ಏರಲು ಸಾಧ್ಯವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

Advertisement

ಮಾಣಿಲ ಶ್ರೀಧಾಮ ಶ್ರೀದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ವಿಶೇಷ ಸಂಭ್ರಮದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಸುಸಂಸ್ಕೃತ ಸಮಾಜ: ಮಾಣಿಲ ಶ್ರೀ
ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮ ಪ್ರಜ್ಞೆಯ ಕಾರ್ಯಕ್ಕೆ ಭಗವಂತನ ಅನುಗ್ರಹವಿರುತ್ತದೆ. ಸಮಾಜ ಮತ್ತು ಸಂತರ ನಡುವೆ ಅವಿನಾಭಾವ ಸಂಬಂಧವಿದೆ. ಹಿಂದೂ ಸಮಾಜ ಐಕ್ಯತೆಯಿಂದಿರಬೇಕು. ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯವನ್ನು ಯುವ ಪೀಳಿಗೆಗೆ ಹಸ್ತಾಂತರಿಸಬೇಕು. ವರಮಹಾಲಕ್ಷಿ$¾à ವ್ರತಾಚರಣೆಯ ಮೂಲಕ ಸಮಾಜ ಸುಸಂಸ್ಕೃತವಾಗಿಸುವ ಉದ್ದೇಶವಿದೆ ಎಂದು ತಿಳಿಸಿದರು.

ದೇಶಕ್ಕೆ ಸುಭಿಕ್ಷೆ : ಭಗವಂತ ಖೂಬ
ರಾಸಾಯನಿಕ, ರಸಗೊಬ್ಬರ ರಾಜ್ಯ ಸಚಿವ ಭಗವಂತ ಖೂಬ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಧರ್ಮಾಧಾರಿತ ಆಡಳಿತದಿಂದ ದೇಶಕ್ಕೆ ಸುಭಿಕ್ಷೆ ಸಿಗುತ್ತದೆ. ಭಾರತೀಯ ಸಂಸ್ಕೃತಿ ಶ್ರೇಷ್ಠ. ಆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಮಾಣಿಲದ ಪೂಜ್ಯರ ಕಾರ್ಯ ಹೆಮ್ಮೆ ತರುವಂತದ್ದಾಗಿದೆ ಎಂದು ತಿಳಿಸಿದರು.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ, ಬಿ. ನಾಗರಾಜ ಶೆಟ್ಟಿ, ಕೃಷ್ಣ ಜೆ. ಪಾಲೆಮಾರ್‌, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್‌ ಎಂ., ಮಾಜಿ ಶಾಸಕರಾದ ಸಂಜೀವ ಮಠಂದೂರು, ಪದ್ಮನಾಭ ಕೊಟ್ಟಾರಿ, ಕ್ಷೇತ್ರದ ಟ್ರಸ್ಟಿ ಭಾಸ್ಕರ ಶೆಟ್ಟಿ ಪುಣೆ, ಉದ್ಯಮಿ ಗಿರಿಧರ ಶೆಟ್ಟಿ, ರಂಜಿತ್‌ ಶೆಟ್ಟಿ ,ರಂಜಿತ್‌ ಮಡಗಾಂವ್‌, ರಾಕೇಶ್‌, ಜನಾರ್ದನ ನಾಸಿಕ್‌, ಮಹಿಳಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸುಣ್ಣಂಬಳ, ಸುರೇಶ್‌ ಪತಾರೆ, ನಿತಿನ್‌ ಅಡ್ಸಲ್‌, ಲಿಭೇಷ್‌ ನಾಯರ್‌, ಸಂದೀಪ್‌ ಪತಾರೆ, ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸೌಂದರ್ಯ ರಮೇಶ್‌, ಸತೀಶ್‌ ಶೆಟ್ಟಿ ಪಟ್ಲ, ಕೊರಗಪ್ಪ ಪೂಜಾರಿ ಬಾಳೆಕಲ್ಲು, ಸಿ.ಎ.ಸು ಧೀರ್‌ ಶೆಟ್ಟಿ ಎಣ್ಮಕಜೆ, ಗಣೇಶ್‌ ಕುಲಾಲ್‌, ದೇವಪ್ಪ ಕುಲಾಲ್‌ ಪಂಜಿಕಲ್ಲು, ಯಾದವ ಕೋಟ್ಯಾನ್‌ ಅವರನ್ನು ಸಮ್ಮಾನಿಸಲಾಯಿತು.

Advertisement

ಬೆಳ್ಳಿಹಬ್ಬ ಮಹೋತ್ಸವ ಪ್ರಧಾನ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ ಮಂಗಳೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್‌ ಪಂಜಿಕಲ್ಲು ವಂದಿಸಿದರು. ದಿನೇಶ್‌ ಸುವರ್ಣ ರಾಯಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next