Advertisement

ಕೃಷಿಕರಿಂದ ಮಾತ್ರ ದೇಶದ ಅಭಿವೃದ್ಧಿ: ಡಾ|ಹಂದೆ

07:55 AM Aug 06, 2017 | |

ಉಡುಪಿ: ದೇಶದಲ್ಲಿರುವ ಕೇವಲ ಶೇ. 10ರಷ್ಟು ವಿದ್ಯಾವಂತರಿಂದ ಅಭಿವೃದ್ಧಿ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಅದು ನಿಜವಲ್ಲ. ಶೇ. 75ರಷ್ಟಿರುವ ಕೃಷಿಕರಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಯುವ ಸಮೂಹವು ಈ ಸತ್ಯ ಅರಿತು ತಮ್ಮ ಚಿಂತನೆಯನ್ನು ಬದಲಾಯಿಸಿಕೊಂಡರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಸೆಲ್ಕೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ| ಹರೀಶ್‌ ಹಂದೆ ಹೇಳಿದರು.

Advertisement

ಮಣಿಪಾಲ ವಿಶ್ವವಿದ್ಯಾನಿಲಯದ ವತಿಯಿಂದ ಕೆಎಂಸಿಯ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿದ “ಸಾಮಾಜಿಕ ಬದಲಾವಣೆಯಲ್ಲಿ ಯುವವೃಂದ’ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪದವಿ ಓದದ ತಜ್ಞರು
ನಮ್ಮಲ್ಲಿ ಶ್ರೀಮಂತ ಹಾಗೂ ತೀರಾ ಬಡವರು ಎಂಬ ಎರಡು ವರ್ಗದ ಜನರಿದ್ದು, ಕೃಷಿಕರು ಪದವಿ ಓದದೆಯೂ ಆ ಕ್ಷೇತ್ರದಲ್ಲಿ ತಜ್ಞರಿದ್ದರೂ ಯಾರೂ ಕೂಡ ಸಲಹೆ ಕೇಳುವುದಿಲ್ಲ. ಯಾವ ಪ್ಯಾನಲ್‌ ಚರ್ಚೆಗೂ ಅವರನ್ನು ಕರೆಯುವುದಿಲ್ಲ. ದೇಶದ ಸುಮಾರು 2 ಸಾವಿರ ಮಿಲಿಯ ಮಂದಿಗೆ ವಿದ್ಯುತ್‌ ಸೌಲಭ್ಯವಿಲ್ಲ. ರಾಜಕೀಯ, ಸಾಂಸ್ಕೃತಿಕವಾಗಿ ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ. ಈಗಲೂ ನಮ್ಮಲ್ಲಿ ಸಮಾನತೆ ಅನ್ನುವುದೇ ಇಲ್ಲ. ರಾಷ್ಟ್ರ ವಿರೋಧಿ ಚಿಂತನೆಗಳೇ ಹೆಚ್ಚಾಗಿವೆ. ಶೇ. 50ರಷ್ಟಿರುವ ಯುವ ಸಮೂಹವು ದೇಶದ ಶಿಕ್ಷಣ, ಆರೋಗ್ಯ, ಮೂಲಸೌಕರ್ಯದಂತಹ ಸಮಸ್ಯೆಗಳತ್ತ ಗಮನಹರಿಸಿದರೆ ಭಾರತದ ಜೀವನದ ಗುಣಮಟ್ಟ ಸುಧಾರಿಸಬಹುದು ಎಂದರು.

ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಭಾರತದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಯುವಕರು ಮನಸ್ಸು ಮಾಡಿದರೆ ಬದಲಾವಣೆ ಖಂಡಿತ ಸಾಧ್ಯ. ಬಡತನ, ನಿರುದ್ಯೋಗ, ವಿದ್ಯುತ್‌ ಸಮಸ್ಯೆಗಳಿಗೆ ಯುವ ಸಮೂಹವೇ ಪರಿಹಾರ. ವಾಸ್ತವದಲ್ಲಿ ಸುಶಿಕ್ಷಿತರಲ್ಲಿಯೇ ನಾಗರಿಕ ಪ್ರಜ್ಞೆ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಹೆತ್ತವರು, ಶಿಕ್ಷಕರು ಈನಿಟ್ಟಿನಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.ಸಮ್ಮೇಳನ ಸಂಚಾಲಕ ಡಾ| ಅನೂಪ್‌ ನಾಹ ಸ್ವಾಗತಿಸಿದರು. ನವನೀತ್‌ ಉಪಾಧ್ಯಾಯ ವಂದಿ ಸಿದರು.

“ಸಮಸ್ಯೆಗಳಿಗೆ ಗೂಗಲ್‌ ಪರಿಹಾರವಲ್ಲ’ 
ಈಗಿನ ಯುವವೃಂದದವರು ಎಷ್ಟೇ ಸುಶಿಕ್ಷಿತರಾದರೂ ಸಮಸ್ಯೆ ಎದುರಾದಾಗ ಪರಿಹಾರಕ್ಕಾಗಿ ಗೂಗಲ್‌ನಲ್ಲಿ ಹುಡುಕಾಡು
ತ್ತಾರೆ. ಆದರೆ ಸಮಾಜದಲ್ಲಿರುವ ಸಮಸ್ಯೆಗೆ ಗೂಗಲ್‌ ಪರಿಹಾರವಲ್ಲ. ದೇಶ ಸುತ್ತಿ. ಮಣಿಪಾಲ, ಬೆಂಗಳೂರು, ಚೆನ್ನೈ, ದಿಲ್ಲಿಯಂತಹ ನಗರಗಳನ್ನು ಬಿಟ್ಟು ಒಡಿಶಾ, ಬಿಹಾರ, ಝÞರ್ಖಂಡ್‌ನ‌ಂತಹ ತೀರಾ ಹಿಂದುಳಿದ ರಾಜ್ಯಗಳ ಊರುಗಳಿಗೆ ಭೇಟಿನೀಡಿ ವಾಸ್ತವ ಪರಿಸ್ಥಿತಿಯನ್ನು ನೋಡಿ. ಅಲ್ಲಿಯ ಜನರನ್ನು ಮಾತನಾಡಿಸಿ, ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರಕ್ಕೆ ಮುಂದಾಗಿ ಎಂದು ಡಾ| ಹಂದೆ ಯುವಕರಿಗೆ ಕರೆ ನೀಡಿದರು. 

Advertisement

ನೀವೆಷ್ಟು  ಸ್ಪಂದಿಸಿದ್ದೀರಿ?
ವ್ಯವಸ್ಥೆ ಸರಿಯಿಲ್ಲ, ದೇಶ ಸರಿಯಿಲ್ಲ ಇತ್ಯಾದಿಯಾಗಿ ಸಮಸ್ಯೆಗಳ ಬಗ್ಗೆ ದೂರುವುದೇ ಭಾರತೀಯರ ಹವ್ಯಾಸ. ಆದರೆ ಈ ಸಮಾಜಕ್ಕಾಗಲಿ, ದೇಶದ ಪ್ರಗತಿಗೆ ನಾವೆಷ್ಟು ಕೊಡುಗೆ ನೀಡಿದ್ದೇವೆ ಅನ್ನುವುದನ್ನು ವಿಮರ್ಶೆ ಮಾಡಿಕೊಳ್ಳಬೇಕಿದೆ. ಛತ್ತೀಸ್‌ಗಢ‌, ಒಡಿಶಾ ಈಗಲೂ ನಕ್ಸಲ್‌ ಪೀಡಿತ ರಾಜ್ಯವಾಗಿರಲು ಕಾರಣ ನಮ್ಮಲ್ಲಿ ಒಗ್ಗಟ್ಟಿಲ್ಲದಿರುವುದು. ಕಲಿತವರು ದೊಡ್ಡ- ದೊಡ್ಡ ಕಂಪೆನಿಗಳಲ್ಲಿ ಕೆಲಸ ಪಡೆಯುತ್ತಾರೆ. ವರ್ಷದಿಂದ ವರ್ಷಕ್ಕೆ ವೇತನಏರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ನಮ್ಮಸುತ್ತಮುತ್ತಲಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ಯಾರೂ ಕೂಡ ಗಮನವೇ ಕೊಡುವುದಿಲ್ಲ ಎಂದು ಡಾ| ಹರೀಶ್‌ ಹಂದೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next