Advertisement

ಬಿಜೆಪಿಯಿಂದ ದೇಶದ ಅಭಿವೃದ್ಧಿ; ಅಹ್ಮದ್‌ ಬಾಬ

05:24 PM Feb 15, 2021 | Team Udayavani |

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ದೊರೆತಿದ್ದು, ಬಿಜೆಪಿ ಸರ್ಕಾರದಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಮುಜಮ್ಮಿಲ್‌ ಅಹ್ಮದ್‌ ಬಾಬ ಹೇಳಿದರು.

Advertisement

ನಗರದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯ ಮುಖ್ಯವಾಗಿ ಬಾಲಕಿಯರ ಸಾಮಾಜಿಕ, ಆರ್ಥಿಕ ಹಾಗೂ ಶಿಕ್ಷಣದ ಸಬಲೀಕರಣಕ್ಕಾಗಿ “3ಇ’ ಯೋಜನೆ ಅಳವಡಿಸಿಕೊಳ್ಳಲಾಗಿದೆ. ಪ್ರಿ ಮೆಟ್ರಿಕ್‌, ಪೋಸ್ಟ್‌ ಮೆಟ್ರಿಕ್‌, ವೃತ್ತಿ ಪರ ಹಾಗೂ ತಾಂತ್ರಿಕ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ 5 ಕೋಟಿ ವಿದ್ಯಾರ್ಥಿಗಳಿಗೆ 5 ವರ್ಷಗಳಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಇದರಲ್ಲಿ ಶೇ.50 ಮಹಿಳಾ ವಿದ್ಯಾರ್ಥಿಗಳು ಸೌಲಭ್ಯ ಪಡೆಯಲಿದ್ದಾರೆ ಎಂದರು.

ಪ್ರಧಾನಿ ಮೋದಿ ಸರ್ಕಾರ ಎಲ್ಲರನ್ನೂ ಒಳಗೊಂಡ ಆರೋಗ್ಯಕರ ಅಭಿವೃದ್ಧಿ ಮಾಡುತ್ತ ಕೋಮು ದ್ವೇಷ ಹಾಗೂ ಓಲೈಕೆ ರಾಜಕಾರಣದ ರೋಗ ನಿವಾರಿಸಲು
ಯತ್ನಿಸುತ್ತಿದೆ ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶರಣಭೂಪಾಲರಡ್ಡಿ ಮಾತನಾಡಿ, ವಿಧಾನ ಪರಿಷತ್‌ ಸಭಾಪತಿ ಚುನಾವಣೆಯಲ್ಲಿ ಸೋಲು ಖಚಿತವೆಂದು ಗೊತ್ತಿದ್ದರೂ ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಯಿಂದ ನಾಮಪತ್ರ ಹಾಕಿಸಿದ್ದು ಸರಿಯಲ್ಲ. ಗೆಲ್ಲುವುದಕ್ಕೆ ಬೇರೆಯವರು, ಸೋಲಲು ಮಾತ್ರ ಮುಸ್ಲಿಮರು ಬೇಕಾ?.

ಒಂದು ಸಮುದಾಯವನ್ನು ಓಟ್‌ ಬ್ಯಾಂಕ್‌ ಗಾಗಿ ಬಳಸಿಕೊಂಡಿದ್ದ ಕಾಂಗ್ರೆಸ್‌ ಇಂದು ಅದೇ ಸಮುದಾಯವನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಕೊಳಕು ರಾಜಕೀಯ ಬಿಟ್ಟು ಆ ಸಮುದಾಯದ ವ್ಯಕ್ತಿಗಳಿಗೆ ಪಕ್ಷದ ಉನ್ನತ ಜವಾಬ್ದಾರಿಗಳಾದ ವಿರೋಧ ಪಕ್ಷದ ನಾಯಕ ಅಥವಾ ರಾಜ್ಯಾಧ್ಯಕ್ಷ ಜವಾಬ್ದಾರಿ ಕೊಟ್ಟು ಗೌರವದಿಂದ ಕಾಣಬೇಕು ಎಂದರು.

ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ರಿಯಾಜ್‌ ಕಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಉಪಾಧ್ಯಕ್ಷ ಮಹಮ್ಮದ್‌ ಸಿರಾಜದ್ದಿನ ಸಾಬ್‌, ಜಿಲ್ಲಾ ಪ್ರಭಾರಿ ಶಾಹೀದ ಶಹಿನ್‌ ಅಬ್ಟಾಸ್‌, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹುಸೇನ್‌ ಬಾಷ ಕುರಕುಂದಿ, ನಜೀರ ಪಾಷ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ರಹಮಾನ್‌ ಸಾಬ್‌, ಮೇಲಪ್ಪ ಗುಳಿಗಿ, ರಾಜಶೇಖರ್‌ ಕಾಡಾಂನೋರ, ಚಾಂದ ದೋರನಳಿ ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ನಿರೂಪಿಸಿದರು. ಮಹಮ್ಮದ್‌ ರಫೀಕ ರಾವೂರ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next