Advertisement

Aolar power; 90 ದಿನ ಹಾರಬಲ್ಲ ಸೌರಶಕ್ತಿ  ಚಾಲಿತ ವಿಮಾನ ಅಭಿವೃದ್ಧಿ!

01:41 AM Sep 16, 2024 | Team Udayavani |

ಹೊಸದಿಲ್ಲಿ: ಭಾರತದ ವಿಜ್ಞಾನಿಗಳು ಸೌರಶಕ್ತಿ ಚಾಲಿತ ವಿಮಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಒಮ್ಮೆಗೆ 90 ದಿನಗಳವರೆಗೆ ಹಾರುವ ಸಾಮರ್ಥ್ಯವನ್ನು ಹೊಂದಿದ್ದು, ಇದರ ಸಣ್ಣ ಆವೃತ್ತಿಯು ಈಗಾಗಲೇ 10 ಗಂಟೆಗಳ ಕಾಲ ಯಶಸ್ವಿಯಾಗಿ ಹಾರಾಟವನ್ನು ನಡೆಸಿದೆ.

Advertisement

ಬಾಹ್ಯಾಕಾಶದ ಅತ್ಯಂತ ಎತ್ತರದ ಪ್ರದೇಶದಲ್ಲಿ (ಹೈ ಆಲ್ಟಿಟ್ಯೂಡ್‌ ಪ್ಲಾಟ್‌ಫಾರ್ಮ್ -ಎಚ್‌ಎಪಿ) ಹಾರಾಟ ನಡೆಸುವ ಇಂಥದ್ದೊಂದು ಮಾನವ ರಹಿತ ವಿಮಾನವನ್ನು ಬೆಂಗಳೂರಿನ ನ್ಯಾಶನಲ್‌ ಏರೋಸ್ಪೇಸ್‌ ಲ್ಯಾಬೊ ರೇಟರೀಸ್‌ ನಿರ್ಮಿಸಿದೆ.   ಈ ವಿಮಾನವು 17-20 ಕಿ.ಮೀ. ಎತ್ತರದಲ್ಲಿ ಹಗಲು ಮತ್ತು ರಾತ್ರಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇಂಥ ಹೈ-ಆಲ್ಟಿಟ್ಯೂಡ್‌ ಪ್ಲಾಟ್‌ ಫಾರ್ಮ್ ರಚಿಸಿದ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ವಿಮಾನ ಡ್ರೋನ್‌ಗಳನ್ನು ಹೋಲು ತ್ತವೆ. ಅವುಗಳನ್ನು ಗುಪ್ತಚರ, ಕಣ್ಗಾ ವಲು, ಬೇಹುಗಾರಿಕೆ ಸೇರಿ 5 ಜಿ ತರಂಗಗಳ ಪ್ರಸಾರದವರೆಗೆ ಹಲವಾರು ಉದ್ದೇಶಗಳಿಗಾಗಿ ಬಳಸಬಹುದು. ಇತ್ತೀಚೆಗೆ ನಡೆದ ಇಂಡಿಯಾ ಡಿಫೆನ್ಸ್‌ ಏವಿಯೇಶನ್‌ ಎಕ್‌ನ್ಪೋದಲ್ಲಿ ಇದರ ಪ್ರದರ್ಶನ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next