Advertisement

8,500 ಸ್ಮಾರ್ಟ್‌ ಕ್ಷಾಸ್‌ ರೂಂ ಅಭಿವೃದ್ದಿ

06:02 PM Jul 11, 2021 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಡಿಜಿಟಲ್‌ಕಲಿಕೆಗೆ ಪ್ರೋತ್ಸಾಹಹಾಗೂಆದ್ಯತೆ ನೀಡುತ್ತಿದ್ದು,8500 ಸ್ಮಾರ್ಟ್‌ ತರಗತಿ ಕೊಠಡಿಗಳನ್ನುಅಭಿವೃದ್ಧಿಪಡಿಸಲಿದ್ದೇವೆ ಎಂದು ಉನ್ನತ ಶಿಕ್ಷಣಸಚಿವರೂ ಆದ ಉಪ ಮುಖ್ಯಮಂತ್ರಿಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

Advertisement

ರಾಜ್ಯದ ಉನ್ನತ ಶಿಕ್ಷಣ ವಿಭಾಗದಲ್ಲಿರುವ8,500 ತರಗತಿ ಕೊಠಡಿಗಳನ್ನು ಪ್ರಸಕ್ತ ಶೈಕ್ಷಣಿಕವರ್ಷದಲ್ಲಿ ಸ್ಮಾರ್ಟ್‌ಕ್ಲಾಸ್‌ ರೂಂಗಳನ್ನಾಗಿಪರಿವರ್ತಿಸಲಾಗುತ್ತಿದೆ. ಈ ಪೈಕಿ 2,500ಕೊಠಡಿಗಳನ್ನು ಈಗಾಗಲೇ ಸ್ಮಾರ್ಟ್‌ಕ್ಲಾಸ್‌ರೂಂಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆಎಂದರು.ಮಲ್ಲೇಶ್ವರದ ಸರ್ಕಾರಿ ಪ್ರಥಮ ದರ್ಜೆಕಾಲೇಜು ವಿದ್ಯಾರ್ಥಿಗಳಿಗೆ ಶನಿವಾರ ಉಚಿತ ಟ್ಯಾಬ್ಲೆಟ್‌-ಪಿಸಿಗಳನ್ನು ವಿತರಿಸಿ ಹಾಗೂ ಕಂಪ್ಯೂಟರ್‌ ಲ್ಯಾಬ್‌ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಡಿಜಿಟಲ್‌ಕಲಿಕೆಗೆ ಪೂರಕವಾಗುವಂತೆ ಕಳೆದ ಶೈಕ್ಷಣಿಕವರ್ಷದಲ್ಲಿ 1.10 ಲಕ್ಷ ಲ್ಯಾಪ್‌ಟಾಪ್‌ಗ್ಳನ್ನುಪದವಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.ಇದಕ್ಕಾಗಿ 330 ಕೋಟಿ ರೂ. ಖರ್ಚುಮಾಡಲಾಗಿತ್ತು.

ಹಾಗೆಯೇ ಈ ಶೈಕ್ಷಣಿಕವರ್ಷದಲ್ಲಿ 1.60 ಲಕ್ಷದಷ್ಟು ಎಂಜಿನಿಯರಿಂಗ್‌,ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ಪಿಸಿಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಡಿಜಿಟಲ್‌ ಪರಿಕರಗಳನ್ನುಕೊಟ್ಟು ಸರ್ಕಾರ ಸುಮ್ಮನಿಲ್ಲ. ಬದಲಾಗಿ,ಕಲಿಕಾವ್ಯವಸ್ಥೆಯನ್ನು ರೂಪಿಸಿದೆ. ಎಲ್‌ಎಂಎಸ್‌, ಇಡೀದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲದಕ್ರಾಂತಿಕಾರಿ ವ್ಯವಸ್ಥೆಯಾಗಿದೆ ಮತ್ತು ಖಾಸಗಿವಿಶ್ವವಿದ್ಯಾಲಯಗಳಿಗೂ ರೂಪಿಸಲುಸಾಧ್ಯವಾಗದ ಉಪಕ್ರಮ ಇದಾಗಿದೆ ಎಂದುತಿಳಿಸಿದರು.

ಎಲ್‌ಎಂಎಸ್‌ ಅತ್ಯುತ್ತಮಕಂಟೆಂಟ್‌ ಜತೆಗೆ,ಪರಿಣಾಮಕಾರಿಕಲಿಕೆಗೆಎಲ್ಲಆಯಾಮಗಳಲ್ಲೂಸಹಕಾರಿಯಾಗಿದೆ. 3.5 ಲಕ್ಷ ತರಗತಿಗಳನ್ನುನಮ್ಮದೇ ಬೋಧಕರು ಅಪ್‌ಲೋಡ್‌ಮಾಡಿದ್ದಾರೆ. ಇಂಥ ಅದ್ಭುತ ಯೋಜನೆಗೆಸರ್ಕಾರ 4 ಕೋಟಿ ರೂ. ಖರ್ಚು ಮಾಡಿದೆ.ಇಂತಹ ಉತ್ತಮ ಅವಕಾಶಗಳನ್ನುವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡುವಿದ್ಯಾರ್ಜನೆ ಮಾಡಬೇಕು. ಯಾವುದೇಕಾರಣಕ್ಕೂ ಮೈಮರೆಯಬಾರದು ಎಂದುಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಡಿ.ಎಸ್‌.ಪ್ರತಿಮಾ, ಐಕ್ಯೂಎಸಿ ಸಂಚಾಲಕ ಡಾ.ಸಿ.ಸ್ವಾಮಿನಾಥನ್‌ ಹಾಗೂ ನ್ಯಾಕ್‌ ಸಂಚಾಲಕಿ ಪಿ.ಎನ್‌.ಜಯಂತಿ ಹಾಗೂ ಪ್ರಾಧ್ಯಾಪಕರಾದರವಿಶಂಕರ್‌, ರವಿಕುಮಾರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next