Advertisement
ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಕುವೆಂಪು ನಗರದ ನೇತಾಜಿ ಉದ್ಯಾನವನವನ್ನು ನಾಗರಿಕ ವೇದಿಕೆಉತ್ತಮವಾಗಿನಿರ್ವಹಣೆಮಾಡಲಾಗುತ್ತಿದ್ದು,ಈ ಹಿಂದೆ ಟೂಡಾ ವತಿಯಿಂದ ಉದ್ಯಾನಕ್ಕೆಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗಿದ್ದು, ನಗರದಲ್ಲಿರುವ ಅತ್ಯುತ್ತಮ ಪಾರ್ಕ್ ಗಳಲ್ಲಿ ಒಂದಾಗಿದೆ ಎಂದರು.
Related Articles
Advertisement
ಸಾರ್ವಜನಿಕರಲ್ಲಿ ಮನವಿ: ಪಾಲಿಕೆ ಮೇಯರ್ ಫರೀದಾಬೇಗಂ ಮಾತನಾಡಿ, ನಿರ್ವಹಣೆ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿದ್ದ ಉದ್ಯಾನವನ್ನು ಅಭಿವೃದ್ಧಿಪಡಿಸಲು ಶಾಸಕರು ಸ್ಮಾರ್ಟ್‌ಸಿಟಿಯಿಂದ ಅನುದಾನ ವನ್ನು ನೀಡಿದ್ದು, ಸಾರ್ವಜನಿಕರು ಯಾರಾದರೂ ದತ್ತು ತೆಗೆದುಕೊಂಡು ನಿಮ್ಮ ಉದ್ಯಾನವನವನ್ನು ನೀವೇ ಉಳಿಸಿಕೊಳ್ಳಬೇಕು, ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿಪಡಿಸಿದಂತೆ ಉಳಿಸಿಕೊಂಡು ನಿರ್ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಾಲಿಕೆ ಸದಸ್ಯೆ ಲಲಿತಾ ರವೀಶ್ ಮಾತನಾಡಿ, ಈ ಭಾಗದಲ್ಲಿ ನಾಗರಿಕರ ಅನುಕೂಲವಾಗಿದ್ದ ಪಾರ್ಕ್ ನಿರ್ವಹಣೆ ಕೊರತೆಯನ್ನು ಎದುರಿಸುತ್ತಿದ್ದು,ನಾಗರಿಕರಹಿತದೃಷ್ಟಿಯಿಂದ ಶಾಸಕರು ಅನುದಾನವನ್ನು ಒದಗಿಸಿದ್ದು, ಇದರಿಂದ ಪಾರ್ಕ್ ಅತ್ಯಾಧುನಿಕವಾಗಿ ರೂಪುಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಉಪಮೇಯರ್ ಶಶಿಕಲಾ ಗಂಗ ಹನುಮಯ್ಯ ಸೇರಿದಂತೆ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಇದ್ದರು.
ನಗರದಲ್ಲಿ ಇರುವ ಕೆಲವು ಉದ್ಯಾನವನಗಳನ್ನು ಸ್ಮಾರ್ಟ್ ಸಿಟಿಯೋಜನೆಯಲ್ಲಿ ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಇನ್ನೂಕೆಲವು ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಅಭಿವೃದ್ಧಿ ಪಡಿಸಿರುವ ಉದ್ಯಾನವನಗಳನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಅಲ್ಲಿಯ ನಾಗರಿಕರ ಜವಾಬ್ದಾರಿಯಾಗಿರುತ್ತದೆ. – ಜಿ.ಬಿ.ಜ್ಯೋತಿಗಣೇಶ್, ಶಾಸಕ