Advertisement

ಕ್ಷೇತ್ರದ ಬದಲಾಗಿ ಶಾಸಕರ ಅಭಿವೃದ್ಧಿ: ಆರೋಪ

01:08 PM Sep 05, 2017 | |

ಆನೇಕಲ್‌: ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಬಿ. ಶಿವಣ್ಣ 1200 ಕೋಟಿ ರೂ.ಗೂ ಹೆಚ್ಚು ಅನುದಾನ ರಾಜ್ಯ ಸರ್ಕಾರದಿಂದ
ತಂದು ಅಭಿವೃದ್ಧಿ ಪಡಿಸಿದ್ದೇನೆ ಎಂದು ಹೇಳುತ್ತಿರುವುದು ಶುದ್ಧ ಸುಳ್ಳು. ಅಭಿವೃದ್ಧಿಯಾಗುತ್ತಿರುವುದು ಶಾಸಕ ಬಿ.ಶಿವಣ್ಣ ಹೊರತು ಕ್ಷೇತ್ರವಲ್ಲ ಎಂದು ಜೆಡಿಎಸ್‌ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ಆರೋಪಿಸಿದರು.

Advertisement

ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು
ಮಾತನಾಡಿದರು.

ಜೆಡಿಎಸ್‌ ಪಕ್ಷದ ಪರ ಅಲೆ: ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮತ್ತು ಅವರ ಅನುಯಾಯಿಗಳು ರಾಜ್ಯದ ಜನತೆಗೆ ಕೊಟ್ಟ ಭರವಸೆ ಈಡೇರಿಸುತ್ತಿಲ್ಲ ಎಂದು ದೂರಿದರು. ರಾಜ್ಯದಲ್ಲಿ ಜೆಡಿಎಸ್‌ ಪಕ್ಷದ ಅಲೆ ಬೀಸುತ್ತಿದ್ದು,
ಮುಂಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ
ಅನುಮಾನವಿಲ್ಲ ಎಂದು ಹೇಳಿದರು. 

ಜೆಡಿಎಸ್‌ ಪಕ್ಷದ ತಾಲೂಕು ಅಧ್ಯಕ್ಷ ದೇವೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಮತದಾರ ಕಾಂಗ್ರೆಸ್‌ ಮತ್ತು ಬಿಜೆಪಿ ದುರಾಡಳಿತ ಕಂಡು ಬೇಸತ್ತಿದ್ದಾರೆ. ಈ ಬಾರಿ ಜೆಡಿಎಸ್‌ ಪಕ್ಷಕ್ಕೆ ಒಲವು ತೋರಿದ್ದಾರೆ ಎಂದರು.

ಜೆಡಿಎಸ್‌ ಪಕ್ಷಕ್ಕೆ ಭಾರೀ ಬೆಂಬಲ: ಜೆಡಿಎಸ್‌ ಪಕ್ಷದ ಸಂಭವನೀಯ ಅಭ್ಯರ್ಥಿ ಕೆ.ಪಿ.ರಾಜು ಈಗಾಗಲೇ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜೊತೆಗೆ ಪಕ್ಷವನ್ನು
ಬೂತ್‌ ಮಟ್ಟದಲ್ಲಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಕ್ಷೇತ್ರದಲ್ಲಿಯೂ ಈ ಭಾರಿ ಜೆಡಿಎಸ್‌ ಪಕ್ಷಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ ಎಂದು ಹೇಳಿದರು. 

Advertisement

ಈ ಸಂದರ್ಭದಲ್ಲಿ ಕೆ.ಪಿ.ರಾಜು, ಜೆಡಿಎಸ್‌ ಮುಖಂಡರಾದ ರಾಮೇಗೌಡ, ವಣಕನಹಳ್ಳಿ ಆರ್‌.ದೇವರಾಜ್‌, ರಾಜಣ್ಣ, ಕ್ಯಾರೆಟ್‌ ರಮೇಶ್‌, ಯಲ್ಲಮ್ಮನ ಪಾಳ್ಯರವಿ, ಬಿದರಗುಪ್ಪೆ ಬಾಬು, ಚಂದಾಪುರ ಆನಂದ್‌, ಸುರೇಶ್‌, ರೂಪೇಶಣ್ಣ, ತಿರುಮಲೇಶ್‌, ಮುತ್ತನಲ್ಲೂರು ಸುರೇಶ್‌ ರೆಡ್ಡಿ, ದೊಡ್ಡಹಾಗಡೆ ಮಧುಗೌಡ, ಗೋಣಿಘಟ್ಟಪುರ ನಾರಾಯಣ್‌, ಮೇಡಹಳ್ಳಿ ಹರೀಶ್‌ಗೌಡ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next