Advertisement
ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಭಜನಾ ಮಂದಿರಗಳ ಹೆಸರಿಗೆ ಕಳಂಕ ತರುವ ಕೆಲವರ ದುರುದ್ದೇಶ ಖಂಡನೀಯ ಎಂದು ಬೀಚ್ ಆಭಿವೃದ್ಧಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಮಲ್ಪೆ ಹೇಳಿದ್ದಾರೆ.
Related Articles
Advertisement
ಮೂಲ ಸೌಕರ್ಯ
2008ರಲ್ಲಿ ಅಂದಿನ ನಗರಸಭಾ ಸದಸ್ಯ ಪಾಂಡುರಂಗ ಮಲ್ಪೆ ಅವರು ಪ್ರಯತ್ನ, ಕೆ. ರಘುಪತಿ ಭಟ್ ಅವರ ಮುಂದಾಳುತನದಲ್ಲಿ, ರಸ್ತೆ ಮತ್ತು ಪಾರ್ಕಿಂಗ್ ಪ್ರದೇಶದಲ್ಲಿ ಇಂಟರ್‌ಲಾಕ್, ಶೌಚಾಲಯ, ಸ್ನಾನಗೃಹ, ಗಾಂಧಿ ಪ್ರತಿಮೆ ನಿರ್ಮಾಣ, ವೇದಿಕೆ, ಹೈಮಾಸ್ಟ್ ದೀಪ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.
ಸುರಕ್ಷೆಗೆ ಗಮನ
ಪ್ರವಾಸಿಗರ ಸುರಕ್ಷೆ ದೃಷ್ಟಿಯಿಂದ 8 ಮಂದಿ ಲೈಫ್ ಗಾರ್ಡ್, ಜೀವ ರಕ್ಷಕ ಸಾಧನ, ಸಿ. ಸಿ ಕೆಮರಾ, ಧ್ವನಿವರ್ಧಕ, ಸೂಚನೆ ನೀಡಲು ಮೋಟಾರ್ ಬೈಕ್, ಈಜಲು ಪ್ರತ್ಯೇಕ ಸ್ವಿಮ್ಮಿಂಗ್ ಝೋನ್, ಸೂಚನಾ ಫಲಕ, ಸ್ವಚ್ಚತಾ ಸಿಬಂದಿ, ಹಟ್, ಸ್ವಚ್ಚತಾ ವಾಹನ, ವಾಚ್ ಟವರ್ ನಿರ್ಮಿಸ ಲಾಗಿದೆ. ಅದರೂ ಜೀವರಕ್ಷಕರ ಎಚ್ಚರಿಕೆ ಧಿಕ್ಕರಿಸಿ ಅಥವಾ ಮದ್ಯಪಾನ ಮಾಡಿ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ.
ಟೆಂಡೆರ್ ನಿಯಮದಂತೆ ದ್ವಿಚಕ್ರ ವಾಹನ ಸಹಿತ ಪ್ರತಿ 2 ಗಂಟೆಯಂತೆ ಪಾರ್ಕಿಂಗ್ ಶುಲ್ಕ ವಸೂಲು ಮಾಡಲು ಅವಕಾಶ ಇದೆ. ಇಡೀ ದಿನಕ್ಕೆ ಒಂದೇ ಶುಲ್ಕ ಸ್ವೀಕರಿಸಲಾಗುತ್ತದೆ. ಇದುವರೆಗೂ ದ್ವಿಚಕ್ರಕ್ಕೆ ವಾಹನ ಶುಲ್ಕ ಸ್ವೀಕರಿಸುವುದಿಲ್ಲ. ಪಾರ್ಕಿಂಗ್ ಜಾಗ ಚಿಕ್ಕದಾಗಿರುವ ಕಾರಣ ವಡಭಾಂಡೇಶ್ವರದ ಸ್ವಾಗತ ಕಮಾನಿ ನಿಂದ ಹನುಮಾನ್ ವಿಠೊಭ ಭಜನಾ ಮಂದಿರದವರೆಗೆ ಮತ್ತು ಶಿವ ಪಂಚಾಕ್ಷರಿ ಭಜನಾ ಮಂದಿರದ ರಸ್ತೆಯ ಎರಡೂ ಬದಿ ಪಾರ್ಕಿಂಗ್ ಶುಲ್ಕ ಸಂಗ್ರಹ ಮಾಡಲು ಟೆಂಡೆರ್‌ನಲ್ಲಿ ಅವಕಾಶ ಒದಗಿಸಲಾಗಿದೆ.
ಕಡು ಬಡವರಿಗೆ ಉಚಿತ ಸೇವೆ
ಪಾಳುಬಿದ್ದಿ ಹಿಂದೂ ರುದ್ರಭೂಮಿ ಯನ್ನು ಬೀಚ್ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಶಾಸಕರ ಮತ್ತು ನಗರ ಸಭೆಯ ನಿಧಿಯಿಂದ 2 ಲಕ್ಷ ರೂ. ವಿನಿಯೋಗಿಸಿ ಜುಲೈ ಒಂದ 2012ರಲ್ಲಿ ಸಾರ್ವಜನಿಕರ ಸೇವೆ ಒದಗಿಸಲಾಗಿತ್ತು. ಕೊರೋನ ಸಂದರ್ಭದಲ್ಲಿ ದೂರದ ಊರುಗಳಿಂದ ತಂದ ಶವಗಳಿಗೆ ಸಂಸ್ಕಾರ ಮಾಡಲಾಗಿದೆ. ಈಗಲೂ ಕಡು ಬಡವರಿಗೆ ಯಾವುದೇ ಶುಲ್ಕ ಸ್ವೀಕರಿಸುವುದಿಲ್ಲ. ಎಲ್ಲವೂ ಸಮಿತಿಯ ವತಿಯಿಂದ ಪಾವತಿ ಮಾಡಲಾಗುತ್ತದೆ.
ದತ್ತಿ ಇಲಾಖೆಯ 5 ಲಕ್ಷ ಅನುದಾನ ದಲ್ಲಿ ಸ್ವಾಗತ ಗೋಪುರ, ನಗರಸಭೆ ನಿಧಿಯಿಂದ ರೂ.5 ಲಕ್ಷ ವೆಚ್ಚದಲ್ಲಿ ಕಟ್ಟಿಗೆ ದಾಸ್ತಾನು ಕೊಠಡಿ ನಿರ್ಮಿಸಲಾಗಿದೆ. ಮುಂದೆ ರುದ್ರಭೂಮಿಯ ಅಭಿವೃದ್ಧಿಗೆ ಕರಾವಳಿ ಪ್ರಾಧಿಕಾರದಿಂದ 10ಲಕ್ಷ. ಸಮಾಜ ಕಲ್ಯಾಣ ಇಲಾಖೆಯಿಂದ 10ಲಕ್ಷ ಬಿಡುಗಡೆಯಾಗಿದೆ.