Advertisement
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ತಾಪಂ ಕಾರ್ಯನಿರ್ವಾಹಕ ಅಧಿ ಕಾರಿಗಳು ಹಾಗೂ ಫೌಂಡೇಷನ್ ಫಾರ್ ಎಕಾಲಜಿಕಲ್ ಸೆಕ್ಯೂರಿಟೀಸ್ (ಎಫ್‌ಇಎಸ್) ಸಂಸ್ಥೆಯ ಪ್ರತಿನಿಧಿ ಗಳೊಂದಿಗೆ ಕೆರೆ ಅಭಿವೃದ್ಧಿ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.
Related Articles
Advertisement
ಯೋಜನೆ ರೂಪಿಸಿ: ಈಗಾಗಲೇ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದ ಕೆರೆಯನ್ನು ನರೇಗಾ ಯೋಜನೆಯ ‘ಅಂತರ್ಜಲ ಚೇತನ’ ಕಾರ್ಯಕ್ರಮದಡಿ ಸಮಗ್ರ ಪುನಃಶ್ಚೇತನಗೊಳಿಸಲು ಎಫ್‌ಇಎಸ್ ಸಂಸ್ಥೆಯು ಸ್ಥಳೀಯರು ಮತ್ತು ಗ್ರಾಪಂ ಸಹ ಯೋಗದಡಿ ಕ್ರಿಯಾ ಯೋಜನೆ ರೂಪಿಸಿದೆ. ಇದೇ ಮಾದರಿಯಲ್ಲಿ ಎಲ್ಲ ಕೆರೆಗಳ ಅಭಿವೃದ್ಧಿ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಕೆರೆ ನಿರ್ವಹಣೆ ಮಾಡಬೇಕು: ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿ ನಿಯಮ 1993ರ ಪ್ರಕರಣ 61(ಎ)ರಲ್ಲಿ ಹಾಗೂ ಪ್ರಕರಣ 316ರಲ್ಲಿ ಅಗತ್ಯಪಡಿಸಿರುವಂತೆ ಗ್ರಾಮ ಪಂಚಾಯತ್ ಗಳಲ್ಲಿ ಕೆರೆ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗಳನ್ನು ರಚಿಸಿಕೊಂಡು ಕೆರೆಗಳನ್ನು ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಉಪ ಕಾರ್ಯದರ್ಶಿ (ಆಡಳಿತ) ಎನ್.ಡಿ. ಪ್ರಕಾಶ್, ಉಪ ಕಾರ್ಯದರ್ಶಿ (ಅಭಿವೃದ್ಧಿ) ಜಿ.ಧನರಾಜು, ಮುಖ್ಯ ಲೆಕ್ಕಾಧಿಕಾರಿ ಡಿ.ಬಿ.ಕವಿತಾ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಎಫ್‌ಇಎಸ್ ಸಂಸ್ಥೆಯ ಪ್ರತಿನಿಧಿಗಳು ಇದ್ದರು.