Advertisement

ಹಿಂದುಳಿದವರ ಅಭಿವೃದ್ಧಿಯಿಂದ ಹಿಂದುತ್ವ ಅಭಿವೃದ್ಧಿ

12:50 PM Oct 24, 2021 | Team Udayavani |

ಆನೇಕಲ್‌: ಹಿಂದುತ್ವ ಕೇವಲ ಒಂದು ಜಾತಿಗೆ ಸೀಮಿತವಲ್ಲ, ಎಲ್ಲಾ ಹಿಂದುಳಿದ ಜಾತಿಗಳ ಸಮುದಾಯ ಅಭಿವೃದ್ಧಿಯಾದಾಗ ಮಾತ್ರ ಹಿಂದುತ್ವವು ಅಭಿವೃದ್ಧಿ ಜತೆಗೆ ಅದಕ್ಕೆ ನಿಜವಾದ ಶಕ್ತಿ ಬರುತ್ತದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು. ಅವರು ಆನೇಕಲ್‌ ತಾಲೂಕಿನ ಬೊಮ್ಮಸಂದ್ರದಲ್ಲಿ ಅತ್ತಿಬೆಲೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮಂಡಲದಿಂದ ಆಯೋಜಿಸಿದ್ದ “ಬೆಂಗಳೂರು ದಕ್ಷಿಣಾ ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆ’ಗೆ ಚಾಲನೆ ನೀಡಿ ಮಾತನಾಡಿದರು.

Advertisement

 ಒಬಿಸಿ ಮೋರ್ಚಾದಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಸಿದ್ಧಾಂತಕ್ಕೆ ಬದ್ದರಾಗಿರಬೇಕು, ನಾವೆಲ್ಲರೂ ಹಿಂದುತ್ವದ ಒಳಗೆ ಇದ್ದೇವೆ ಎಂಬುದನ್ನು ಮರೆಯಬಾರದು. ಪ್ರತಿಯೊಂದು ಸಮಾಜದಲ್ಲಿ ಕೆಲವರು ಶ್ರೀಮಂತರು ಇರುತ್ತಾರೆ. ನಿವೆಲ್ಲರೂ ಒಂದಾಗಿ ತಮ್ಮ ತಮ್ಮ ಸಮುದಾಯಕ್ಕೆ ನೆರವಿನ ಸಹಕಾರದ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಶಿಕ್ಷಣ ಮತ್ತು ಉದ್ಯೋಗಕ್ಕೆ ಒತ್ತು ನೀಡಿದರೆ ಸಾಕು ಪ್ರತಿಯೊಂದು ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು.

ಇದನ್ನೂ ಓದಿ:- ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

 ಇದೇ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷರಾಗಿ ಎಸ್‌. ಮುನಿರಾಜು ಮತ್ತು ಮತ್ತಿತರರಿಗೆ ಜವಾಬ್ದಾರಿ ಹಂಚಿಕೆಮಾಡಿ ಸಚಿವ ಕೆ.ಎಸ್‌.ಈಶ್ವರಪ್ಪ ನೇಮಕಾತಿ ಆದೇಶ ನೀಡಿದರು. ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್‌. ಆರ್‌.ರಮೇಶ್‌ ಮಾತನಾಡಿ, ರಾಜ್ಯದಲ್ಲಿಯೇ ಬೆಂಗಳೂರು ದಕ್ಷಿಣ ಜಿಲ್ಲಾ ಒಬಿಸಿ ಘಟಕಗಳು ಮುಂಚೂಣಿಯಲ್ಲಿ ನಿಂತು ಕೆಲಸಮಾಡುತ್ತಿವೆ.

38 ಲಕ್ಷಕ್ಕೂ ಹೆಚ್ಚಿನ ಮತದಾರರು ಇಲ್ಲಿದ್ದಾರೆ. ರಾಜ್ಯದಲ್ಲಿಯೇ ಅತಿದೊಡ್ಡದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳನ್ನು ಒಬಿಸಿ ವರ್ಗಗಳಿಗೆ ತಲುಪಿಸುವ ಮೂಲಕ ಅವರನ್ನು ಮೇಲೆತ್ತುವ ಕೆಲಸ ಮಾಡಬೇಕಾಗಿದೆ ಎಂದರು. ಬಿಜೆಪಿ ಒಬಿಸಿ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರ ಬಾಬು, ರಾಜ್ಯ ಉಪಾಧ್ಯಕ್ಷ ಎ.ಎಚ್‌.ಬಸವರಾಜು, ಪ್ರಧಾನಕಾರ್ಯದರ್ಶಿ ಸುರೇಶ್‌ ಬಾಬು, ವಿವೇಕಾನಂದ ಡಲ್ಸಿ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಒಬಿಸಿ ಅಧ್ಯಕ್ಷ ಎನ್‌.ಆರ್‌.ರಮೇಶ್‌, ರಾಯಣ್ಣ ಬ್ರಿàಗೆಡ್‌ನ‌ ದೊಡ್ಡಯ್ಯ, ಉಪಾಧ್ಯಕ್ಷ ಎಸ್‌. ಮುನಿರಾಜು, ರಾಜ್ಯ ಕೋಶಾಧ್ಯಕ್ಷ ಗೋವಿಂದನಾಯ್ಡು, ಅತ್ತಿಬೆಲೆ ಮಂಡಲ ಅಧ್ಯಕ್ಷ ಎಸ್‌.ಆರ್‌.ಟಿ ಅಶೋಕ್‌ ರೆಡ್ಡಿ ಇತರರು ಹಾಜರಿದ್ದರು.

Advertisement

ಸತತ ಶ್ರಮ ಅಗತ್ಯ

ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಾ ಬಂದರೂ ಒಂದೊಂದು ಹಳ್ಳಿಗಳಲ್ಲೂ ಅಲ್ಲಿನ ದಲಿತರು ಮತ್ತು ಹಿಂದುಳಿದವರ್ಗಗಳ ಪರಿಸ್ಥಿತಿ ನೋಡಿದಾಗ ವಾಸಕ್ಕೆ ಮನೆ ಬಿಡಿ ಗುಡಿಸಲು ಕೂಡಾ ಇಲ್ಲ, ವಿದ್ಯೆ ಪ್ರಶ್ನೆಯೇ ಇಲ್ಲ, ಇಂತಹ ಹಿಂದುಳಿದ ವರ್ಗಗಳನ್ನು ಮೇಲಕ್ಕೆತ್ತಬೇಕಾದರೆ, ಒಂದು ಒಬಿಸಿ ಮೋರ್ಚಾ ಸಾಲದು ಇಂತಹ ನೂರಾರು ಮೋರ್ಚಾಗಳು ಕೆಲಸ ಮಾಡಬೇಕಾಗುತ್ತದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next