Advertisement

ಸೌಲಭ್ಯ ವಂಚಿತ ಶಾಲೆಗೆ ಶಾಸಕರ ಅಭಯ

06:56 PM Dec 23, 2020 | Suhan S |

ಕನಕಗಿರಿ: ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ಶಾಲೆ ದತ್ತು ಸ್ವೀಕಾರಯೋಜನೆಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಮೂರು ಶಾಲೆಗಳನ್ನು ಶಾಸಕ ಬಸವರಾಜ ದಢೇಸುಗೂರು ದತ್ತು ಪಡೆದಿದ್ದಾರೆ. ಕಾರಟಗಿಯ ಕರ್ನಾಟಕ ಪಬ್ಲಿಕ್‌ ಶಾಲೆ, ನವಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮುಸಲಾಪುರದ ಸರ್ಕಾರಿ ಪ್ರೌಢಶಾಲೆಯನ್ನು ಶಾಸಕರು ದತ್ತು ಸ್ವೀಕರಿಸಿದ್ದಾರೆ.

Advertisement

ದತ್ತು ಪಡೆದ ಶಾಲೆಗಳ ಅಭಿವೃದ್ಧಿಗಾಗಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಅನುದಾನ ಬಳಸಲಾಗುತ್ತಿದೆ. ಈ ಶಾಲೆಗಳಲ್ಲಿಕೈಗೊಳ್ಳಬೇಕಾದ ಅಗತ್ಯ ಸೌಲಭ್ಯಗಳಿಗೆಬೇಕಾಗುವ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮುಸಲಾಪುರ ಪ್ರೌಢಶಾಲೆ: ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದ ಸರ್ಕಾರಿಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತಗರತಿಯವರೆಗೆ ಒಟ್ಟು 305 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಹಿಂದಿ ಶಿಕ್ಷಕರು ಇಲ್ಲದೇ ಇರುವುದರಿಂದ ಅತಿಥಿ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಪ್ರೌಢಶಾಲೆ ಮಕ್ಕಳಿಗೆಡೆಸ್ಕ್ಗಳು ಇಲ್ಲದ ಕಾರಣ ನೆಲದ ಮೇಲೆಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇನ್ನು ಶೌಚ ಮತ್ತು ಮೂತ್ರವಿಸರ್ಜನೆಗೆ ವಿದ್ಯಾರ್ಥಿಗಳು ಬಯಲನ್ನೇಅವಂಲಬಿಸಿದ್ದಾರೆ. ಈಗಾಗಲೇ ಶಾಸಕರು 2ಕೊಠಡಿಗಳನ್ನು ಮಾತ್ರ ನಿರ್ಮಾಣ ಮಾಡಿದ್ದು,ಇನ್ನು 4 ಕೊಠಡಿಯ ಕೊರತೆ ಇದೆ. ಒಟ್ಟಾರೆ ಶಾಲೆ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ.

ನವಲಿ ಶಾಲೆ: ತಾಲೂಕಿನ ನವಲಿ ಗ್ರಾಮದಲ್ಲಿ ಇರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 405 ವಿದ್ಯಾರ್ಥಿಗಳಿದ್ದಾರೆ.ಇಂಗ್ಲಿಷ್‌, ಕನ್ನಡ, ವಿಜ್ಞಾನ ಶಿಕ್ಷಕರು ಇಲ್ಲದಕಾರಣ ಇದುವರೆಗೂ ಅತಿಥಿ ಶಿಕ್ಷಕರನ್ನುಬಳಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆಅನುಗುಣವಾಗಿ ಕೊಠಡಿಗಳ ಕೊರತೆಕೂಡ ಇದೆ. ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನವ್ಯವಸ್ಥೆ ಹಾಗೂ ಶೌಚಾಲಯವಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಕರ್ನಾಟಕ ಪಬ್ಲಿಕ್‌ ಶಾಲೆ ಕಾರಟಗಿ: ಕಾರಟಗಿ ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆ ಮೂಲಭೂತ ಸಮಸ್ಯೆಗಳಿಂದ ಸಂಪೂರ್ಣವಂಚಿತವಾಗಿದೆ. ಶಾಲೆಯಲ್ಲಿ ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಒಟ್ಟು 1,371 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ 4ಶಿಕ್ಷಕರ ಕೊರತೆ, ಪ್ರೌಢಶಾಲೆ ವಿಭಾಗದಲ್ಲಿ 6 ಶಿಕ್ಷಕರ ಕೊರತೆ, ಕಾಲೇಜು ವಿಭಾಗದಲ್ಲಿ 5ಉಪನ್ಯಾಸಕ ಕೊರತೆ ಇದೆ. ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶೌಚಾಲಯ, ಶುದ್ಧಕುಡಿಯುವ ನೀರಿನ ವ್ಯವಸ್ಥೆ, ಕೊಠಡಿ ವ್ಯವಸ್ಥೆ ಇಲ್ಲದೇ ಉಸಿರು ಗಟ್ಟುವ ಪರಿಸ್ಥಿತಿಯಲ್ಲಿಶಾಲೆ ನಡೆಯುತ್ತಿದೆ. ಶಾಸಕ ಬಸವರಾಜ ದಢೇಸುಗೂರು ಅವರು ನೂತನವಾಗಿ 6 ಕೊಠಡಿಗಳನ್ನು ನಿರ್ಮಾಣ ಮಾಡಿದ್ದು, ಇನ್ನು ಕೊಠಡಿಗಳು ಅವಶ್ಯಕತೆ ಇದೆ.

Advertisement

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಶಾಲೆಗಳನ್ನು ದತ್ತು ಪಡೆದುಅಭಿವೃದ್ಧಿ ಮಾಡಲಾಗುತ್ತಿದೆ. ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ವಿಶೇಷ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆಸಲ್ಲಿಸಲಾಗಿದೆ. ಅನುದಾನ ಇನ್ನು ಬಿಡುಗಡೆಯಾಗಿಲ್ಲ. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ನಿಟ್ಟಿಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಲೆಗಳಿಗೆ ಬೇಕಾಗುವ ಕೊಠಡಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಿದ್ದೇನೆ. – ಬಸವರಾಜ ದಢೇಸುಗೂರು, ಕನಕಗಿರಿ ಶಾಸಕ

ಹೊಸದಾಗಿ ಕರ್ನಾಟಕ ಪಬ್ಲಿಕ್‌ ಶಾಲೆಯನ್ನು ಸರ್ಕಾರ ಪ್ರಾರಂಭಿಸಿದ್ದು,ಇಲ್ಲಿ ಹಲವಾರು ಸಮಸ್ಯೆಗಳಿವೆ. ಶಾಸಕರ ನಮ್ಮ ಶಾಲೆಯನ್ನು ದತ್ತು ಪಡೆದಿರುವುದು ಸಂತಸದವಿಚಾರ. ಶಾಲೆಗೆ ಬೇಕಾಗುವ ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ, ಶುದ್ಧ ಕುಡಿವ ನೀರಿನ ವ್ಯವಸ್ಥೆಯನ್ನು ಬೇಗನೇ ಮಾಡಿದರೆವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈಗಾಗಲೇ ಸಮಸ್ಯೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. – ಅನಿಲ್‌ಕುಮಾರ ಜಿ., ಕಾರಟಗಿ ಶಾಲೆ ಪ್ರಾಂಶುಪಾಲರು

ಶಾಲೆಯಲ್ಲಿಕೊಠಡಿಗಳುಇಲ್ಲದೇ ಇರುವುದರಿಂದ ಶಾಲಾ ಮೈದಾನದಲ್ಲಿವಿದ್ಯಾರ್ಥಿಗಳಿಗೆ ಪಾಠ ಮಾಡುವಂತಹ ಪರಿಸ್ಥಿತಿ ಇದೆ. ಶಾಲೆಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ಮತ್ತು ಶಾಸಕರ ಗಮನಕ್ಕೆ ತರಲಾಗಿದೆ. -ಕನಕಪ್ಪ,ನವಲಿ ಶಾಲೆ ಮುಖ್ಯಶಿಕ್ಷಕ

ನಮ್ಮ ಶಾಲೆಯನ್ನು ಶಾಸಕರು ದತ್ತು ಪಡೆದಿದ್ದಾರೆ.ಶಾಲೆಯಲ್ಲಿರುವಸಮಸ್ಯೆಗಳ ಬಗ್ಗೆ ಪತ್ರವನ್ನು ಕೂಡ ಬರೆಯಲಾಗಿದೆ.ಶಾಸಕರ ಶಾಲೆಯಲ್ಲಿ ಇರುವಸಮಸ್ಯೆಗಳನ್ನು ಪರಿಹರಿಸಿಮಾದರಿ ಶಾಲೆಯನ್ನಾಗಿ ಮಾಡುವ ವಿಶ್ವಾಸವಿದೆ. -ಎಸ್‌ಡಿಎಂಸಿ ಸಮಿತಿ ಸದಸ್ಯರು, ನವಲಿ ಶಾಲೆ

 

-ಶರಣಪ್ಪ ಗೋಡಿನಾಳ

Advertisement

Udayavani is now on Telegram. Click here to join our channel and stay updated with the latest news.

Next